ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ತಮ್ಮ ಆತ್ಮಚರಿತ್ರೆ ʼಪ್ರೆಸಿಡೆನ್ಶಿಯಲ್ ಇಯರ್ಸ್, 2012-2017ʼರಲ್ಲಿ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಸ್ಥಾನವನ್ನು ಸಾಧಿಸಿದರೆ, ಕಾಂಗ್ರೆಸ್ ಮುಖ್ಯಸ್ಥ ಮನಮೋಹನ್ ಸಿಂಗ್ ಅವರಿಗೆ ಪಕ್ಷವು ಆ ಹುದ್ದೆಯನ್ನು ನೀಡಿತೇ ಹೊರತು ಅವರು ಅದನ್ನು ಸಾಧಿಸಿದ್ದಲ್ಲ ಎಂದು ಹೇಳಿದ್ದಾರೆ.
ದಿವಂಗತ ಮಾಜಿ ರಾಷ್ಟ್ರಪತಿಗಳು ತಮ್ಮ ಆತ್ಮಚರಿತ್ರೆಯಲ್ಲಿ ಇಬ್ಬರು ಪ್ರಧಾನ ಮಂತ್ರಿಗಳ ಹೋಲಿಕೆ ಮಾಡುವಾಗ ಇದನ್ನು ಬರೆದಿದ್ದಾರೆ. ಮುಖರ್ಜಿ ಅವರು ತಮ್ಮ ಆತ್ಮಚರಿತ್ರೆ “ದಿ ಪ್ರೆಸಿಡೆನ್ಶಿಯಲ್ ಇಯರ್ಸ್, 2012-2017” ಅನ್ನು ಕಳೆದ ವರ್ಷ ಅವರ ಸಾವಿಗೂ ಮೊದಲು ಬರೆದಿದ್ದರು. ಪುಸ್ತಕ ಮಂಗಳವಾರ ಬಿಡುಗಡೆಯಾಗಿದೆ.
ತಾನು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಬಹಳ ಸೌಹಾರ್ದಯುತ ಸಂಬಂಧವನ್ನು ಹಂಚಿಕೊಂಡಿರುವುದಾಗಿ ಪ್ರಣವ್ ಉಲ್ಲೇಖಿಸಿದ್ದಾರೆ. “ಸ್ವಾತಂತ್ರ್ಯದ ನಂತರ ಭಾರತದ ಹಲವಾರು ಪ್ರಧಾನ ಮಂತ್ರಿಗಳೊಂದಿಗೆ ಸಂವಹನ ನಡೆಸುವ ಮತ್ತು ಅಧ್ಯಯನ ಮಾಡುವ ಅದೃಷ್ಟವನ್ನು ನಾನು ಹೊಂದಿದ್ದೇನೆ. ನಡವಳಿಕೆ, ವರ್ಚಸ್ಸು, ಶೈಲಿ ಮತ್ತು ಆಡಳಿತದ ವಿಧಾನದಲ್ಲಿ ಅವರು ವಿಭಿನ್ನವಾಗಿದ್ದಾರೆ. ಅವರು ವಿಭಿನ್ನ ಸಾಮಾಜಿಕ-ಆರ್ಥಿಕ ಹಿನ್ನೆಲೆಯಿಂದ ಬಂದವರು ಮತ್ತು ಅವರಲ್ಲಿ ಕೆಲವರು ವ್ಯಾಪಕವಾಗಿ ವಿಭಿನ್ನ ರಾಜಕೀಯ ಸಿದ್ಧಾಂತಗಳಿಗೆ ಬದ್ದರಾಗಿದ್ದಾರೆ” ಎಂದು ಅವರು ಹೇಳಿದ್ದಾರೆ.
ತನ್ನ ಪಕ್ಷದ ಬಗ್ಗೆಯೂ ಪ್ರಣಬ್ ಟೀಕಿಸುತ್ತಿದ್ದಾರೆ ಮತ್ತು 2014 ರ ಲೋಕಸಭಾ ಚುನಾವಣೆಯ ಸೋಲಿಗೆ ಕಾಂಗ್ರೆಸ್ ತನ್ನ ವರ್ಚಸ್ವಿ ನಾಯಕತ್ವವನ್ನು ಗುರುತಿಸುವಲ್ಲಿ ವಿಫಲವಾಗಿದ್ದು ಕಾರಣ ಎಂದು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.