ಶ್ರೀರಾಮನ ಭವ್ಯ ಮಂದಿರ ನಿರ್ಮಾಣಕ್ಕೆ ತಮ್ಮ ಶಕ್ತ್ಯಾನುಸಾರ ನಿಧಿಯನ್ನು ಎಲ್ಲರೂ ಸಮರ್ಪಿಸುತ್ತಿದ್ದಾರೆ. ಆದರೆ ಇಲ್ಲಿ ಒಬ್ಬ ಯುವಕ ಕೆಲಸ ಮಾಡಿ ರಾಮನ ಸಲುವಾಗಿ ನಿಧಿಯನ್ನು ಹೇಗೆ ಸಮರ್ಪಿಸಿದ್ದಾನೆ ಎನ್ನುವುದು ಸಹಿತ ಪ್ರೇರಣೆಯನಿಸುತ್ತದೆ.
ಹದಿನೈದು ದಿನಗಳ ಹಿಂದೆ ಸಂಘದ ಶಾಖೆಯ ಜವಾಬ್ದಾರಿ ಇರುವ ಕಾರ್ಯಕರ್ತ ನನಗೆ ಬೇಟಿಯಾಗಿ ಶ್ರೀರಾಮನ ಭವ್ಯ ಮಂದಿರದ ಬಗ್ಗೆ ಚರ್ಚಿಸುತ್ತಾನೆ. ಅಷ್ಟು ದೊಡ್ಡ ಬಜೆಟ್ನ ಮಂದಿರಕ್ಕೆ ವ್ಯಕ್ತಿಗತ ನಿಧಿ ನೀಡಿದಾಗ ಮಾತ್ರ ಅದರ ಭವ್ಯತೆ ಹೆಚ್ಚಾಗುತ್ತದೆ ಅನ್ನುವುದು ಅವನಿಗೆ ಅರ್ಥವಾಗುತ್ತದೆ. ಮನೆಯಿಂದ ಅಷ್ಟೋ ಇಷ್ಟೋ ಹಣ ಕೊಡ್ತಾರೆ. ಮನೆಯವರಿಗೆ ಇನ್ನೂ ಜಾಸ್ತಿ ನಿಧಿ ಕೊಡಿ ಅಂತ ನಾನು ಹೇಳಿದರೆ ನನಗೆ ಅಪಹಾಸ್ಯ ಮಾಡ್ತಾರೆ ಅಂತ ಆ ಯುವಕ ಯೋಚಿಸುತ್ತಾನೆ. ವೈಯಕ್ತಿಕ ನಿಧಿಗಾಗಿ ಯೋಜನೆಯೊಂದನ್ನು ರೂಪಿಸಿಕೊಂಡು ಅದರಲ್ಲಿ ಯಶಸ್ಸು ಗಳಿಸಿ ನಿಧಿ ನೀಡಿದ್ದಾನೆ.
ಹಾಗಾದರೆ ಆ ನಿರುದ್ಯೋಗಿ ಯುವಕನ ಯೋಜನೆ ಏನಾಗಿತ್ತು ? ಹೇಗೆ ಹಣ ಹೊಂದಿಸಿದ ? ಎಷ್ಟು ಹಣ ಕೂಡಿಸಿದ ? ಏನೇನು ಮಾಡಿದ ?? ಇತ್ಯಾದಿ ಪ್ರಶ್ನೆಗಳು ನಮ್ಮಲ್ಲಿ ಮೂಡುತ್ತಿರಬಹುದು. ಅದಕ್ಕೆ ಉತ್ತರವೂ ಮುಂದೆ ಇದೆ.
