ದೇಶ ಕಂಡ ಉತ್ತಮ ನಾಯಕರಲ್ಲಿ ಒಬ್ಬರು ಪ್ರಧಾನಿ ನರೇಂದ್ರ ಮೋದಿ. ಇವರ ಅಭಿವೃದ್ಧಿಗೆ ಪೂರಕವಾದ ವಿಚಾರಗಳನ್ನು ಹೆಚ್ಚಿನವರು ಒಪ್ಪುವವರೇ. ಇವರನ್ನು ದೇಶದ ಬಹುಪಾಲು ಜನರು ಪ್ರೀತಿಸುತ್ತಾರೆ. ಇವರು ದೇಶವನ್ನು ಅಭಿವೃದ್ಧಿಯ ಆಶಯಗಳ ಜೊತೆಗೆ ಮುನ್ನಡೆಸುತ್ತಿದ್ದಾರೆ ಎಂಬುದನ್ನು ಅವರು ಈ 6 ವರ್ಷಗಳ ತಮ್ಮ ಆಡಳಿತಾವಧಿಯಲ್ಲಿ ಜಾರಿಗೊಳಿಸಿರುವ ಅನೇಕ ಯೋಜನೆಗಳೇ ಮಾತನಾಡುತ್ತಿವೆ ಎಂಬುದು ಸುಳ್ಳಲ್ಲ.
ಇಂತಹ ಮಹಾನ್ ನಾಯಕನ ಬಗ್ಗೆ ವಿರೋಧಿಗಳು ಆಗಾಗ್ಗೆ ಸುಳ್ಳುಗಳನ್ನು ಬಿತ್ತಿ ಜನರ ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತವೆ. ಹೆಚ್ಚಾಗಿ ಮೋದಿ ಅವರು ಹಿಂದೂ ಪರ ನಿಲುವು ಹೊಂದಿದ್ದು, ಇವರ ಆಡಳಿತದಲ್ಲಿ ಮುಸಲ್ಮಾನರು ಅತ್ಯಂತ ಕೆಟ್ಟ ಪರಿಸ್ಥಿತಿ ಎದುರಿಸಬೇಕಾಗಿದೆ. ಮೋದಿ ಅವರು ಮುಸ್ಲಿಂ ಪರ ಯಾವುದೇ ಯೋಜನೆ ಜಾರಿ ಮಾಡುವುದಿಲ್ಲ. ಅವರು ಮುಸ್ಲಿಂ ಸಮುದಾಯದ ಜೊತೆಗೆ ಉತ್ತಮ ಬಾಂಧವ್ಯ ಹೊಂದಿಲ್ಲ ಎಂದೆಲ್ಲಾ ಪ್ರಚಾರ ಮಾಡುವುದು ಸರ್ವೇ ಸಾಮಾನ್ಯವಾಗಿದೆ. ಈ ಬಗ್ಗೆ ಮೋದಿ ಅವರೇನೂ ತಲೆಕೆಡಿಸಿಕೊಳ್ಳಲಾರರು. ಆದರೂ ಅವರು ಮುಸ್ಲಿಂ ಸಮುದಾಯದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ ಉತ್ತಮ ಕೆಲಸಗಳನ್ನು ಸ್ಮರಿಸದೇ ಹೋದಲ್ಲಿ, ಅದನ್ನು ಮರೆತು ನಾವು ಅಪಪ್ರಚಾರವನ್ನೇ ನಂಬಿದಲ್ಲಿ ಮೋದಿ ಅವರ ಕಾಳಜಿಗೆ ದ್ರೋಹ ಎಸಗಿದಂತಾಗುತ್ತದೆ ಎಂಬುದು ನೂರಕ್ಕೆ ನೂರರಷ್ಟು ಸತ್ಯ.
