ನವದೆಹಲಿ: 3,800 ಕೋಟಿ ರೂ.ಗಳ ಒಪ್ಪಂದದ ಭಾಗವಾಗಿ ಅಮೆರಿಕದ ನೌಕಾಪಡೆಯು ಭಾರತೀಯ ನೌಕಾಪಡೆಗೆ ಮೂರು 127 ಮೀಡಿಯಂ ಕ್ಯಾಲಿಬರ್ ಗನ್ಗಳನ್ನು ಪೂರೈಕೆ ಮಾಡಲಿದೆ.
ಭಾರತೀಯ ನೌಕಾಪಡೆಯ ಯುದ್ಧನೌಕೆಗಳಲ್ಲಿ ತುರ್ತು ನಿಯೋಜನೆಗಾಗಿ ಯುಎಸ್ ನೌಕಾಪಡೆಯು ತನ್ನದೇ ಆದ ದಾಸ್ತಾನುಗಳಿಂದ ಮೂರು 127 ಮಧ್ಯಮ ಕ್ಯಾಲಿಬರ್ ಬಂದೂಕುಗಳನ್ನು ಪೂರೈಸಲು ಸಜ್ಜಾಗಿದೆ ಎಂದು ಮೂಲಗಳು ವರದಿ ಮಾಡಿವೆ.
ಈ ಹಿಂದೆ, ಭಾರತೀಯ ನೌಕಾಪಡೆಯ ವಿಶಾಖಪಟ್ಟಣಂ-ವರ್ಗದ ಡೆಸ್ಟ್ರಾಯರ್ ಸೇರಿದಂತೆ ಭಾರತೀಯ ನೌಕಾಪಡೆಯ ದೊಡ್ಡ ಗಾತ್ರದ ಯುದ್ಧನೌಕೆಗಳಿಗಾಗಿ ಹನ್ನೊಂದು ‘127 ಮಧ್ಯಮ ಕ್ಯಾಲಿಬರ್ ಗನ್’ಗಳನ್ನು ಖರೀಸಲು ಭಾರತವು ಮನವಿ ಪತ್ರವನ್ನು ನೀಡಿತ್ತು.
ವರದಿಯ ಪ್ರಕಾರ, ಭಾರತೀಯ ಯುದ್ಧನೌಕೆಗಳನ್ನು ಶೀಘ್ರವಾಗಿ ಸಜ್ಜುಗೊಳಿಸಲು ಅಮೆರಿಕದ ನೌಕಾಪಡೆಯ ದಾಸ್ತಾನುಗಳಿಂದ ಮೊದಲ ಮೂರು ಬಂದೂಕುಗಳನ್ನು ತಲುಪಿಸಲಾಗುತ್ತಿದೆ. ಯುಎಸ್ನಲ್ಲಿ ಹೊಸ ಬಂದೂಕುಗಳ ಉತ್ಪಾದನೆ ಪ್ರಾರಂಭವಾದ ನಂತರ ಈ ಮೂರು ಬಂದೂಕುಗಳನ್ನು ಬದಲಾಯಿಸಲಾಗುತ್ತಿದೆ ಮತ್ತು ಅವುಗಳನ್ನು ಭಾರತೀಯ ನೌಕಾಪಡೆಗೆ ತಲುಪಿಸಲಾಗುತ್ತಿದೆ.
ಈ ಮಧ್ಯಮ ಕ್ಯಾಲಿಬರ್ ಬಂದೂಕುಗಳು ಭಾರತೀಯ ನೌಕಾಪಡೆಯ ಇದೇ ವರ್ಗದ ಅಸ್ತಿತ್ವದಲ್ಲಿರುವ ಶಸ್ತ್ರಾಸ್ತ್ರಗಳ ಅಪ್ಗ್ರೇಡ್ ಎಂದು ನಂಬಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.