ಜನವರಿ 17 ರಂದು ಬಾಗಲಕೋಟೆ ನಗರದಲ್ಲಿ ನಿಧಿ ಸಮರ್ಪಣಾ ದಿನ ಇದೆ ಅದರೊಳಗೆ ಮನೆಯಲ್ಲಿ ತನಗೆ ನೀಡುವ ಹಣವನ್ನು ಕೂಡಿಸಿದರೆ ತಾನೂ ಕೊಡಬೇಕೆಂದಷ್ಟು ಹಣ ಸಿಗೊಲ್ಲ. ಬೇರೆ ಯಾರಿಗಾದರೂ ಸಾಲ ಕೇಳಿದರೆ ರಾಮನ ಮೇಲಿನ ಭಕ್ತಿಭಾವಕ್ಕಿಂತ ಸಾಲ ಮಾಡಿ ಹಣ ನೀಡುತ್ತಿದ್ದಾನೆ ಅಂತ ಬೇರೆಯವರ ಟೀಕೆಯ ಮಾತುಗಳನ್ನಾಡಿಸಿಕೊಳ್ಳಬೇಕಾಗುತ್ತದೆ ಅಂತ ನೆನಪಿಸಿಕೊಂಡ ಆದರೆ ಇವೆಲ್ಲವನ್ನೂ ಯೋಚಿಸದೆ ಯಾರಿಗೂ ಹೊರೆಯಾಗದೆ ತನ್ನ ಪಾಲಿನ, ತಾನೂ ಅಂದುಕೊಂಡಷ್ಟು ಹಣವನ್ನು ಕೂಡಿಸಲು ಒಂದೆ ಮಾರ್ಗ ಅದೇನೆಂದರೆ ತಾನು ದುಡಿದು, ತನ್ನ ಸ್ವಂತ ದುಡಿಮೆಯ ಹಣವನ್ನು ನಿಧಿಯಾಗಿ ಸಮರ್ಪಿಸಬೇಕೆಂದುಕೊಂಡ.
ಯೋಜನೆ ತಯಾರಾಯಿತು. ಅದರ ಪ್ರಕಾರ ಕನಿಷ್ಠ ಅಂದರೂ 15 ದಿನಗಳಾದರೂ ಕೆಲಸ ಮಾಡಬೇಕು. ಯಾವ ಕೆಲಸ ಮಾಡಬೇಕು? ದಿನಕ್ಕೆ ಎಷ್ಟು ಸಂಬಳ? 15 ದಿನದ ಸಲುವಾಗಿ ನನಗ್ಯಾರು ಕೆಲಸ ಕೊಡ್ತಾರೆ ಎನ್ನುವ ವಿವೇಚನೆಯಲ್ಲೆ ಎರಡು ದಿನ ಕಳೆದು ಹೋಯಿತು. ಸಂಘದ ಕಾರ್ಯಕರ್ತನಾಗಿರುವುದರಿಂದ ಅಭಿಯಾನದ ಸಂಪರ್ಕ, ಬೈಠಕ್, ಮನೆಯ ಕೆಲಸ, ಶಾಖೆ ಜೊತೆಗೆ ದುಡಿಮೆ ಎಲ್ಲವೂ ಮಾಡೋದು ಮಾತ್ರ ಕಷ್ಟ. ಆದರೆ ರಾಮನ ಸೇವೆಗೆ ಯಾರು ತಯಾರಾಗುತ್ತಾರೋ ಅವರ ಎಲ್ಲ ಕೆಲಸಗಳು ಸಹಜವಾಗುವಂತೆ ರಾಮ ನೋಡಿ ಕೊಂಡ ಅನಿಸುತ್ತದೆ.
ಅಂದುಕೊಂಡಂತೆ ಕೆಲಸವೂ ಸಿಕ್ಕಿತು. ಅದೇನು ಆಫೀಸನಲ್ಲೋ ಅಥವಾ ಇನ್ಯಾವುದೋ ಅಂಗಡಿಯಲ್ಲಿ ಬರೆದುಕೊಳ್ಳುವುದಕ್ಕೊ ಅಲ್ಲ. ಅಕ್ಷರಶಃ ಅವನಿಗೆ ಸಿಕ್ಕಿದ್ದು ಮಾತ್ರ ಗಾರೆ(ಗೌಂಡಿ) ಕೆಲಸ. ಅದು ನೆರಳಿನಲ್ಲಿ ಅಲ್ಲ ಸುಡು ಬಿಸಿಲಿನಲ್ಲಿ. ಇವಾಗ ಚಳಿಗಾಲ, ಬಿಸಿಲು ಎಲ್ಲಿರುತ್ತೆ ಅನಿಸಬಹುದು ಆದರೆ ನಮ್ಮದು ಉತ್ತರ ಕರ್ನಾಟಕ ಬೆಳಿಗ್ಗೆ ಮಾತ್ರ ಚಳಿ, ಬೆಳಿಗ್ಗೆ 10 ಗಂಟೆಯಿಂದ ಬಿಸಿಲು, ಶೆಕೆ ಶುರು. ಏನನ್ನು ಕೆಲಸ ಮಾಡದವರಿಗೆ ಅದ್ಹೇಗೆ ಒಪ್ಪುತ್ತದೆ ಆ ಕೆಲಸ. ಮನಸ್ಸು ಕಲ್ಲು ಮಾಡ್ಕೊಂಡು ರಾಮನ ಸೇವೆಗಾಗಿ ಸದಾಸಿದ್ಧ ಎಂಬ ಮಹಾದಾಸೆಯಿಂದ ಕೆಲಸ ಶುರು ಮಾಡಿದ. ಅವನ ಈ ಸಂಕಲ್ಪಕ್ಕೆ ಸಾಕ್ಷಾತ್ ಶ್ರೀರಾಮನೆ ಅನುಗ್ರಹಿಸಿ ತಾನೂ ಅನ್ಕೊಂದಷ್ಟು ಹಣವನ್ನು ಕೂಡಿಸಲು ಮನಸ್ಸು, ದೇಹವನ್ನು ಗಟ್ಟಿಗೊಳಿಸಿ ಕಳುಹಿಸಿದ ಶ್ರೀರಾಮ.
