ಎನ್ಜಿಓ ಹೆಸರಲ್ಲಿ ಭಾರತದ ವಿರುದ್ಧ ಪಿತೂರಿ ನಡೆಸುವ ಅನೇಕ ಎನ್ಜಿಓಗಳು ನಮ್ಮ ದೇಶದಲ್ಲಿ ಇದೆ. ‘ಪರ್ಸಿಕ್ಯೂಶನ್ ರಿಲೀಫ್’ ಇದಕ್ಕೆ ಒಂದು ಉದಾಹರಣೆ. ಕ್ರಿಶ್ಚಿಯನ್ ಮಿಶನರಿಗಳ ಈ ಎನ್ಜಿಓ ಭಾರತದ ವಿರುದ್ಧ ಪಿತೂರಿ ಮಾಡಲು ಹೋಗಿ ಈಗ ಕೈಸುಟ್ಟುಕೊಂಡಿದೆ.
ಲೀಗಲ್ ರೈಟ್ಸ್ ಪ್ರೊಟೆಕ್ಷನ್ ಫೋರಂ (ಎಲ್ಆರ್ಪಿಎಫ್) ನಡೆಸಿದ ತನಿಖೆಯ ಆಧಾರದ ಮೇಲೆ ಕಮ್ಯೂನ್ಮಾಗ್.ಕಾಮ್ ಬಹಿರಂಗಪಡಿಸಿದ ವರದಿಯನ್ನು ಅನುಸರಿಸಿ ‘ಪರ್ಸಿಕ್ಯುಶನ್ ರಿಲೀಫ್’ ಎಂಬ ಎನ್ಜಿಒ ತನ್ನ ವೆಬ್ಸೈಟ್ ಅನ್ನು ಸ್ಥಗಿತಗೊಳಿಸಿದೆ “We will be back soon” ಎಂದು ಹೇಳಿಕೊಂಡಿದೆ.
“When guilt is in its blush of infancy, it trembles in a tenderness of shame; and the first eye that pierces through the veil that hides the secret brings it to the face”
~ Thomas SouthernePersecution Relief’s site is down!! https://t.co/FRkzQvXBFZ pic.twitter.com/sqBlG4IVAX
— Legal Rights Protection Forum (@lawinforce) December 2, 2020
ಈ ಬಗ್ಗೆ ಟ್ವಿಟ್ ಮಾಡಿರುವ ಲೀಗಲ್ ರೈಟ್ಸ್ ಪ್ರೊಟೆಕ್ಷನ್ ಫೋರಂ, ಐರಿಶ್ ನಾಟಕಕಾರ ಥಾಮಸ್ ಸೌಥರ್ನ್ ಅವರ ‘ಗಿಲ್ಟ್’ ಕುರಿತ ಉಲ್ಲೇಖವನ್ನು ಉಲ್ಲೇಖಿಸಿ ʼಪರ್ಸಿಕ್ಯುಶನ್ ರಿಲೀಫ್’ಗೆ ತಿರುಗೇಟು ನೀಡಿದೆ.
ಪರ್ಸಿಕ್ಯುಶನ್ ರಿಲೀಫ್ ತನ್ನ ಫೇಸ್ಬುಕ್ ಪೇಜ್ನಲ್ಲಿ “ಪರ್ಸಿಕ್ಯುಶನ್ ರಿಲೀಫ್ಗೆ ತುರ್ತು ಪ್ರಾರ್ಥನೆ ವಿನಂತಿ” ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಪೋಸ್ಟ್ ಮಾಡಿತ್ತು, ಅದರಲ್ಲಿ ಅದರ ಸಂಸ್ಥಾಪಕ ಶಿಬು ಥಾಮಸ್ ತನ್ನ ಅನುಯಾಯಿಗಳಿಗೆ ‘ಪ್ರಾರ್ಥನೆ’ ಮಾಡುವಂತೆ ಕೇಳಿಕೊಂಡಿದ್ದಾನೆ.
