ನವದೆಹಲಿ: 2020 ರಲ್ಲಿ, ಡಿಡಿ ಮತ್ತು ಆಕಾಶವಾಣಿಯಲ್ಲಿನ ಪ್ರಸಾರ ಭಾರತಿಯ ಡಿಜಿಟಲ್ ಚಾನೆಲ್ಗಳು ಶೇಕಡಾ 100 ಕ್ಕಿಂತ ಹೆಚ್ಚು ಬೆಳವಣಿಗೆಯನ್ನು ದಾಖಲಿಸಿದ್ದು, ಒಂದು ಬಿಲಿಯನ್ ಡಿಜಿಟಲ್ ವೀಕ್ಷಣೆಗಳು ಮತ್ತು ಆರು ಬಿಲಿಯನ್ ಡಿಜಿಟಲ್ ವಾಚ್ ನಿಮಿಷಗಳನ್ನು ಪಡೆದುಕೊಂಡಿವೆ.
ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಪ್ರಕಾರ, 2020 ರಲ್ಲಿ, ನ್ಯೂಸ್ ಆನ್ ಏರ್ ಅಪ್ಲಿಕೇಶನ್ 25 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಪಡೆದುಕೊಂಡಿದೆ. 300 ಮಿಲಿಯನ್ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ನೋಂದಾಯಿಸಿದೆ. ಲೈವ್ ರೇಡಿಯೊ ಸ್ಟ್ರೀಮಿಂಗ್ನೊಂದಿಗೆ 200 ಕ್ಕೂ ಹೆಚ್ಚು ಸ್ಟ್ರೀಮ್ಗಳು ಹೆಚ್ಚು ಜನಪ್ರಿಯತೆ ಪಡೆದುಕೊಂಡಿವೆ. ಡಿಡಿ ಸ್ಪೋರ್ಟ್ಸ್ ಮತ್ತು ಆಕಾಶವಾಣಿ ಸ್ಪೋರ್ಟ್ಸ್ ಲೈವ್ ಕಾಮೆಂಟರಿಯೊಂದಿಗೆ ಸ್ಥಿರವಾದ ಡಿಜಿಟಲ್ ಫಾಲೋಯಿಂಗ್ ಪಡೆದುಕೊಂಡಿದೆ, ಪ್ರಸಾರ್ ಭಾರತಿ ಆರ್ಚೀವ್ಸ್ ಮತ್ತು ಡಿಡಿ ಕಿಸಾನ್ ಟಾಪ್ 10 ರಲ್ಲಿ ಸ್ಥಿರ ಡಿಜಿಟಲ್ ಪ್ರದರ್ಶಕನಾಗಿದೆ.
ಆಲ್ ಇಂಡಿಯಾ ರೇಡಿಯೋ ನ್ಯೂಸ್ನ ಈಶಾನ್ಯ ಸೇವೆಯು ಸಹ ಅಗ್ರ 10 ರಲ್ಲಿದೆ, ಮತ್ತು 100 ಸಾವಿರ ಚಂದಾದಾರರ ಡಿಜಿಟಲ್ ಮೈಲಿಗಲ್ಲನ್ನು ದಾಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.