2024 ಕ್ಕೆ ಮುಂದಿನ ಸಾರ್ವತ್ರಿಕ ಚುನಾವಣೆ ನಡೆಯಲಿದೆ, ಇದಕ್ಕೆ ಇನ್ನೂ ಮೂರು ವರ್ಷಗಳು ಇದೆ. ಆದರೆ ಬಿಜೆಪಿ ಈಗಾಗಲೇ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಅನ್ನು ಸಂಪೂರ್ಣವಾಗಿ ಕುಗ್ಗಿಸುವ ಸಿದ್ಧತೆಗಳನ್ನು ಪ್ರಾರಂಭಿಸಿದೆ. ರಾಜಕೀಯವಾಗಿ ದೇಶದ ಅತ್ಯಂತ ಮಹತ್ವದ ರಾಜ್ಯದಲ್ಲಿ ಯಾವುದೇ ಚುನಾವಣಾ ಮಹತ್ವವನ್ನು ಪಡೆಯಲು ಹಳೆಯ ಪಕ್ಷ ವಿಫಲವಾಗಿದೆ. 2019ರಲ್ಲಿಅದಕ್ಕೆ ಅಲ್ಲಿ ಸಿಕ್ಕಿದ್ದು ಕೇವಲ ಒಂದು ಲೋಕಸಭಾ ಸ್ಥಾನ. ಉತ್ತರಪ್ರದೇಶದ ರಾಯ್ಬರೇಲಿಯ ಕಾಂಗ್ರೆಸ್ ಭದ್ರಕೋಟೆಯನ್ನು ಛಿದ್ರ ಮಾಡಲು ಈಗಾಗಲೇ ಬಿಜೆಪಿ ಸಿದ್ಧತೆ ಆರಂಭಿಸಿದೆ, ಪ್ರಸ್ತುತ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಇಲ್ಲಿನ ಸಂಸದೆಯಾಗಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಸಂಪೂರ್ಣ ನಿಯಂತ್ರಣವನ್ನು ಪಡೆಯಲು ಬಿಜೆಪಿಯು ಕೇಂದ್ರ ಜವಳಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಸ್ಮೃತಿ ಇರಾನಿಗೆ ಜವಾಬ್ದಾರಿಯನ್ನು ನೀಡಿದೆ. ಈ ಪ್ರದೇಶಕ್ಕೆ ಅವರು ಹೆಚ್ಚು ಹೆಚ್ಚು ಮಾಡುತ್ತಿರುವುದರಿಂದ ಈ ಸಂಕಲ್ಪವು ಸ್ಪಷ್ಟವಾಗಿ ಕಂಡುಬರುತ್ತದೆ. ಮುಂದಿನ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಅಥವಾ ಇತರ ಯಾವುದೇ ಗಾಂಧಿ ಕುಟುಂಬ ಸದಸ್ಯರ ಹಿಡಿತದಿಂದ ರಾಯ್ಬರೇಲಿಯನ್ನು ಮುಕ್ತಗೊಳಿಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದ್ದು, ಇದಕ್ಕಾಗಿ ಅಲ್ಲಿನ ಜನರ ಕಷ್ಟಗಳನ್ನು ಪರಿಹರಿಸುವ ಮೂಲಕ ತಾನೇ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುತ್ತಿದೆ.
ವರದಿಗಳ ಪ್ರಕಾರ, ಸ್ಮೃತಿ ಇರಾನಿ ಡಿಸೆಂಬರ್ 25 ರಂದು ಅಮೆಥಿ ತಲುಪಿದ್ದು, ಈ ಸಮಯದಲ್ಲಿ, ಅವರು ಸಲೂನ್ ಹಳ್ಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಲೂನ್ ಅಮೆಥಿ ಸಂಸದೀಯ ಕ್ಷೇತ್ರದ ಭಾಗವಾಗಿದ್ದರೂ, ಅದು ರಾಯ್ಬರೇಲಿ ಜಿಲ್ಲೆಯ ವ್ಯಾಪ್ತಿಗೆ ಬರುತ್ತದೆ ಎಂಬುದು ಗಮನಿಸಬೇಕಾದ ಸಂಗತಿ.