ಹಾಗಾದರೆ ಮೋದಿ ಅವರು ಮುಸ್ಲಿಂ ಸಮುದಾಯದ ಅಭಿವೃದ್ಧಿಗಾಗಿ ಏನು ಮಾಡಿದ್ದಾರೆ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಅಜ್ಮೀರದ ದರ್ಗಾ ಕ್ವಾಝಾ ಸಾಹಬ್, ದರ್ಗಾ ಕಮಿಟಿಯ ಅಧ್ಯಕ್ಷರು ಮೋದಿ ಅವರ ಮುಸ್ಲಿಂ ಪರ ಕಾಳಜಿಯ ಬಗ್ಗೆ ನೀಡಿದ ಮಾಹಿತಿ ಇದಾಗಿದೆ. ಮೋದಿ ಅವರು ತಮ್ಮ ರಾಜಕೀಯ ಮತ್ತು ಆಡಳಿತಾತ್ಮಕ ಕ್ರಮಗಳೆರಡರಲ್ಲಿಯೂ ಮುಸ್ಲಿಂ ಸಮುದಾಯವನ್ನು ಮೇಲೆತ್ತುವ, ಸುಧಾರಣೆಯ ಆಶಯದ, ಅಭಿವೃದ್ಧಿಯ ದೃಷ್ಟಿಕೋನದೊಂದಿಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ.
ಈ ಬಗ್ಗೆ ಹೇಳುವುದಾದರೆ ಗುಜರಾತ್ನಲ್ಲಿ ಮೋದಿ ಅವರಿಗೆ ಮುಸ್ಲಿಂ ವರ್ಗದ ಅನೇಕ ಸ್ನೇಹಿತರಿದ್ದರು. ಅವರ ಮನೆ ಇರುವ ವಡ ನಗರದ ಸುತ್ತಮುತ್ತಲೂ ಹೆಚ್ಚು ಮುಸ್ಲಿಂ ಸಮುದಾಯಗಳೇ ವಾಸವಿದ್ದದ್ದು. ಅವರು ಗುಜರಾತ್ನ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮುಸ್ಲಿಂ ಸಮುದಾಯಗಳೇ ಹೆಚ್ಚಾಗಿದ್ದ ಕಚ್ ಮತ್ತು ಭರೂಚ್ ಜಿಲ್ಲೆಗಳಲ್ಲಿ ಮೋದಿ ಅನೇಕ ಅಭಿವೃದ್ಧಿ ಪೂರಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದಾರೆ. ಅವರು ಮುಖ್ಯಮಂತ್ರಿಯಾದ ಬಳಿಕ ಈ ಎರಡೂ ಜಿಲ್ಲೆಗಳ ಅಭಿವೃದ್ಧಿ ಸೂಚ್ಯಂಕ ಹೆಚ್ಚಾಗಿದೆ.
ಕಚ್ ಬಗ್ಗೆ ಹೇಳುವುದಾದರೆ ಇದು ಪಾಕಿಸ್ಥಾನ ಮತ್ತು ರೆಜಿಸ್ಥಾನಗಳಿರುವ ಗಡಿ ಜಿಲ್ಲೆ. ಈ ಪ್ರದೇಶಗಳಿಗೆ ಮೋದಿ ಅವರು ಗುಜರಾತ್ನ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರುವವವರೆಗೆ ಪ್ರವಾಸಿಗರಿರಲಿ, ಅಧಿಕಾರಿಗಳಿರಲಿ ಹೋಗಲು ಬಯಸುತ್ತಿರಲಿಲ್ಲ. ಇಲ್ಲಿನ ಅಭಿವೃದ್ಧಿ ಕನಸಿನ ಮಾತಾಗಿತ್ತು. ಆದರೆ ನಮೋ ಮುಖ್ಯಮಂತ್ರಿಯಾದ ಬಳಿಕ ಕಚ್ ಅಭಿವೃದ್ಧಿ ಹೊಂದಿತು. ಅಲ್ಲಿನ ಕೃಷಿ ಪ್ರವರ್ಧಮಾನಕ್ಕೆ ಬಂತು. ಉದ್ಯಮ ಜಿಲ್ಲೆಗೆ ಬಂದಿತು. ಅಲ್ಲಿನ ಕರಾವಳಿಯ ಸಾಮರ್ಥ್ಯವನ್ನು ಬಳಸಿಕೊಳ್ಳಲಾಯಿತು ಮತ್ತು ಇದು ಒಂದು ರೋಮಾಂಚಕ ಪ್ರವಾಸಿ ತಾಣವಾಗಿ ಹೊರಹೊಮ್ಮಿತು.
