ಥಾತ್ರಿ: ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಥಾತ್ರಿಯಲ್ಲಿನ ಮೂರು ಗ್ರಾಮಗಳು ಸ್ವಾತಂತ್ರ್ಯದ ನಂತರ ಇದೇ ಮೊದಲ ಬಾರಿಗೆ ವಿದ್ಯುತ್ ಪಡೆಯಲು ಸಜ್ಜಾಗಿವೆ.
ಥಾತ್ರಿಯ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್ಡಿಎಂ) ಆಗಿರುವ ಅಥರ್ ಅಮೀನ್ ಜಾರ್ಗರ್ ಅವರು ತಾಂಟಾ ಗ್ರಾಮಕ್ಕೆ ಭೇಟಿ ನೀಡಿ 2021 ರ ಜನವರಿ 15 ರೊಳಗೆ ಗ್ರಾಮಸ್ಥರಿಗೆ ವಿದ್ಯುತ್ ಸಿಗುವುದನ್ನು ಖಾತ್ರಿಪಡಿಸಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರೊಂದಿಗೆ ಇತ್ತೀಚಿಗೆ ನಡೆದ ಸಭೆಯಲ್ಲಿ ಗ್ರಾಮಸ್ಥರು ತಮ್ಮ ಗ್ರಾಮಗಳನ್ನು ಇನ್ನೂ ವಿದ್ಯುದ್ದೀಕರಿಸದ ವಿಷಯವನ್ನು ಪ್ರಸ್ತಾಪಿಸಿದ್ದರು.
ಸ್ವಾತಂತ್ರ್ಯದ ನಂತರ, ಸರ್ಕಾರಗಳು ಈ ಪ್ರದೇಶದ ಅಭಿವೃದ್ಧಿಗೆ ಮಾಡಿದ ಪ್ರಯತ್ನಗಳು ಅಷ್ಟಕಷ್ಟೆ. ಸರ್ಕಾರಗಳ ಮುಖ್ಯ ಗಮನವು ಜಿಲ್ಲಾ ಕೇಂದ್ರದ ಕಡೆಗೆಯೇ ನೆಟ್ಟಿತ್ತು.
ಎಸ್ಡಿಎಂ ಮತ್ತು ಅವರ ತಂಡ ಏಳು ಗಂಟೆಗಳ ಕಾಲ ನಡೆದು ದೂರದ ಹಳ್ಳಿಗಳನ್ನು ತಲುಪಿ ಅಲ್ಲಿನ ವಿದ್ಯುತ್ ಪರಿಸ್ಥಿತಿಯನ್ನು ಪರಿಶೀಲಿಸಿದವು. ದೋಡಾ ಜಿಲ್ಲೆಯ ಮೂರು ಗ್ರಾಮಗಳನ್ನು ಜನವರಿ 15 ರೊಳಗೆ ವಿದ್ಯುದ್ದೀಕರಿಸುವುದನ್ನು ಜಾರ್ಗರ್ ಖಚಿತಪಡಿಸಿದರು.
ಈ ನಡುವೆ, ಹಿಮಪಾತವು ಸ್ಥಳೀಯರ ದೈನಂದಿನ ಜೀವನವನ್ನು ಅಡ್ಡಿಪಡಿಸುವುದರಿಂದ ದೋಡಾ ಜಿಲ್ಲೆಯ ವಿದ್ಯುದ್ದೀಕೃತ ಗ್ರಾಮಗಳು ಪ್ರತಿ ಚಳಿಗಾಲದಲ್ಲೂ ಕತ್ತಲೆಯಲ್ಲಿ ಮುಳುಗುತ್ತವೆ. ಹಲವು ದಿನಗಳವರೆಗೆ ಇಲ್ಲಿನ ನಿವಾಸಿಗಳು ಮೇಣದ ಬತ್ತಿಗಳು ಮತ್ತು ಸೀಮೆಎಣ್ಣೆ ದೀಪಗಳನ್ನು ಅವಲಂಬಿಸಿರುತ್ತಾರೆ.
ಥಾತ್ರಿ ಹಿಮಾಲಯ ಪರ್ವತಗಳ ತಪ್ಪಲಿನಲ್ಲಿ ಚೆನಾಬ್ ನದಿಯ ದಡದಲ್ಲಿರುವ ಒಂದು ಸುಂದರವಾದ ಪಟ್ಟಣ. ದಟ್ಟವಾದ ಕಾಡುಗಳು ಮತ್ತು ಅದರ ವಿವಿಧ ಭಾಗಗಳ ಮೂಲಕ ಹರಿಯುವ ಹಲವಾರು ಸಣ್ಣ ತೊರೆಗಳು ಅದರ ಸೌಂದರ್ಯವನ್ನು ಹೆಚ್ಚಿಸುತ್ತವೆ. ಒಟ್ಟು 93 ಗ್ರಾಮಗಳು ಮತ್ತು 33 ಪಂಚಾಯಿತಿಗಳು ಥಾತ್ರಿಯ ಭಾಗವಾಗಿದೆ.
2010 ರಲ್ಲಿ ಪಟ್ಟಣವಾಗಿ ಬಡ್ತಿ ಪಡೆದ ಥಾತ್ರಿ, ದೋಡಾದ ಜಿಲ್ಲಾ ಕೇಂದ್ರದಿಂದ ಸುಮಾರು 36 ಕಿಲೋಮೀಟರ್ ದೂರದಲ್ಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.