ನವದೆಹಲಿ: ಪ್ರಸ್ತುತ ವಿಶ್ವದ ಆರನೇ ಅತಿದೊಡ್ಡ ಆರ್ಥಿಕತೆಯಾಗಿರುವ ಭಾರತವು, 2025 ರಲ್ಲಿ ಯುಕೆಯನ್ನು ಹಿಂದಿಕ್ಕಿ ಐದನೇ ದೊಡ್ಡ ಸ್ಥಾನ ಪಡೆಯಲಿದೆ ಮತ್ತು 2030 ರ ವೇಳೆಗೆ ಮೂರನೇ ಸ್ಥಾನಕ್ಕೆ ತಲುಪಲಿದೆ ಎಂದು ಥಿಂಕ್ ಟ್ಯಾಂಕ್ ಶನಿವಾರ ತಿಳಿಸಿದೆ.
ಭಾರತವು 2019 ರಲ್ಲಿ ಯುಕೆ ಯನ್ನು ಹಿಂದಿಕ್ಕಿ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿತ್ತು, ಆದರೆ 2020 ರಲ್ಲಿ 6 ನೇ ಸ್ಥಾನಕ್ಕೆ ಕೆಳಗಿಳಿಯಿತು.
“ಸಾಂಕ್ರಾಮಿಕದ ಪ್ರಭಾವ ಭಾರತವನ್ನು ಸ್ವಲ್ಪಮಟ್ಟಿಗೆ ಕುಗ್ಗುವಂತೆ ಮಾಡಿದೆ. ಇದರ ಪರಿಣಾಮವಾಗಿ ಯುಕೆ ಈ ವರ್ಷದ ಮುನ್ಸೂಚನೆಯಲ್ಲಿ ಭಾರತವನ್ನು ಹಿಂದಿಕ್ಕಿದೆ ಮತ್ತು 2024 ರವರೆಗೆ ಇದು ಮುಂದುವರಿಯುತ್ತದೆ” ಎಂದು ಸೆಂಟರ್ ಫಾರ್ ಎಕನಾಮಿಕ್ಸ್ ಆಂಡ್ ಬಿಸಿನೆಸ್ ರಿಸರ್ಚ್ (ಸಿಇಬಿಆರ್) ಶನಿವಾರ ಪ್ರಕಟಿಸಿದ ವಾರ್ಷಿಕ ವರದಿಯಲ್ಲಿ ತಿಳಿಸಿದೆ.
ರೂಪಾಯಿ ದೌರ್ಬಲ್ಯದ ಪರಿಣಾಮವಾಗಿ ಯುಕೆ 2020 ರಲ್ಲಿ ಭಾರತವನ್ನು ಮತ್ತೆ ಹಿಂದಿಕ್ಕಿದೆ ಎಂದು ಅದು ಹೇಳಿದೆ. 2021 ರಲ್ಲಿ ಭಾರತದ ಆರ್ಥಿಕತೆಯು ಶೇಕಡಾ 9 ರಷ್ಟು ಮತ್ತು 2022 ರಲ್ಲಿ ಶೇಕಡಾ 7 ರಷ್ಟು ವಿಸ್ತರಿಸಲಿದೆ ಎಂದು ಸಿಇಬಿಆರ್ ಮುನ್ಸೂಚನೆ ನೀಡಿದೆ.
“ಭಾರತವು ಹೆಚ್ಚು ಆರ್ಥಿಕವಾಗಿ ಅಭಿವೃದ್ಧಿ ಹೊಂದಿದಂತೆ ಬೆಳವಣಿಗೆ ಸ್ವಾಭಾವಿಕವಾಗಿ ನಿಧಾನವಾಗಲಿದೆ, ವಾರ್ಷಿಕ ಜಿಡಿಪಿ ಬೆಳವಣಿಗೆಯು 2035 ರಲ್ಲಿ ಶೇಕಡಾ 5.8 ಕ್ಕೆ ಇಳಿಯುವ ನಿರೀಕ್ಷೆಯಿದೆ” ಎಂದಿದೆ.
“ಈ ಬೆಳವಣಿಗೆಯ ಪಥವು 2030 ರ ವೇಳೆಗೆ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂಬುದು ಗೋಚರಿಸುತ್ತಿದೆ, 2025 ರಲ್ಲಿ ಯುಕೆ, 2027 ರಲ್ಲಿ ಜರ್ಮನಿ ಮತ್ತು 2030 ರಲ್ಲಿ ಜಪಾನ್ ಅನ್ನು ಭಾರತ ಹಿಂದಿಕ್ಕಳಿದೆ” ಎಂದು ಅದು ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.