ಭರೂಚ್ ಬಗ್ಗೆ ಹೇಳುವುದಾದರೆ, ಹಿಂದೆ ಕಾಂಗ್ರೆಸ್ ಆಡಳಿತದಲ್ಲಿದ್ದ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಟ್ಟಿತ್ತು. ಯಾವಾಗಲೆಂದರಾವಾಗ ಕರ್ಫ್ಯೂ ಸಾಮಾನ್ಯವಾಗಿತ್ತು. ಆದರೆ ನಮೋ ಅಧಿಕಾರಕ್ಕೆ ಬಂದಾಗ ಅಲ್ಲಿನ ಕಾನೂನು ಸುವ್ಯವಸ್ಥೆಗೆ ಬಂತು. 1980-90 ರ ದಶಕದಲ್ಲಿ ಅಲ್ಲಿ ನಡೆಯುತ್ತಿದ್ದ ಕರ್ಫ್ಯೂ ಮರೆಯಲಸಾಧ್ಯ. ಆದರೆ ಮೋದಿ ಆಡಳಿತ ವಹಿಸಿದ ಬಳಿಕ ಅಲ್ಲಿ ಕಾನೂನು ಸುವ್ಯವಸ್ಥೆ ಜೊತೆಗೆ ಅಭಿವೃದ್ಧಿಯ ಪರ್ವ ಆರಂಭವಾಯಿತು. ಇಲ್ಲಿ ಗಮನಿಸಬೇಕಾದದ್ದು ಈ ಎರಡೂ ಪ್ರದೇಶಗಳು ಮುಸ್ಲಿಂ ಜನಸಂಖ್ಯೆ ಹೆಚ್ಚಿರುವಂತಹದ್ದುಎಂಬುದು.
ಇನ್ನು ಮೋದಿ ಗುಜರಾತ್ ಪ್ರಧಾನಿಯಾಗಿದ್ದಾಗ ಅಹಮದಾಬಾದ್ನ ಸರ್ಕೇಜ್ ರೋಜಾದ ಅಭಿವೃದ್ಧಿಗೂ ಕೆಲಸ ಮಾಡಿದ್ದಾರೆ. ಅದರ ಸುತ್ತಮುತ್ತಲಿನ ಪ್ರದೇಶಗಳ ಉನ್ನತೀಕರಣಗೊಳಿಸುವಲ್ಲಿಯೂ ಮೋದಿ ಅವರ ಶ್ರಮ ಮರೆಯುವಂತಿಲ್ಲ. ಇಲ್ಲಿನ ಸಂಸ್ಕೃತಿ, ಸಂಪ್ರದಾಯವನ್ನು ಪ್ರಸಾರ ಮಾಡಲು, ಉಳಿಸಲು ಸಾಂಪ್ರದಾಯಿಕ ಉತ್ಸವಗಳನ್ನು ಆಚರಣೆ ಮಾಡಲಾಯಿತು. ಮೋದಿ ಅವರಿಂದ ಅಭಿವೃದ್ಧಿ ಹೊಂದಿದ ಈ ರೋಜಾ ಇಂದಿಗೂ ಅಹಮದಾಬಾದ್ನ ಸಾಂಸ್ಕೃತಿಕ ಹೆಗ್ಗುರುತಾಗಿ ಹೆಸರು ಪಡೆದಿದೆ. ಸಿಡಿ ಸೈಯದ್ ಮಸೀದಿಗೆ ಫೇಸ್ ಲಿಫ್ಟ್ ಸಿಕ್ಕಿತು. ಕಚ್ ಹಾಜ್ಫಿರ್ ದರ್ಗಾದ ಮೂಲಸೌಕರ್ಯ ಅಭಿವೃದ್ಧಿಯ ನಿಟ್ಟಿನಲ್ಲಿಯೂ ಮೋದಿ ಅವರ ಕೊಡುಗೆ ಅಪಾರ. ಇದರಿಂದಾಗಿ ಅಲ್ಲಿಗೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಾಗಲೂ ಈ ಅಭಿವೃದ್ಧಿ ಕಾರಣವಾಯಿತು.
ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿ ಆಗಿ ಅಧಿಕಾರ ಸ್ವೀಕರಿಸಿದ ಬಳಿಕವೂ ಇಸ್ಲಾಂಗೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಅವರು ಇಸ್ಲಾಮಿಕ್ ಹೆರಿಟೇಜ್ ಸಮ್ಮೇಳನದಲ್ಲಿ ಯುವ ಮುಸ್ಲಿಮರಿಗೆ ಕುರಾನ್ ತಿಳಿದುಕೊಂಡಿರಬೇಕಾದ ಅಗತ್ಯತೆಯ ಬಗ್ಗೆ ಮನವರಿಕೆ ಮಾಡಿದ್ದುಸಮುದಾಯಕ್ಕೆ ನೀಡಿದ ದೊಡ್ಡ ಕೊಡುಗೆಯೇ ಸರಿ. ಅವರು ತ್ರಿವಳಿ ತಲಾಖ್ ಪದ್ಧತಿಗೆ ತಿಲಾಂಜಲಿ ಇಟ್ಟು ಮುಸ್ಲಿಂ ಮಹಿಳೆಯರಿಗೆ ಉನ್ನತ ಜೀವನ ನಡೆಸಲು ಅವಕಾಶ ಮಾಡಿಕೊಟ್ಟರು. ಜೊತೆಗೆ ಮುಸ್ಲಿಂ ಮಹಿಳೆಯರಿಗೆ ಮೆಹ್ರಾಮ್ ಇಲ್ಲದೆಯೇ ಹಜ್ಗೆ ತೆರಳಲು ಅವಕಾಶ ನೀಡಿದ್ದು ಸಮುದಾಯದ ಮಹಿಳಾ ಸಬಲೀಕರಣದ ದೃಷ್ಟಿಯಿಂದ ಮಹತ್ವದ ಸಾಧನೆಯಾಗಿದೆ.
ನಮೋ ದರ್ಗಾ ಅಜ್ಮೀರ್ ಷರೀಫ್ ಜೊತೆಗೂ ನಿಕಟ ಬಾಂಧವ್ಯ ಹೊಂದಿದ್ದಾರೆ. ಅಲ್ಲಿ 118 ಶೌಚಾಲಯ ನಿರ್ಮಾಣವಾಗಿದ್ದರ ಹಿಂದೆಯೂ ಮೋದಿ ಅವರ ಸದಾಶಯ ಇದೆ. ಇದುಆಗಮಿಸುವ ಭಕ್ತರಿಗೆ ವಿಶೇಷವಾಗಿ ಮಹಿಳೆಯರಿಗೆ ಹೆಚ್ಚು ಉಪಯೋಗವಾಗಿದೆ. ಜೊತೆಗೆ ದರ್ಗಾವನ್ನು ಅಭಿವೃದ್ಧಿ ಆಶಯದ ಜೊತೆಗೆ ಸುಂದರೀಕರಣಗೊಳಿಸಲಾಗಿದೆ. ಅಸ್ತಾನಾ ಷರೀಫ್ನಲ್ಲಿ ಸಿಲ್ವರ್ ಕಟಹ್ರಾ , ನಿಜಾಮ ಗೇಟ್, ಅಕ್ಬರಿ ಮಸೀದಿ ನವೀಕರಣವಾಗಿದೆ. ಜೊತೆಗೆ ಪಿಎಂ ಮೋದಿ ಅವರು ಕಳೆದ ಆರು ವರ್ಷಗಳಿಂದ ಅಜ್ಮೀರ್ ಷರೀಫ್ನ ಸೂಫಿ ಸಂತ ಹಜರತ್ ಖ್ವಾಜಾ ಮೊಯಿನುದ್ದೀನ್ ಚಿಶ್ತಿಯವರ ದರ್ಗಾದಲ್ಲಿ ಚಾದರ್ ನೀಡುತ್ತಿದ್ದಾರೆ. ಇದು ಅವರಿಗೆ ಮುಸ್ಲಿಂ ಸಂತರಿಗೆ, ನಾಯಕರಿಗೆ ಅವರ ಮನದಲ್ಲಿರುವ ಗೌರವದ ಪ್ರತೀಕವಾಗಿದೆ.
