ನವದೆಹಲಿ: ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಶೀಘ್ರದಲ್ಲೇ ರಾಷ್ಟ್ರವ್ಯಾಪಿ ಸಾಮೂಹಿಕ ಸಂಪರ್ಕ ಮತ್ತು ಕೊಡುಗೆ ಅಭಿಯಾನವನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ವರದಿಗಳ ಪ್ರಕಾರ, ಜನವರಿ 15 ರಿಂದ ಅಭಿಯಾನ ಪ್ರಾರಂಭವಾಗಲಿದೆ.
ಈ ಅಭಿಯಾನವು ಭವ್ಯ ಮತ್ತು ದಿವ್ಯ ರಾಮ ಮಂದಿರ ನಿರ್ಮಾಣಕ್ಕೆ ಕೊಡುಗೆ ನೀಡುವಂತೆ ಜನರನ್ನು ಆಹ್ವಾನಿಸುವ ಗುರಿಯನ್ನು ಹೊಂದಿದೆ. ಅಲ್ಲದೇ, ಜನ್ಮಭೂಮಿ ಚಳವಳಿಯ ಐತಿಹಾಸಿಕ ಮಹತ್ವದ ಬಗ್ಗೆಯೂ ಜನರಿಗೆ ತಿಳಿಸುವುದಾಗಿ ಟ್ರಸ್ಟ್ ಹೇಳಿದೆ.
ಶ್ರೀ ರಾಮ ಭಕ್ತರು ಶ್ರೀ ರಾಮ ಜನ್ಮಭೂಮಿಯ ಮುಕ್ತಿಗೆ ಕೊಡುಗೆ ನೀಡಿದಂತೆಯೇ, ಕೋಟ್ಯಂತರ ರಾಮ ಭಕ್ತರುಗಳು ಸ್ವಯಂಪ್ರೇರಿತ ಕೊಡುಗೆಯೊಂದಿಗೆ ಮಂದಿರವನ್ನು ನಿರ್ಮಿಸಲಾಗುವುದು ಎಂದು ಟ್ರಸ್ಟ್ ಹೇಳಿದೆ.
ರಾಷ್ಟ್ರವ್ಯಾಪಿ ಅಭಿಯಾನದ ಸಂದರ್ಭದಲ್ಲಿ, ಶ್ರೀ ರಾಮ ಜನ್ಮಭೂಮಿ ಮಂದಿರದ ಪ್ರಸ್ತಾವಿತ ಹೊಸ ಮಾದರಿಯ ಫೋಟೋಗಳು ಕೋಟ್ಯಂತರ ರಾಮ ಭಕ್ತರ ಮನೆಗಳಿಗೆ ತಲುಪಲಿದೆ.
ಮಕರ ಸಕ್ರಾಂತಿಯಂದು ಅಭಿಯಾನ ಪ್ರಾರಂಭವಾಗಲಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.