ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಮಾಜಿ ಕ್ರಿಕೆಟಿಗ ಮತ್ತು ಬಿಜೆಪಿ ಸಂಸದ ಗೌತಮ್ ಗಂಭೀರ್ ಒಂದು ಕೋಟಿ ರುಪಾಯಿಗಳ ಕೊಡುಗೆ ನೀಡಿದ್ದಾರೆ.
ಎಲ್ಲಾ ಭಾರತೀಯರ ಕನಸಾಗಿರುವ ಅಯೋಧ್ಯೆಯ ಅದ್ಭುತವಾದ ಮಂದಿರಕ್ಕಾಗಿ ನಾನು ಮತ್ತು ತನ್ನ ಕುಟುಂಬವು ದೇಣಿಗೆ ನೀಡಿದೆ ಎಂದು ಅವರು ಹೇಳಿದ್ದಾರೆ.
“ಅದ್ಭುತವಾದ ರಾಮ ಮಂದಿರವು ಎಲ್ಲ ಭಾರತೀಯರ ಕನಸಾಗಿದೆ. ಅಂತಿಮವಾಗಿ ದೀರ್ಘಕಾಲದ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಇದು ಏಕತೆ ಮತ್ತು ಶಾಂತಿಗೆ ದಾರಿ ಮಾಡಿಕೊಡುತ್ತದೆ. ಈ ಪ್ರಯತ್ನದಲ್ಲಿ ನನ್ನ ಮತ್ತು ನನ್ನ ಕುಟುಂಬದಿಂದ ಒಂದು ಸಣ್ಣ ಕೊಡುಗೆ ನೀಡಲಾಗಿದೆ” ಪೂರ್ವ ದೆಹಲಿ ಸಂಸದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದೆಹಲಿ ಬಿಜೆಪಿ ನಗರದಾದ್ಯಂತ ಕೂಪನ್ಗಳ ಮೂಲಕ ದೇಣಿಗೆ ಸಂಗ್ರಹಿಸುವ ಅಭಿಯಾನವನ್ನು ಪ್ರಾರಂಭಿಸಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.
“10, 100 ಮತ್ತು 1000 ರೂಗಳ ಕೂಪನ್ಗಳನ್ನು ಸಾಧ್ಯವಾದಷ್ಟು ಮನೆಗಳಿಂದ ದೇಣಿಗೆ ಸಂಗ್ರಹಿಸಲು ಬಳಸಲಾಗುತ್ತದೆ” ಎಂದು ದೆಹಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಅಭಿಯಾನದ ಸಂಯೋಜಕ ಕುಲ್ಜೀತ್ ಚಹಲ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.