ಕುತೂಹಲವೆಂದರೆ, ಈ ಸಮಯದಲ್ಲಿ ಇರಾನಿ ವಿಐಪಿ ಪ್ರದೇಶದಲ್ಲಿ ಕುಳಿತುಕೊಳ್ಳಲಿಲ್ಲ, ಬದಲಾಗಿ, ಸಮಸ್ಯೆಗಳನ್ನು ಚರ್ಚಿಸಲು, ಮಾತುಕತೆ ನಡೆಸಲು ಮಹಿಳೆಯರೊಂದಿಗೆ ಕುಳಿತುಕೊಂಡಿದ್ದರು. ನಂತರ ಅವರು ಮಹಿಳೆಯರ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು. 2019 ರಲ್ಲಿ ಅಮೇತಿ ಸಂಸದರಾದ ನಂತರ ಸ್ಮೃತಿ ಇರಾನಿ ಇದು ಸಲೂನ್ಗೆ ಭೇಟಿ ನೀಡುತ್ತಿರುವುದು ನಾಲ್ಕನೇ ಬಾರಿ. ನಿರಂತರವಾಗಿ ರಾಯ್ಬರೇಲಿಯ ಈ ಪ್ರದೇಶಗಳಿಗೆ ಭೇಟಿ ನೀಡಿ ಜನರನ್ನು ಭೇಟಿಯಾಗುವುದು ಮುಂಬರುವ ಚುನಾವಣೆಗಳಲ್ಲಿ ಉತ್ತಮ ರಾಜಕೀಯ ಭವಿಷ್ಯವನ್ನು ಖಾತ್ರಿಪಡಿಸಿಕೊಳ್ಳುವಲ್ಲಿ ಬಹಳ ದೂರ ಸಾಗುತ್ತದೆ ಎಂಬುದರಲ್ಲಿ ಅನುಮಾನವಿಲ್ಲ.
ಈ ಹಿಂದೆ ಅಕ್ಟೋಬರ್ 20 ರಂದು ಸಲೂನ್ಗೆ ಭೇಟಿ ನೀಡಿದ್ದ ಸಮಯದಲ್ಲಿ, ಇರಾನಿ ಅಮೇಥಿಯಲ್ಲಿ ಅಭಿವೃದ್ಧಿ ಯೋಜನೆಗಳನ್ನು ಪರಿಶೀಲಿಸಿದ್ದರು ಮತ್ತು ಉದ್ಘಾಟಿಸಿದ್ದರು. ಮುಂದಿನ ಚುನಾವಣೆಗಳಲ್ಲಿ ರಾಯ್ಬರೇಲಿಯಲ್ಲಿ ಬಿಜೆಪಿ ವಿಜಯಶಾಲಿಯಾಗಬೇಕೆಂಬ ಉದ್ದೇಶವನ್ನು ಹೊಂದಿರುವ ಅವರು, “ರಾಜಕೀಯ ಪಕ್ಷದ ಮುಖ್ಯಸ್ಥರ ಕುಟುಂಬವು ಅಮೆಥಿ-ರಾಯ್ಬರೇಲಿಯಲ್ಲಿ ತಮ್ಮ ರಾಜಕೀಯವನ್ನು ಮಾಡುತ್ತಿತ್ತು. ಈ ಕುಟುಂಬವು ಜನರಿಂದ ಮತಗಳನ್ನು ಪಡೆದರೂ ಪ್ರದೇಶದ ಅಭಿವೃದ್ಧಿಗೆ ಏನೂ ಮಾಡಲಿಲ್ಲ. ಬದಲಾವಣೆಗಾಗಿ 2019 ರ ಲೋಕಸಭಾ ಚುನಾವಣೆಯಲ್ಲಿ ಜನರು ಬಿಜೆಪಿಗೆ ಮತ ಹಾಕಿದರು” ಎಂದಿದ್ದಾರೆ.
