ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಆಡಳಿತವು ನ್ಯಾಷನಲ್ ಅಗ್ರಿಕಲ್ಚರ್ ಕೋ-ಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (ನಫೆಡ್) ನೊಂದಿಗೆ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದೆ.
ನಫೆಡ್ ಕೃಷಿ ಉತ್ಪನ್ನಗಳಿಗಾಗಿನ ಮಾರುಕಟ್ಟೆ ಸಹಕಾರಿ ಸಂಸ್ಥೆಗಳ ಉನ್ನತ ಸಂಸ್ಥೆಯಾಗಿದೆ.
ಕೇಂದ್ರಾಡಳಿತ ಪ್ರದೇಶದಲ್ಲಿನ ತೋಟಗಾರಿಕೆ ಕ್ಷೇತ್ರಕ್ಕಾಗಿನ ಈ ಒಪ್ಪಂದ ಗೇಮ್ ಚೇಂಜರ್ ಎಂದು ಪರಿಗಣಿಸಲಾಗಿದೆ ಎಂದು ಮೂಲಗಳು ವರದಿ ಮಾಡಿವೆ.
ಸೇಬು, ವಾಲ್ನಟ್, ಚೆರ್ರಿ, ಹೂ ಇತ್ಯಾದಿಗಳ ತೋಟವನ್ನು ಹೊಂದಿರುವ ರೈತರ ಆದಾಯವನ್ನು ಮೂರರಿಂದ ನಾಲ್ಕು ಪಟ್ಟು ಹೆಚ್ಚಿಸುವ ನಿರೀಕ್ಷೆಯನ್ನು ಇದು ಹೊಂದಿದೆ.
ಒಪ್ಪಂದಕ್ಕೆ ಸಹಿ ಹಾಕಿದ ನಂತರ, ನಫೆಡ್ ಮುಂದಿನ ಐದು ವರ್ಷಗಳಲ್ಲಿ 1,700 ಕೋಟಿ ರೂಪಾಯಿ ಮೌಲ್ಯದ 5,500 ಹೆಕ್ಟೇರ್ ಪ್ರದೇಶದಲ್ಲಿನ ಸೇಬು, ವಾಲ್ನಟ್, ಚೆರ್ರಿ, ಪಿಯರ್ ಮತ್ತು ಇತರ ಮಹತ್ವದ ತೋಟಗಾರಿಕೆ ಉತ್ಪನ್ನಗಳ ಮೇಲೆ ಹೆಚ್ಚಿನ ಗಮನ ಹರಿಸಲಿದೆ.
ಮುಂದಿನ ಮೂರು ತಿಂಗಳಲ್ಲಿ ಪ್ರತಿ ಜಿಲ್ಲೆಯಲ್ಲಿ ಒಂದರಂಚೆ 20 ರೈತ-ಉತ್ಪಾದಕ ಸಂಸ್ಥೆಗಳನ್ನು ನಫೆಡ್ ಸ್ಥಾಪಿಸಲಿದೆ. ಉತ್ತರ ಕಾಶ್ಮೀರ, ದಕ್ಷಿಣ ಕಾಶ್ಮೀರ ಮತ್ತು ಕಥುವಾದಲ್ಲಿ ತಲಾ 500 ಕೋಟಿ ರೂ.ಗಳ ವೆಚ್ಚದಲ್ಲಿ ಮೂರು ಕೋಲ್ಡ್ ಸ್ಟೋರೇಜ್ ಕ್ಲಸ್ಟರ್ಗಳನ್ನು ನಫೆಡ್ ಸ್ಥಾಪಿಸಲಿದ್ದು, ಎಲ್ಲಾ ಪ್ರೀಮಿಯಂ / ಸ್ಥಾಪಿತ ತೋಟಗಾರಿಕೆ ಉತ್ಪನ್ನಗಳಿಗೆ ಜಿಐ ಟ್ಯಾಗ್ಗಳನ್ನು ಇದು ಖಾತರಿಪಡಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.