ಅನ್ಕೊಂಡಿದ್ದ ಹಣವನ್ನು ಅಂದುಕೊಂಡಿದ್ದಕ್ಕಿಂತ ಕಡಿಮೆ ಸಮಯದಲ್ಲಿಯೇ ದುಡಿಯಲು ಯಾವುದೋ ರೂಪದಲ್ಲಿ ಶ್ರೀರಾಮ ಸಹಾಯ ಮಾಡಿದ್ದ. ಗಾರೆ ಕೆಲಸವಷ್ಟೆಯಲ್ಲ, ಮನೆ ಸ್ವಚ್ಛ, ಮನೆಗೆ ಸುಣ್ಣ ಬಣ್ಣ ಹಚ್ಚುವ ಕೆಲಸವನ್ನು ಮಾಡಿ ಹಣ ಕೂಡಿಸಿದ. ಬೈಠಕ್, ಸಂಪರ್ಕ, ಶಾಖೆ, ಮನೆಯ ಕೆಲಸ ಯಾವುದನ್ನು ತಪ್ಪಿಸದೇ ದುಡಿಮೆ ಮಾಡಿರೋದು ಮಾತ್ರ ವಿಶೇಷ. ಈ ತರಹ ಯುವಕರಿಗೆ ತಮ್ಮ ಸ್ವಂತ ದುಡಿಮೆಯ ಹಣವನ್ನೇ ನೀಡಬೇಕೆನ್ನುವ ಮನಸ್ಸುಗಳು ಸಿಗೋದು ಮಾತ್ರ ವಿರಳ.
ಇಷ್ಟೇ ಅಲ್ಲದೇ ಶ್ರೀರಾಮ ನಿಧಿ ಸಮರ್ಪಣಾ ಅಭಿಯಾನದ ಸಲುವಾಗಿ ಅಭಿಯಾನ ಮುಗಿಯುವವರೆಗೂ ಶ್ರೀರಾಮನ ಸಲುವಾಗಿ ಪೂರ್ತಿ ಸಮಯ ಕೊಡ್ತಿನಿ ಅಂತಾನು ವಾಗ್ದಾನ ಮಾಡಿಕೊಂಡಿದ್ದಾನೆ. ಹಿಂದೆನೂ ಅಭಿಯಾನಕ್ಕಾಗಿ ಸಾಕಷ್ಟು ಸಮಯ ಕೊಟ್ಟೆ ದುಡಿಮೆ ಮಾಡಿದ್ದಾನೆ. ಸಂಘದ ಕಾರ್ಯಕರ್ತರು ಮನೆಗೆ, ದೇಶಕ್ಕೆ ನಿರುಪಯುಕ್ತ ಅನ್ನುವ ಮಾತಿಗೆ ಈ ಯುವಕ ಮಾತ್ರ ದೇಶದ ಕೆಲಸಕ್ಕೆ ಉಪಯುಕ್ತ ಅಂತ ತೊರಿಸಿಕೊಟ್ಟಿದ್ದಾನೆ. ಮನೆಗಿಂತ ದೇಶ ದೊಡ್ಡದು ಅನ್ನುವ ಕಲ್ಪನೆ ಮಾತ್ರ ಬರೋದು ಸಂಘದ ಸಂಸ್ಕಾರದಿಂದ. ಆ ಸಂಸ್ಕಾರವೇ ಇವನನ್ನು ದೇಶದ, ರಾಮನ ಪರವಾಗಿ ಯೋಚಿಸಲು ಹಚ್ಚಿ, ಯಶಸ್ಸು ಕೂಡ ತಂದು ಕೊಟ್ಟಿತು.