ವೀಡಿಯೊದಲ್ಲಿ ಶಿಬು “ನಿನ್ನೆಯಿಂದ ಈ ಸಂಪೂರ್ಣ ಘಟನಾವಳಿಗಾಗಿ ನಾನು ನಿಮ್ಮ ಅಮೂಲ್ಯವಾದ ಪ್ರಾರ್ಥನೆಯನ್ನು ವಿನಂತಿಸುತ್ತೇನೆ. ನಿಮ್ಮ ಪ್ರಾರ್ಥನೆಯು ಸಂಕಷ್ಟದ ವಿರುದ್ಧ ಈಜಲು ನಮಗೆ ಸಹಾಯ ಮಾಡಿದೆ. ಭಗವಂತ ನಮ್ಮನ್ನು ಆತನ ವೇದಿಕೆಗೆ ಕರೆದಿದ್ದಾನೆ ಮತ್ತು ಮುಂದೆ ಮಾಡಬೇಕಾದದ್ದನ್ನು ಭಗವಂತನು ನೋಡಿಕೊಳ್ಳುತ್ತಾನೆ ಎಂದು ನಾವು ಬಲವಾಗಿ ನಂಬುತ್ತೇವೆ. ಆದರೆ ನಮ್ಮನ್ನು ರಾಷ್ಟ್ರ ವಿರೋಧಿಗಳೆಂದು ಬ್ರಾಂಡ್ ಮಾಡಲಾಗುತ್ತಿರುವ ಈ ಸಮಯದಲ್ಲಿ ನಮ್ಮೊಂದಿಗೆ ನಿಲ್ಲಲು ಭಾರತದ ಚರ್ಚ್ನ ಅಮೂಲ್ಯವಾದ ಪ್ರಾರ್ಥನೆ ನನಗೆ ಬೇಕು. ಆದ್ದರಿಂದ, ಇದರೊಂದಿಗೆ ನಾನು ಪ್ರಾರ್ಥನೆಗಳನ್ನು ವಿನಂತಿಸುತ್ತೇನೆ ಮತ್ತು ಕಳೆದ 5 ವರ್ಷಗಳಲ್ಲಿ ನಿಮ್ಮ ನಿರಂತರ ಬೆಂಬಲಕ್ಕಾಗಿ ಧನ್ಯವಾದಗಳು. ದೇವರು ನಿಮ್ಮನ್ನು ಆಶೀರ್ವದಿಸುತ್ತಾನೆ! ” ಎಂದಿದ್ದಾನೆ.
ಪರ್ಸಿಕ್ಯೂಶನ್ ರಿಲೀಫ್ ರಕ್ಷಣಾತ್ಮಕ ಆಟ ಆಡುತ್ತಿರುವುದರ ಹೊರತಾಗಿ , ಫೆಡರೇಶನ್ ಆಫ್ ಇಂಡಿಯನ್ ಅಮೆರಿಕನ್ ಕ್ರಿಶ್ಚಿಯನ್ ಆರ್ಗನೈಸೇಷನ್ಸ್ ಆಫ್ ನಾರ್ತ್ ಅಮೇರಿಕಾ (FIACONA) ಇತ್ತೀಚೆಗೆ ‘ಭಾರತದಲ್ಲಿ ಕ್ರಿಶ್ಚಿಯನ್ನರ ವಿರುದ್ಧ ದ್ವೇಷದ ಅಪರಾಧ’ ಎಂಬ ವೆಬ್ನಾರ್ ಅನ್ನು ಆಯೋಜಿಸಿದೆ.
Conspiracy against the own country!
Massive conspiracy by Christian missionary NGO to show India in bad light unearthed – The Commune https://t.co/lx30OZL5BL
— Robert Rosario (@robertrosario14) December 2, 2020
ವೀಡಿಯೊದಲ್ಲಿ FIACONA ಮತ್ತು ಪರ್ಸಿಕ್ಯೂಶನ್ ರಿಲೀಫ್ ಸದಸ್ಯರು ಭಾರತವನ್ನು ದ್ವೇಷದ ವಿಷಯದಲ್ಲಿ ಅಗ್ರ 14 ದೇಶಗಳಲ್ಲಿ ಸೇರಿಸಿಕೊಳ್ಳುವುದರಲ್ಲಿ ತಮ್ಮ ಸಂತೋಷ ವ್ಯಕ್ತಪಡಿಸಿದ್ದಾರೆ, 2015 ರಲ್ಲಿ ಇದ್ದ 28 ರಿಂದ 14ಕ್ಕೆ ಭಾರತ ಸೇರಿದೆ. ಆದರೆ ಯುಎಸ್ ಸರ್ಕಾರವು ಭಾರತಕ್ಕೆ ನಿರ್ಬಂಧಗಳನ್ನು ವಿಧಿಸುವಂತೆ ಮಾಡಲಾಗದ ಬಗ್ಗೆ ವಿಷಾದಿಸಿದ್ದಾರೆ. ಈ ವೆಬ್ನಾರ್ನ ವೀಡಿಯೊ ಸಾರ್ವಜನಿಕರಿಗೆ ನೋಡಲು ಈಗ ಲಭ್ಯವಿಲ್ಲ.