ಇರಾನಿ 2019 ರ ಲೋಕಸಭಾ ಚುನಾವಣೆಯಲ್ಲಿ ಶ್ಲಾಘನೀಯ ಜಯ ಸಾಧಿಸಿದ್ದರು. ಉತ್ತಮ ಆಡಳಿತದ ಭರವಸೆ, ಜನರ ಪ್ರಸ್ತುತತೆಯನ್ನು ಗುರುತಿಸಿ ಮತ್ತು ಅಭಿವೃದ್ಧಿಯ ಬೆಳವಣಿಗೆಯನ್ನು ನೀಡುವ ಒಂದು ಸಂಯೋಜಿತ ಶಕ್ತಿಯ ಮೂಲಕ ಸ್ಮೃತಿ ಇರಾನಿ ರಾಹುಲ್ ಗಾಂಧಿಯನ್ನು ಸೋಲಿಸಿದರು ಮತ್ತು ಸಾಂಪ್ರದಾಯಿಕ ಗಾಂಧಿ ಭದ್ರಕೋಟೆಯಾದ ಅಮೆಥಿಯಲ್ಲಿ ಜನರ ಮನಸ್ಸು ಗೆದ್ದಿದ್ದರು.
ಸ್ಮೃತಿ ಇರಾನಿಯ ಹೊರತಾಗಿ, ಬಿಜೆಪಿ ಇತರ ದಿಗ್ಗಜ ನಾಯಕರನ್ನು ರಾಯ್ಬರೇಲಿಗೆ ಸ್ಥಳಾಂತರಿಸಲು ಯೋಜಿಸಿದೆ. ಪಕ್ಷವು ಕ್ಷೇತ್ರದ ಉಸ್ತುವಾರಿಯನ್ನು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ದಿನೇಶ್ ಶರ್ಮಾ ಅವರಿಗೆ ನೀಡಿದ್ದು, ಇದು ಸಾಂಪ್ರದಾಯಿಕ ಕಾಂಗ್ರೆಸ್ ಭದ್ರಕೋಟೆಯನ್ನು ಛಿದ್ರ ಮಾಡುವ ಬಗ್ಗೆ ಬಿಜೆಪಿಯ ಗಂಭೀರತೆಯನ್ನು ಸೂಚಿಸುತ್ತದೆ.
ಇದಲ್ಲದೆ, ರಾಯ್ಬರೇಲಿಯ ಹರ್ಚಂದ್ಪುರ ವಿಧಾನಸಭಾ ಸ್ಥಾನದ ಕಾಂಗ್ರೆಸ್ ಶಾಸಕ, ರಾಯ್ಬರೇಲಿಯ ಸದರ್ ವಿಧಾನಸಭಾ ಸ್ಥಾನದ ಕಾಂಗ್ರೆಸ್ ಶಾಸಕ ರಾಕೇಶ್ ಸಿಂಗ್ ಮತ್ತು ಶಾಸಕಿ ಅದಿತಿ ಸಿಂಗ್ ಅವರು ಪಕ್ಷದ ವಿರುದ್ಧ ದಂಗೆ ಎದ್ದಿದ್ದಾರೆ ಮತ್ತು ಬಿಜೆಪಿ ಪರವಾಗಿ ಹೇಳಿಕೆಗಳನ್ನು ನೀಡಿದ್ದಾರೆ. ಈ ಪ್ರದೇಶದಲ್ಲಿ ಪಕ್ಷದ ಧ್ವಜವನ್ನು ಎತ್ತಬಲ್ಲ ಇತರ ವಿಶ್ವಾಸಾರ್ಹ ನಾಯಕರು ಇಲ್ಲದಿರುವುದರಿಂದ ಕಾಂಗ್ರೆಸ್ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ.
