ನವದೆಹಲಿ: 1901ರ ಬಳಿಕ 2020 ಎಂಟನೇ ಅತೀ ಬೆಚ್ಚಗಿನ ವರ್ಷ ಎಂದು ಹವಮಾನ ಇಲಾಖೆ ಹೇಳಿದೆ. 2016ಕ್ಕಿಂತಲೂ 2020ರಲ್ಲಿ ಅತಿ ಹೆಚ್ಚು ಬೆಚ್ಚಗಿನ ವಾತಾವರಣವಿತ್ತು ಎಂದು ಮಾಹಿತಿ ನೀಡಿದೆ.
2020ರ ವರ್ಷದಲ್ಲಿ, ದೇಶದಲ್ಲಿ ಸರಾಸರಿ ಭೂ ಮೇಲ್ಮೈಗಾಳಿಯ ಉಷ್ಣತೆಯು ಸಾಮಾನ್ಯಕ್ಕಿಂತ 0.29 ಡಿಗ್ರಿ ಸೆಲ್ಸಿಯಸ್ನಷ್ಟು ಇತ್ತು.
15 ಬೆಚ್ಚಗಿನ ವರ್ಷಗಳ ಪೈಕಿ 12 ಬೆಚ್ಚಗಿನ ವರ್ಷ 2006ರಿಂದ 2020ರ ನಡುವೆಯೆ ಇದೆ ಎಂದು ಹವಮಾನ ಇಲಾಖೆ ತಿಳಿಸಿದೆ.
ಕಳೆದ ದಶಕ ದಾಖಲೆಯ ಬೆಚ್ಚಗಿನ ದಶಕವಾಗಿದೆ. ನೈರುತ್ಯ ಮಾನ್ಸೂನ್ ಋತುವಿನಲ್ಲಿ ಒಟ್ಟಾರೆಯಾಗಿ ದೇಶದಲ್ಲಿ ಮಳೆ ಸಾಮಾನ್ಯಕ್ಕಿಂತ ಹೆಚ್ಚಾಗಿತ್ತು ಎಂದು ತಿಳಿಸಿದೆ.
2020 ರಲ್ಲಿ, ಉತ್ತರ ಹಿಂದೂ ಮಹಾಸಾಗರದ ಮೇಲೆ ಐದು ಚಂಡಮಾರುತಗಳು ರೂಪುಗೊಂಡವು. ಅವುಗಳೆಂದರೆ ಸೂಪರ್ ಸೈಕ್ಲೋನಿಕ್ ಸ್ಟಾರ್ಮ್ ಅಂಫಾನ್, ಅತ್ಯಂತ ತೀವ್ರವಾದ ನಿವಾರ್ ಮತ್ತು GATI, ನಿಸರ್ಗ, BUREVI.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.