ಗೃಹ ವ್ಯವಹಾರಗಳ ಸಚಿವಾಲಯಕ್ಕೆ ಎಲ್ಆರ್ಪಿಎಫ್ ನೀಡಿದ ದೂರಿನ ಆಧಾರದ ಮೇಲೆ ದಿ ಕಮ್ಯೂನ್ ನಡೆಸಿದ ವಿಶೇಷ ಬಹಿರಂಗ ಲೇಖನದ ಹಿನ್ನಲೆಯಲ್ಲಿ ಪರ್ಸಿಕ್ಯೂಶನ್ ರಿಲೀಫ್ ವಿರುದ್ಧ ಕ್ರಮಕೈಗೊಳ್ಳಲಾಗಿದೆ.
ಈ ಘಟನೆಯು ಟ್ವಿಟರ್ನಲ್ಲಿ ಸುದ್ದಿ ಮಾಡಿದೆ. ಹಲವಾರು ಪ್ರಮುಖ ವ್ಯಕ್ತಿಗಳು ಈ ಬಗ್ಗೆಅಭಿಪ್ರಾಯ ಹಂಚಿಕೊಂಡಿದ್ದಾರೆ. ಥುಗ್ಲಕ್ ಸಂಪಾದಕ ಎಸ್.ಗುರುಮೂರ್ತಿ ಅವರು ಆಸಕ್ತ ಪ್ರತಿಯೊಬ್ಬ ಭಾರತೀಯರು ಈ ಎಕ್ಸ್ಪೋಸ್ ಓದಬೇಕು ಎಂದು ಟ್ವೀಟ್ ಮಾಡಿದ್ದಾರೆ.
Everyone interred in India must read this. Massive conspiracy by Christian missionary NGO to show India in bad light unearthed – The Commune https://t.co/Ds3QiscLKF
— S Gurumurthy (@sgurumurthy) December 2, 2020
ಕೆಲವರು ಈ ದೇಶದ್ರೋಹಿ ಎನ್ಜಿಓ ಬೆಂಬಲಕ್ಕೆ ನಿಂತಿದ್ದಾರೆ. ಅವರಲ್ಲಿ ಎಡಪಂಥೀಯರು ಮತ್ತು ಕಾಂಗ್ರೆಸ್ಸಿಗರು ಮೊದಲಿಗರಾಗಿದ್ದಾರೆ.
ಗ್ಲೋಬಲ್ ಕ್ರಿಶ್ಚಿಯನ್ ಮಿನಿಷ್ಟರ್ಸ್ ಒಕ್ಕೂಟದ ಸಹ-ಅಧ್ಯಕ್ಷ ನೆಹೆಮಿಯಾ ಕ್ರಿಸ್ಟಿ ಅವರು “ಮತಾಂತರ ನನ್ನ ಖಾಸಗಿತನ ಮತ್ತು ಭೂಮಿಯ ಕಾನೂನು ಆ ಸ್ವಾತಂತ್ರ್ಯವನ್ನು ನೀಡುತ್ತದೆ” ಎಂದು ಟ್ವೀಟ್ ನಲ್ಲಿ ಹೇಳಿದ್ದಾರೆ. ದಿ ಕಮ್ಯೂನ್, ಎಲ್ಆರ್ಪಿಎಫ್ ಮತ್ತು ಬೆಂಬಲಕ್ಕೆ ಬಂದ ಇತರರನ್ನು ಖಂಡಿಸಿ ಹಲವಾರು ಟ್ವೀಟ್ ಗಳನ್ನು ಸಹ ಮಾಡಿದ್ದಾರೆ.
ಕಾಂಗ್ರೆಸ್ ಬೆಂಬಲಕ್ಕೆ ನಿಲ್ಲುವಲ್ಲಿ ಹೆಸರುವಾಸಿಯಾದ ಲೇಖಕ ಮತ್ತು ಅಂಕಣಕಾರ ಸಂಜುಕ್ತ ಬಸು ಅವರು ದಿ ಕಮ್ಯೂನ್ ಮತ್ತು ಎಲ್ಆರ್ಪಿಎಫ್ ವಿರುದ್ಧ ಮಾನಹಾನಿ ಪ್ರಕರಣವನ್ನು ದಾಖಲಿಸಲು ಮುಂದಾಗಿದ್ದಾರೆ.
Source : thecommunemag.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.