ಉಳಿದವರಿಗೆ ಇದು ಹೆಮ್ಮೆ ಅನಿಸುತ್ತದೆಯೋ ಇಲ್ವೋ ಗೊತ್ತಿಲ್ಲ, ಅವನಿಗೆ ಮಾತ್ರ ತೃಪ್ತಿಕರವಾಗಿದೆ. ಇವತ್ತು ಅಭಿಯಾನದ ಪೂರ್ತಿ ಅವನ ಸ್ಪೂರ್ತಿ, ತೃಪ್ತಿದಾಯಕನಾಗಿದ್ದು ಗಮನಿಸಿದ್ದೆ. ಸಂಘ ಸಂಸ್ಕಾರದಿಂದ ಎಲ್ಲವೂ ಸಾಧ್ಯ ಎನ್ನುವುದಕ್ಕೆ ಇದೊಂದು ಸತ್ಯ ನಿದರ್ಶನ. ಅವನು ಸಂಘದ ಕಾರ್ಯಕರ್ತನಾಗಿರುವುದರಿಂದ ಅವನು ಪೋಟೋ ಪ್ರೀಯನಲ್ಲ, ಅವನ ಪೋಟೋ ಪೋಸ್ಟ ಮಾಡಿದರೆ ಬೈಸ್ಕೊಳ್ಳಬೇಕಾಗುತ್ತದೆ ಅಂತ ಅವನ ಪೋಟೋ ಹಾಕಿಲ್ಲ. ಈ ತರಹ ವಿಚಿತ್ರವಾದ ವಿಶೇಷತೆ ಅನಿಸುವ ಈ ಸಹೃದಯಿಗಳನ್ನು ಸಂಘದ ಕಾರ್ಯಕರ್ತನಾಗಿರೋದು ಸಂಘಕ್ಕೆ ಆಸ್ತಿ. ಮುಂದೆ ಶ್ರೀರಾಮನ ಅನುಗ್ರಹದಿಂದ ಅವನ ಕಷ್ಟಗಳು ತೊಲಗಿ, ಇನ್ನಷ್ಟು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳಲಿ ಎನ್ನುವ ಅಪೇಕ್ಷೆಯೊಂದಿಗೆ.
ರಾಮನಿಗಾಗಿ ನಿಧಿ ಸಮರ್ಪಿಸಲು ಗಾರೆ ಕೆಲಸ ಮಾಡಿ ಸಂಪಾದನೆ ಮಾಡಿದ ಬಾಗಲಕೋಟೆಯ ಸಂಘದ ಯುವಕ ನಿಜಕ್ಕೂ ಪ್ರೇರಣೆ. ರಾಮ ಮಂದಿರದ ಕನಸು ಹೊತ್ತ ರಾಮನ ಅನುಯಾಯಿಗಳಿಂದ ಯಾವುದೂ ಅಸಾಧ್ಯವಾದ ವಿಚಾರವೇ ಇಲ್ಲ ಎಂಬುದಕ್ಕೆ ಬಾಗಲಕೋಟೆಯ ಯುವಕ ಸಾಕ್ಷಿಯಾಗಿದ್ದಾನೆ. ದುಡಿಮೆಯ ಮೂಲಕವೇ ರಾಮನನ್ನು ಕಂಡ, ಪ್ರತಿಫಲವನ್ನೆಲ್ಲಾ ರಾಮನಿಗರ್ಪಿಸಿದ ಈ ಯುವಕ ಮತ್ತು ಅವನಂತಹ ಅನೇಕ ಕಾರ್ಯಕರ್ತರು ಸಂಘದ ಆಸ್ತಿ ಎಂದರೂ ತಪ್ಪಾಗಲಾರದು.
✍️ ಸುರೇಶ ಮಾಗಿ, ಬಾಗಲಕೋಟೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.