ಮಂಗಳೂರು : ದೇಶದ ವಿವಿಧೆಡೆಯಿಂದ ಡ್ರಗ್ಸ್ನ ಸೇವನೆ ಹಾಗೂ ಅದರಿಂದಾದ ಹಲವು ಸಮಸ್ಯೆಗಳ ಬಗ್ಗೆ ದಿನನಿತ್ಯ ಸುದ್ದಿ ಬರುತ್ತದೆ. ಅದರಲ್ಲೂ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಇದಕ್ಕೆ ಬಲಿ ಆಗುತ್ತಿರುವುದು ನಿಜಕ್ಕೂ ಖೇದಕರ ವಿಚಾರವಾಗಿದೆ. ಮಂಗಳೂರಿನಲ್ಲೂ ಕೂಡ ಈ ಬಗ್ಗೆ ಹಲವು ಅನಾಹುತ ಘಟನೆ ನಡೆದು, ವಿದ್ಯಾರ್ಥಿಗಳು ಆತ್ಮಹತ್ಯೆ ನಡೆಸಿರುವಂತಹ, ವಿದ್ಯಾರ್ಥಿಗಳು ಹಲವು ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿರುವ ಘಟನೆ ವರದಿಯಾಗಿರುತ್ತದೆ. ಈ ನಿಟ್ಟಿನಲ್ಲಿ ಮಂಗಳೂರು ವಿವಿಯ ವ್ಯಾಪ್ತಿಯಲ್ಲಿ ಡ್ರಗ್ಸ್ ಬಗ್ಗೆ ಜನಜಾಗೃತಿ ನಡೆಸಲು ವಿಶೇಷ ಪ್ರಯತ್ನ ನಡೆಸಲಾಗುವುದು. ಮಂಗಳೂರು ವಿ.ವಿ.ಸಿಂಡಿಕೇಟ್ ಸಭೆಯಲ್ಲೂ ಈ ಬಗ್ಗೆ ವಿಶೇಷ ಚರ್ಚೆ ನಡೆಸಿ ಮುಂದಿನ ಕ್ರಮಗಳ ಬಗ್ಗೆ ಯೋಜನೆ ರೂಪಿಸಲಾಗುವುದು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ರವಿಚಂದ್ರ ಪಿ. ಎಮ್. ಮತ್ತು ರಮೇಶ್ ಕೆ ಅವರು ಇಂದು ಮಂಗಳೂರು ಪ್ರೆಸ್ ಕ್ಲಬ್ನಲ್ಲಿ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಹೇಳಿದರು.
ಪ್ರತಿಯೊಂದು ಕಾಲೇಜಿನಲ್ಲಿ ಕೂಡ ಡ್ರಗ್ಸ್ ಬಗ್ಗೆ ಜಾಗೃತಿ ಹಾಗೂ ಅದರ ದುಷ್ಪರಿಣಾಮಗಳ ಬಗ್ಗೆ ನಿಯಂತ್ರಣಕ್ಕಾಗಿ ಸಮಿತಿ ರಚನೆ ಮಾಡಿದ್ದು, ಇದನ್ನು ಇನ್ನಷ್ಟು ಬಲಿಷ್ಠಗೊಳಿಸಲಾಗುವುದು. ಅಲ್ಲದೆ ಕಾಲೇಜಿನ ವಿದ್ಯಾರ್ಥಿ ಸಂಘ, NSS, NCC ಮುಂತಾದ ಘಟಕಗಳು ಈ ಬಗ್ಗೆ ವಿಶೇಷ ಪ್ರಯತ್ನ ಮಾಡುವಂತೆ ತರಬೇತಿ ನೀಡಲಾಗುವುದು ಎಂದರು.
ಡ್ರಗ್ಸ್ ಬಗ್ಗೆ ಜನಜಾಗೃತಿ
🔷 ಕಾಲೇಜಿನಲ್ಲಿ ವಾರ್ಷಿಕ ಆರಂಭದಲ್ಲಿ ವಿದ್ಯಾರ್ಥಿ ಜಾಗೃತಿ ಸಭೆ.
🔷 ಕಾಲೇಜಿನಲ್ಲಿ ಈ ಬಗ್ಗೆ Task force ರೂಪಿಸುವಿಕೆ.
🔷 ಸ್ವಯಂಸೇವಾ ಜತೆ ಸೇರಿ ಜನಜಾಗೃತಿ ಅಭಿಯಾನ.
