ನವದೆಹಲಿ: ತಾನು ನೀಡಿದ ಭರವಸೆಯನ್ನು ಈಡೇರಿಸಿರುವ ಭಾರತ, ಇರಾನ್ನ ಚಬಹಾರ್ ಬಂದರಿಗೆ 2 ಮೊಬೈಲ್ ಹಾರ್ಬರ್ ಕ್ರೇನ್ಸ್ ಸೇರಿದಂತೆ ಭಾರೀ ಉಪಕರಣಗಳ ಬಹುನಿರೀಕ್ಷಿತ ಸರಕನ್ನು ಪೂರೈಕೆ ಮಾಡಿದೆ. ಇಟಲಿಯ ಮಾರ್ಗೇರಾ ಬಂದರಿನಿಂದ ಬಂದ ಕ್ರೇನ್ಗಳ ಸರಕನ್ನು ಸೋಮವಾರ ಚಬಹಾರ್ ಬಂದರಿನಲ್ಲಿ ಯಶಸ್ವಿಯಾಗಿ ಇಳಿಸಲಾಗಿದೆ.
ಆರು ಎಂಎಚ್ಸಿಗಳ ಪೂರೈಕೆಗಾಗಿನ ಒಪ್ಪಂದದಡಿಯಲ್ಲಿ ಒಟ್ಟು 25 ಮಿಲಿಯನ್ ಡಾಲರ್ಗಳಿಗಿಂತ ಹೆಚ್ಚಿನ ಮೊತ್ತದ 140 ಟನ್ಗಳಷ್ಟು ಭಾರದ ಎರಡು ಮೊಬೈಲ್ ಹಾರ್ಬರ್ ಕ್ರೇನ್ಗಳನ್ನು ಭಾರತ ಪೂರೈಕೆ ಮಾಡಿದೆ.
ಇಟಾಲ್ಗ್ರು ಎಂಬ ಇಟಾಲಿಯನ್ ಕಂಪನಿಯ ಮೂಲಕ ಭಾರತ ಕ್ರೇನ್ಗಳನ್ನು ಪೂರೈಸಿದೆ. ಕ್ರೇನ್ಗಳು ಪ್ರಸ್ತುತ ಪ್ರಾಯೋಗಿಕ ಚಾಲನೆಯಲ್ಲಿವೆ. 140 ಮೆಟ್ರಿಕ್ ಟನ್ ಎತ್ತುವ ಸಾಮರ್ಥ್ಯದೊಂದಿಗೆ, ಮೊಬೈಲ್ ಹಾರ್ಬರ್ ಕ್ರೇನ್ಸ್ (ಎಂಎಚ್ಸಿ) ನಂತಹ ವಿವಿಧೋದ್ದೇಶ ಉಪಕರಣಗಳು ಮತ್ತು ಬಿಡಿಭಾಗಗಳು ಇಂಡಿಯಾ ಪೋರ್ಟ್ಸ್ ಗ್ಲೋಬಲ್ ಲಿಮಿಟೆಡ್ (ಐಪಿಜಿಎಲ್) ಗೆ ಚಹಹಾರ್ನ ಶಾಹಿದ್ ಬೆಹೆಸ್ತಿ ಬಂದರಿಗೆ ಕಂಟೈನರ್, ಬಲ್ಕ್ ಮತ್ತು ಜನರಲ್ ಕಾರ್ಗೋಗಳಿಗೆ ತಡೆರಹಿತ ಸೇವೆಗಳನ್ನು ಒದಗಿಸಲು ಅನುವು ಮಾಡಿಕೊಡುತ್ತದೆ.
ಚಬಹಾರ್ ಬಂದರಿನ ಮೂಲಸೌಕರ್ಯ ಅಭಿವೃದ್ಧಿಗೆ ಭಾರತದ ಬದ್ಧತೆಗೆ ಇದು ಮೊದಲ ಹೆಜ್ಜೆಯಾಗಿದೆ. ಇರಾನ್ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ಒಪ್ಪಂದಕ್ಕೆ ಮೇ 23, 2016 ರಂದು ಸಹಿ ಹಾಕಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.