ಸೋನಿಯಾ ಗಾಂಧಿ ನಿವೃತ್ತಿಯ ಹಾದಿಯಲ್ಲಿದ್ದಾರೆ. ಈ ಬಾರಿ ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ವ್ಯಾಪಕವಾಗಿ ನಂಬಲಾಗಿದೆ, ಆದರೆ ಮಗಳು ಪ್ರಿಯಾಂಕಾ ಗಾಂಧಿ ರಾಯ್ಬರೇಲಿಯ ಕುಟುಂಬದ ಭದ್ರಕೋಟೆಯ ನೇತೃತ್ವ ವಹಿಸಿಕೊಳ್ಳಲಿದ್ದಾರೆ ಎಂಬ ವದಂತಿ ಇದೆ. ಇದಕ್ಕಾಗಿ ಅವರು ಉತ್ತರಪ್ರದೇಶ ರಾಜ್ಯದಲ್ಲಿ ಕಾಂಗ್ರೆಸ್ ಮುಖವಾಗಲು ಕೆಲಸ ಮಾಡುತ್ತಿದ್ದಾರೆ. ರಾಹುಲ್ ಗಾಂಧಿಯವರ ನಾಯಕತ್ವಕ್ಕೆ ಉತ್ತಮ ಪರ್ಯಾಯವೆಂದು ಕೆಲವರು ಪ್ರಿಯಾಂಕರನ್ನು ಮೇಲಿಟ್ಟರೂ, ತಳಮಟ್ಟದ ನಾಯಕತ್ವವು ಗಂಭೀರವಾಗಿ ಕೊರತೆಯಿಂದ ನರಳುತ್ತಿದೆ ಎಂಬುದು ಸತ್ಯ.
ಇಂತಹ ಪರಿಸ್ಥಿತಿಯಲ್ಲಿ, ಸ್ಮೃತಿ ಅವರ ನೇತೃತ್ವದಲ್ಲಿ ಬಿಜೆಪಿ ರಾಯ್ಬರೇಲಿಗೆ ಒಂದು ಹಾದಿಯನ್ನು ನಿರ್ಮಾಣ ಮಾಡಲು ಪ್ರಾರಂಭಿಸಿದೆ. ಇರಾನಿಯನ್ನು ಮುಂದಿಟ್ಟು ಕೇಸರಿ ಪಕ್ಷವು ತೆರೆಮರೆಯಲ್ಲಿ ಜನರ ಬೆಂಬಲವನ್ನು ಗಳಿಸುವ ಕೆಲಸ ಮಾಡುತ್ತಿದೆ.
2014 ರಲ್ಲಿ ರಾಹುಲ್ ಗಾಂಧಿಯವರ ವಿರುದ್ಧ ಸೋತರೂ, ಇರಾನಿ ದೃಢ ನಿಶ್ಚಯದಿಂದ ಇದ್ದರು ಮತ್ತು ಆ ಕ್ಷೇತ್ರದಲ್ಲಿ ಅಂತರ್ಗತ ಅಭಿವೃದ್ಧಿಯತ್ತ ಗಮನ ಹರಿಸುತ್ತಲೇ ಇದ್ದರು, ಇದರ ಫಲವಾಗಿ 2019 ರಲ್ಲಿ ಜನರು ಅವರಿಗೆ ಜಯವನ್ನು ನೀಡಿದರು. 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಉತ್ತರ ಪ್ರದೇಶದಿಂದ ಕಾಂಗ್ರೆಸ್ ಅನ್ನು ಕಿತ್ತುಹಾಕಲು ಪಣತೊಟ್ಟಿರುವ ಬಿಜೆಪಿಗೆ ಸ್ಮೃತಿ ಇರಾನಿ ಅವರು ರಾಜಕೀಯ ನೆಲೆಯನ್ನು ಸಿದ್ಧಪಡಿಸುತ್ತಿದ್ದಾರೆ.
ಕೃಪೆ: tfipost.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.