🔷 ಡ್ರಗ್ಸ್ ವಿರುದ್ಧ ಕಠಿಣ ಕಾನೂನು ರೂಪಿಸುವಂತೆ ರಾಜ್ಯ ಸರಕಾರಕ್ಕೆ ಮನವಿ.
🔷 ವಿದ್ಯಾರ್ಥಿಗಳಿಂದ ನಾನು ಡ್ರಗ್ಸ್ ಸೇವನೆ ಮಾಡುವುದಿಲ್ಲ ಹಾಗೂ ಡ್ರಗ್ಸ್ ಬಗ್ಗೆ ಜಾಗೃತಿ ಕೆಲಸ ಬಗ್ಗೆ ಸಂಕಲ್ಪ.
🔷 ಡ್ರಗ್ಸ್ ಸಮಸ್ಯೆ ಬಗ್ಗೆ ಸಾಕ್ಷ್ಯಚಿತ್ರ ಪ್ರದರ್ಶನ.
🔷 ಡ್ರಗ್ಸ್ ಮಾರಾಟಗಾರರನ್ನು ಅದರ ದುಶ್ಚಟಕ್ಕೆ ಬಲಿ ಬಿಳಿಸುತ್ತಿರುವರನ್ನು ಅದರ ಮೋಹಕ- ಸರ್ವನಾಶಕ ಜಾಲ ಸೃಷ್ಠಿಸುತ್ತಿರುವರನ್ನು ಬಗ್ಗು ಬಡಿಯಬೇಕು. ರಾಜ್ಯದ ಸಮಸ್ತ ಜನತೆ ಸರ್ಕಾರದ ಕಠಿಣ ಕ್ರಮಗಳನ್ನು ಎದುರು ನೋಡುತ್ತದೆ.
🔷 ಡ್ರಗ್ಸ್ ನಿಯಂತ್ರಣ ಕೇವಲ ಪೋಲಿಸರ ಮತ್ತು ಸರ್ಕಾರದ ಕೆಲಸವಲ್ಲ ಪ್ರತಿಯೊಬ್ಬ ಜಾಗೃತ ನಾಗರೀಕನೂ ಈ ಬಗ್ಗೆ ಸ್ಪಂದಿಸಬೇಕು. ಕಾನೂನು ರಕ್ಷಕರಿಗೆ ಸಕಾಲಕ್ಕೆ ಮಾಹಿತಿ ಕೊಟ್ಟು ಮುಂದೆ ಆಗುವ ಅನರ್ಥವನ್ನು ತಪ್ಪಿಸಬೇಕು.
🔷 ಡ್ರಗ್ಸ್ ದಂಧೆಗೂ ದೇಶದ್ರೋಹಕ್ಕೂ ನಂಟಿದೆ. ಅಂತೆಯೇ ಈ ದಂಥೆಯವರನ್ನು ರಕ್ಷಿಸುವುದೆಂದರೆ, ಅದನ್ನು ಯಾರೇ ಮಾಡಿದರೂ ಅದು ದೇಶದ್ರೋಹದ ಕೃತ್ಯವಾಗುತ್ತದೆ. ಅದಕ್ಕೂ ಕಠಿಣ ದಂಡನೆಯಾಗಬೇಕು.
🔷 ಸಮಾಜದ ಬುದ್ದಿಜೀವಿಗಳು, ಜನನಾಯಕರು, ಸಾಹಿತಿಗಳು, ಮಠಾದೀಶರು ಸಂಘ ಸಂಸ್ಥೆಗಳ ನಾಯಕರು ಪಕ್ಷಭೇದ ಮರೆತು ಎಲ್ಲಾ ರಾಜಕೀಯ ನಾಯಕರು ಜನಾಭಿಪ್ರಾಯ ರೂಪಿಸುವ ಮಾಧ್ಯಮದ ಬಂಧುಗಳು, ವಿದ್ಯಾರ್ಥಿ ನಾಯಕರು, ಅಧ್ಯಾಪಕ ಬಂಧುಗಳು, ಶಿಕ್ಷಣ ತಜ್ಞರು ಎಲ್ಲರ ಸಹಕಾರದೊಂದಿಗೆ ಈ ಒಂದು ಪಿಡುಗನ್ನು ತೊಡಗಿಸಲು ಪ್ರಯತ್ನಿಸಬೇಕು ಎಂದು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.