ನವದೆಹಲಿ: ಭಾರತವು ಪ್ರಮುಖ ಲಸಿಕೆ ಉತ್ಪಾದಕನಾಗಿದೆ ಮತ್ತು ದೊಡ್ಡ ಪ್ರಮಾಣದಲ್ಲಿ ಕೋವಿಡ್-19 ಲಸಿಕೆ ತಯಾರಿಸಲು ಅದರ ಸಹಕಾರ ಅಗತ್ಯವಾಗಿದೆ ಎಂದು ಮೈಕ್ರೋಸಾಫ್ಟ್ ಕಾರ್ಪ್ ಪ್ರಧಾನ ಸಂಸ್ಥಾಪಕ ಬಿಲ್ ಗೇಟ್ಸ್ ಹೇಳಿದ್ದಾರೆ.
2021ರ ಮೊದಲ ತ್ರೈಮಾಸಿಕದ ವೇಳೆಗೆ ಹಲವಾರು ಕೊರೋನಾವೈರಸ್ ಲಸಿಕೆಗಳು ಅಂತಿಮ ಹಂತದಲ್ಲಿರುತ್ತವೆ ಮತ್ತು ಭಾರತದಲ್ಲಿ ಲಸಿಕೆ ದೊಡ್ಡ ಪ್ರಮಾಣದಲ್ಲಿ ಉತ್ಪಾದನೆಯಾಗಲಿದೆ ಎಂದು ಎಂದು ಗೇಟ್ಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
“ಲಸಿಕೆ ಸುರಕ್ಷಿತ ಮತ್ತು ಬಳಕೆಗೆ ಯೋಗ್ಯ ಎಂದು ತಿಳಿದು ಬಂದ ಕೂಡಲೇ ಅದನ್ನು ನಾವು ಭಾರತದಿಂದ ಸಾಕಷ್ಟು ಪ್ರಮಾಣದಲ್ಲಿ ಪಡೆಯಲು ಬಯಸುತ್ತೇವೆ” ಎಂದಿದ್ದಾರೆ.
ಲಸಿಕೆ ಅಭಿವೃದ್ಧಿ ಮತ್ತು ಉತ್ಪಾದನೆಯಲ್ಲಿ ಭಾರತದ ಪಾತ್ರದ ಕುರಿತು ಮಾತನಾಡಿದ ಗೇಟ್ಸ್, “ಅಭಿವೃದ್ಧಿಶೀಲ ರಾಷ್ಟ್ರಗಳ ಪರವಾಗಿ ಜವಾಬ್ದಾರಿಯನ್ನು ಹಂಚಿಕೊಳ್ಳಲು ಜಗತ್ತು ಭಾರತದತ್ತ ನೋಡುತ್ತಿದೆ. ಲಸಿಕೆ ಉತ್ಪಾದನೆಯಲ್ಲಿ ಮಹತ್ವದ ಪಾತ್ರ ವಹಿಸಲು ಭಾರತದ ಇಚ್ಛೆ ಮತ್ತು ಇತರ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಅದರ ಪ್ರವೇಶವನ್ನು ಒದಗಿಸುವುದು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ನಿರ್ಣಾಯಕ ಹೆಜ್ಜೆಯಾಗಿದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
“ಸಂಶೋಧಕರು ಸುರಕ್ಷಿತ, ಪರಿಣಾಮಕಾರಿ ಕೊರೋನಾವೈರಸ್ ಲಸಿಕೆಗಳನ್ನು ಅಭಿವೃದ್ಧಿಪಡಿಸಲು ಬಹಳ ಹತ್ತಿರದಲ್ಲಿದ್ದಾರೆ, ಆದರೆ ವಿಜ್ಞಾನದ ಪ್ರಗತಿಯನ್ನು ವಿಜ್ಞಾನದ ಔದಾರ್ಯದೊಂದಿಗೆ ಪೂರೈಸಬೇಕು. ಜನ ವಾಸಿಸುವ ಸ್ಥಳವನ್ನು ಲೆಕ್ಕಿಸದೆ ಪ್ರತಿಯೊಬ್ಬರಿಗೂ ಈ ಲಸಿಕೆಗಳನ್ನು ಲಭ್ಯವಾಗವುದನ್ನು ಖಚಿತಪಡಿಸಿಕೊಳ್ಳಲು ನಮಗೆ ಸರ್ಕಾರ ಮತ್ತುಔಷಧೀಯ ಉದ್ಯಮದ ನಾಯಕರು ಬೇಕಾಗಿದ್ದಾರೆ”ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.