ನವದೆಹಲಿ: ಗಡಿ ರಸ್ತೆಗಳ ಸಂಸ್ಥೆ (ಬಿಆರ್ಒ) ಕೊರೆಯುವ ಚಳಿಯ ನಡುವೆಯೂ ಪೂರ್ವ ಲಡಾಕ್ನಲ್ಲಿ ಹಿಮ ತೆರವು ಕಾರ್ಯಾಚರಣೆ ನಡೆಸುತ್ತಿದೆ.
ಸುದ್ದಿ ಸಂಸ್ಥೆ ಎಎನ್ಐ ಟ್ವೀಟ್ ಮಾಡಿದ ವೀಡಿಯೊದಲ್ಲಿ, ರಸ್ತೆಯ ಮೇಲೆ ರಾಶಿ ಬಿದ್ದಿರುವ ಹಿಮವನ್ನು ಬಿಆರ್ಒ ಸಿಬ್ಬಂದಿ ತೆರವುಗೊಳಿಸುವುದನ್ನು ಕಾಣಬಹುದಾಗಿದೆ. ಕಾರ್ಯತಾಂತ್ರಿಕವಾಗಿ ಮಹತ್ವದ್ದಾಗಿರುವ ರಸ್ತೆಗಳನ್ನು ಮತ್ತು ಹಾದಿಗಳನ್ನು ಮುಕ್ತವಾಗಿಡಲು ಹಿಮವನ್ನು ತೆರವುಗೊಳಿಸುವುದು ಅತ್ಯಗತ್ಯ, ಅದರಲ್ಲೂ ವಿಶೇಷವಾಗಿ ಪೂರ್ವ ಲಡಾಕ್ನಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯ ಹತ್ತಿರದಲ್ಲಿದೆ. ಹೀಗಾಗಿ ರಸ್ತೆ ಸಂಚಾರ ಮುಕ್ತವಾಗಿರುವುದು ಅನಿವಾರ್ಯ.
ಆಯಕಟ್ಟಿನ ಪ್ರದೇಶಗಳಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಮೂಲಕ ಗಡಿಗಳನ್ನು ಭದ್ರಪಡಿಸಿಕೊಳ್ಳಲು 1960 ರಲ್ಲಿ BRO ಅನ್ನು ಸ್ಥಾಪಿಸಲಾಯಿತು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಸೇರಿದಂತೆ 19 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಿಆರ್ಒ ಕಾರ್ಯನಿರ್ವಹಿಸುತ್ತದೆ. ಇದು ಭಾರತದ ನೆರೆಹೊರೆಯ ಭೂತಾನ್, ಶ್ರೀಲಂಕಾ ಮತ್ತು ಮಯನ್ಮಾರ್ಗಳಲ್ಲಿ ಕೂಡ ಅಸ್ತಿತ್ವದಲ್ಲಿದೆ.
#WATCH: Border Roads Organisation (BRO) carries out snow clearance operation amid freezing temperature, to keep strategic roads and passes open in Eastern Ladakh.
(Video Source: Border Roads Organisation) pic.twitter.com/kjdSIhRuii
— ANI (@ANI) January 12, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.