ನವದೆಹಲಿ: ದೇಶದ ಕೋವಿಡ್-19 ಚೇತರಿಕೆ ಪ್ರಮಾಣವು ಶೇಕಡಾ 95.12 ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ 34 ಸಾವಿರ 477 ಜನರು ಕೋವಿಡ್-19 ನಿಂದ ಚೇತರಿಸಿಕೊಂಡಿದ್ದಾರೆ. ಒಟ್ಟು ಚೇತರಿಕೆ ಸಂಖ್ಯೆ 94 ಲಕ್ಷ 22 ಸಾವಿರಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಕೇಂದ್ರದ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು , ಭಾರತದ ಪ್ರಕರಣಗಳ ಸಾವಿನ ಪ್ರಮಾಣ ವಿಶ್ವದಲ್ಲೇ ಅತ್ಯಂತ ಕಡಿಮೆ ಸ್ಥಾನದಲ್ಲಿದೆ. ಪ್ರಸ್ತುತ ಭಾರತದ ಸಾವಿನ ಪ್ರಮಾಣ ಶೇಕಡಾ 1.45 ರಷ್ಟಿದ್ದರೆ, ಜಾಗತಿಕವಾಗಿ ಇದು ಶೇಕಡಾ 2.26 ರಷ್ಟಿದೆ ಎಂದು ಅವರು ಹೇಳಿದ್ದಾರೆ.
ಕೋವಿಡ್-19 ವ್ಯಾಕ್ಸಿನೇಷನ್ಗೆ ಸಂಬಂಧಿಸಿದ ಕಾರ್ಯಗಳನ್ನು ಮೇಲ್ವಿಚಾರಣೆ ಮಾಡಲು ರಾಷ್ಟ್ರದಲ್ಲಿ ಬಹು-ಮಟ್ಟದ ಆಡಳಿತ ಕಾರ್ಯವಿಧಾನವನ್ನು ಸ್ಥಾಪಿಸಲಾಗಿದೆ ಎಂದು ಭೂಷಣ್ ಹೇಳಿದರು. ಸರ್ಕಾರ ಮತ್ತು ರಾಜ್ಯಗಳ 23 ಸಚಿವಾಲಯಗಳು ಮತ್ತು ಇಲಾಖೆಗಳನ್ನು ಗುರುತಿಸಲಾಗಿದ್ದು, ಲಸಿಕೆ ಹೊರತರಲು ಅವುಗಳಿಗೆ ಪಾತ್ರಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು.
ವಿದ್ಯುತ್ ಮತ್ತು ವಿದ್ಯುತ್ ರಹಿತ ಕೋಲ್ಡ್ ಚೈನ್ ಉಪಕರಣಗಳು ಮತ್ತು ಅವುಗಳ ಬಲವರ್ಧನೆಗೆ ಮಾರ್ಗಸೂಚಿಗಳನ್ನು ನೀಡಲಾಗಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.