ನವದೆಹಲಿ: ಭಾರತೀಯ ನೌಕಾಸೇನೆ ಮತ್ತು ಡಿಆರ್ಡಿಒ ಮೊಟ್ಟೆ ಮೊದಲೋ ಮೇಡ್ ಇನ್ ಇಂಡಿಯಾ ಏರ್ ಡ್ರಾಪೇಬಲ್ ಕಂಟೇನರ್ ಅನ್ನು ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಿದೆ.
ಸಹಾಯಕ್ ಎಂಕೆ 1 ಏರ್ ಡ್ರಾಪೇಬಲ್ ಕಂಟೇನರ್ ಅನ್ನು ಹಡಗುಗಳ ಅಗತ್ಯತೆಗಳನ್ನು ಪೂರೈಸಲು ಬಳಸಲಾಗುತ್ತದೆ, ಇಂತಹ ಕಂಟೇನರ್ ಇಲ್ಲದಿದ್ದರೆ ಬಿಡಿಭಾಗಗಳು ಮತ್ತು ಪಡಿತರಗಳನ್ನು ಸಂಗ್ರಹಿಸಲು ಹಡಗುಗಳು ಕರಾವಳಿಯ ಹತ್ತಿರಕ್ಕೆ ಬರಬೇಕಾಗುತ್ತದೆ.
ರಕ್ಷಣಾ ಸಚಿವಾಲಯ ಈ ಬಗ್ಗೆ ಹೇಳಿಕೆಯನ್ನು ನೀಡಿದ್ದು, “ಭಾರತೀಯ ನೌಕಾಪಡೆಯು ತನ್ನ ಕಾರ್ಯಾಚರಣೆಯ ಲಾಜಿಸ್ಟಿಕ್ಸ್ ಸಾಮರ್ಥ್ಯಗಳನ್ನು ಹೆಚ್ಚಿಸಲು ಮತ್ತು ಕರಾವಳಿಯಿಂದ 2,000 ಕಿ.ಮೀ.ದೂರದಲ್ಲಿ ನಿಯೋಜಿಸಲ್ಪಟ್ಟ ಹಡಗುಗಳಿಗೆ ನಿರ್ಣಾಯಕ ಎಂಜಿನಿಯರಿಂಗ್ ಲಾಜಿಸ್ಟಿಕ್ಸ್ ಪೂರೈಸುವ ಸಾಮರ್ಥ್ಯ ವೃದ್ಧಿಸಲು ನಡೆಸಿದ ಪರೀಕ್ಷೆ ಯಶಸ್ವಿಯಾಗಿದೆ” ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.