ನವದೆಹಲಿ: ರೈಲ್ವೆ ಸಚಿವಾಲಯವು ಹೌರಾ ಕಲ್ಕಾ ಮೇಲ್ ರೈಲಿಗೆ ʼನೇತಾಜಿ ಎಕ್ಸ್ಪ್ರೆಸ್ʼ ಎಂದು ಮರುನಾಮಕರಣ ಮಾಡಿದೆ. ಜನವರಿ 23ರಂದು ನೇತಾಜೀ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮದಿನಾಚರಣೆ ಆಚರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಅವರ ಗೌರವಾರ್ಥ ಈ ನಾಮಕರಣ ಮಾಡಲಾಗಿದೆ.
19 ನೇ ಶತಮಾನದಲ್ಲಿ ಆರಂಭವಾದ ಭಾರತದ ವಾಣಿಜ್ಯ ಪ್ರಯಾಣಿಕ ರೈಲು ಸೇವೆಗಳಲ್ಲಿ ಒಂದಾದ ಕಲ್ಕಾ ಮೇಲ್ ಯಾವಾಗಲೂ ಹೌರಾವನ್ನು ಕಲ್ಕಾದೊಂದಿಗೆ ಸಂಪರ್ಕಿಸುವ ಸ್ಥಿರ ವೇಗ ಮತ್ತು ಜನಪ್ರಿಯತೆಯನ್ನು ಹೊಂದಿದೆ. ಬೋಸ್ 1941 ರಲ್ಲಿ ಕೋಲ್ಕತ್ತಾದ ತನ್ನ ಮನೆಯಿಂದ ತಪ್ಪಿಸಿಕೊಂಡ ನಂತರ ಬಿಹಾರದ ಗೊಮೋಹ್ನಿಂದ ಈ ರೈಲನ್ನು ಹಿಡಿದು ಹೊರಟರು ಎಂದು ಹೇಳಲಾಗಿದೆ.
ಈ ಬಗ್ಗೆ ಟ್ವಿಟ್ ಮಾಡಿರುವ ರೈಲ್ವೆ ಸಚಿವ ಪಿಯೂಶ್ ಗೋಯಲ್ ಅವರು, ‘ನೇತಾಜಿಯ ಪರಾಕ್ರಮ ಭಾರತವನ್ನು ಸ್ವಾತಂತ್ರ್ಯ ಮತ್ತು ಅಭಿವೃದ್ಧಿಯ ಸ್ಪಷ್ಟ ಹಾದಿಯಲ್ಲಿ ಇಟ್ಟಿತು’ ಎಂದಿದ್ದಾರೆ.
ಜನವರಿ 23 ರಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮ ದಿನಾಚರಣೆಯ ಆಚರಣೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾಗೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನಾಚರಣೆಯನ್ನು ಪ್ರತಿವರ್ಷ ಪರಾಕ್ರಮ್ ದಿವಸ್ ಆಗಿ ಆಚರಿಸಲು ನಿರ್ಧರಿಸಿದ್ದೇವೆ ಎಂದು ಭಾರತ ಸರ್ಕಾರ ಘೋಷಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.