ಮೋದಿ ಅವರು ಮುಸ್ಲಿಂ ರಾಷ್ಟ್ರಗಳ ಜೊತೆಗೂ ಉತ್ತಮ ಸಂಬಂಧ ವೃದ್ಧಿಸಿದ್ದಾರೆ. ಬಹ್ರೇನ್, ಯುಎಇ, ಪ್ಯಾಲೆಸ್ಟೈನ್, ಸೌದಿ ಅರೇಬಿಯಾ ಮತ್ತು ಅಫ್ಘಾನಿಸ್ತಾನಗಳು ಅವರಿಗೆ ತಮ್ಮ ಉನ್ನತ ಗೌರವವನ್ನು ನೀಡಿವೆ. ಅಲ್ಲದೆ ಅನೇಕ ಮುಸ್ಲಿಂ ರಾಷ್ಟ್ರಗಳಿಗೆ ಮೋದಿ ಭೇಟಿ ನೀಡಿದ್ದು ಅವರಲ್ಲಿ ಧರ್ಮ ಆಧಾರಿತ ಬೇಧ ಇಲ್ಲ ಎಂಬುದಕ್ಕೆ ಸಾಕ್ಷಿ.
ಹೀಗೆ ನರೇಂದ್ರ ಮೋದಿ ಹತ್ತು ಹಲವು ಅಭಿವೃದ್ಧಿ ಪೂರಕ ಕಾರ್ಯಗಳನ್ನು ಇಸ್ಲಾಂ ಪರ ಮಾಡಿದ್ದಾರೆ. ಆದರೆ ಕೆಲವು ವಿರೋಧಿಗಳು ಅವರ ಬಗ್ಗೆ ಮುಸ್ಲಿಂ ಸಮುದಾಯದಲ್ಲಿ ತಪ್ಪು ಬಿತ್ತುವ ಕೆಲಸ ಮಾಡುತ್ತಿವೆ. ದ್ವೇಷ, ಓಟ್ಬ್ಯಾಂಕ್ ರಾಜಕಾರಣಕ್ಕಾಗಿ ಮೋದಿ ಅವರನ್ನು ಇಸ್ಲಾಂ ವಿರೋಧಿ ಎಂಬಂತೆ ಬಿಂಬಿಸುವ ಕೆಲಸವಾಗುತ್ತಿದೆ. ಇದೆಲ್ಲದರ ಹಿಂದಿರುವ ಮೋದಿ ವಿರುದ್ಧದ ಕುತಂತ್ರ ಅರಿತು ಭವ್ಯ ದೇಶ ನಿರ್ಮಾಣಕ್ಕೆ ನರೇಂದ್ರ ಮೋದಿಯವರಂತಹ ನಾಯಕರ ಜೊತೆಗೆ ಕೈಜೋಡಿಸುವ ಕೆಲಸವಾಗಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.