ಇತ್ತೀಚಿಗೆ ಭಾರತ ಸರ್ಕಾರ 59 ಚೀನಿ Appಗಳನ್ನು ಬ್ಯಾನ್ ಮಾಡಿದೆ. ನಾವು ಗೊತ್ತಿದ್ದೊ ಗೊತ್ತಿಲ್ಲದೆಯೋ ಹಲವಾರು ಶತ್ರುರಾಷ್ಟ್ರಗಳ ಮೊಬೈಲ್ Appಗಳನ್ನು ಬಳಸುತ್ತಿದ್ದೇವೆ. ಅವುಗಳಿಂದ ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆಯಾಗುವುದಲ್ಲದೆ ಮತ್ತು ನಮ್ಮ ವೈಯಕ್ತಿಕ ಮಾಹಿತಿಗಳನ್ನು (Data privacy) ಬಳಸಿಕೊಂಡು ನಮ್ಮ ಜೊತೆಗೆ ಕಪ್ಪು ಜಾಲ(Black net)ದ ಮೂಲಕ ನಮ್ಮ ಸಂಪೂರ್ಣ ಮಾಹಿತಿಗಳನ್ನು ಪಡೆದುಕೊಂಡು ದುರುಪಯೋಗ ಪಡಿಸಿಕೊಳ್ಳುತ್ತಿವೆ. ಇದಕ್ಕೆ ಮೋಸ ಹೋದವರ ಸಂಖ್ಯೆಯೂ ಕೂಡಾ ಯಥೇಚ್ಛವಾಗಿದೆ.
ಉದಾಹರಣೆಗೆ ಲಾಕ್ಡೌನ್ ನಂತರ ಭಾರತದಲ್ಲಿ ಹೆಚ್ಚಾಗಿ ಬಳಕೆಗೆ ಬಂದಿದ್ದು ಮತ್ತು ಜನಪ್ರಿಯತೆಗಳಿಸಿದ್ದು Zoom App, ಇದನ್ನು ಶಾಲೆಯ ಮಕ್ಕಳಿಗೆ ಆನ್ಲೈನ್ನಲ್ಲಿ ತರಗತಿಗಳನ್ನು ನಡೆಸುವುದರಿಂದ ಹಿಡಿದು ಸಚಿವಾಲಯದ ಮೀಟಿಂಗ್ಗಳವರೆಗೆ ಬಳಸಿದ್ದು ನಿಮಗೆಲ್ಲರಿಗೂ ಗೊತ್ತಿದೆ. ಇದು ಸುರಕ್ಷಿತ ಅಲ್ಲ ಎನ್ನುವುದಕ್ಕೆ ಮುಖ್ಯ ಕಾರಣವಿದೆ. ಇದನ್ನು ಹ್ಯಾಕರ್ಗಳು ಸುಲಭವಾಗಿ ಹ್ಯಾಕ್ ಮಾಡಬಹುದು ಎಂಬುದು ತಜ್ಞರ ವಾದವಾಗಿದೆ ಮತ್ತು ಮೀಟಿಂಗ್ಗಳು ನಡೆಯುತ್ತಿರುವಾಗ ಮಧ್ಯದಲ್ಲಿ ಅಶ್ಲೀಲ ವಿಡಿಯೋಗಳು ಬಂದಿರುವ ಘಟನೆಗಳೂ ಬೆಳಕಿಗೆ ಬಂದಿವೆ. ಇದರ ಬದಲಾಗಿ ಏನನ್ನು ಬಳಸಬಹುದು ಎಂದು ಈ ಕೆಳಗೆ ವಿವರ ನೀಡಲಾಗಿದೆ.
ಇನ್ನೂ Tik Tok.! ಇದರ ಕಥೆಯೇ ಬೇರೆ ಇದರ ಮುಖ್ಯ ಕಛೇರಿ ಚೀನಾದಲ್ಲಿದೆ ಮತ್ತು ಪಕ್ಕಾ ಚೀನಾ ಆ್ಯಪ್ ಆಗಿದೆ. ಯುವಕರ ಪ್ರತಿಭೆಯನ್ನು ಪ್ರದರ್ಶಿಸಿಸಲು ಚೀನಾ ಆ್ಯಪ್ಗಳೇ ಬೇಕೇನು.? ಇದರ ಬದಲಾಗಿ ಭಾರತದ ಆ್ಯಪಗಳಿವೆ ಅದನ್ನು ಬಳಸೋಣ.
UC browser ಅನ್ನೋ ಕೆಂಪು ಮೂತಿಯರ ಆ್ಯಪ್ ಭಾರತದಲ್ಲಿ ಎಷ್ಟೊಂದು ಬೆಳೆದು ಬಿಟ್ಟಿತ್ತೆಂದರೆ ನ್ಯೂಸ್ ವಾಹಿನಿಯಾಗಿ ಕಾರ್ಯನಿರ್ವಹಿಸುವ ಮಟ್ಟಿಗೆ ಇಳಿದು ಬಿಟ್ಟಿತ್ತು. ಭಾರತದ ರಾಜಕೀಯ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಕೆಲವೊಂದಿಷ್ಟು ಸಂದರ್ಭದಲ್ಲಿ ಮಿಲಿಟರಿ ವ್ಯವಸ್ಥೆಯ ಕುರಿತು ಮಾಹಿತಿ ನೀಡುವ ದಾರ್ಷ್ಟ್ಯ ತೋರಿಸುತಿತ್ತು. ಇದರಿಂದ ಭಾರತದ ಸಂಪೂರ್ಣ ಮಾಹಿತಿ ಸೋರಿಕೆಯಾಗಿ ಚೀನಿಯರ ಕೈಗೆ ಸುಲಭವಾಗಿ ಸೇರಿ ಹೋಗುತಿತ್ತು. ಒಂದು ರೀತಿ ಗೂಢಾಚಾರ್ಯ ಕೆಲಸ ಮಾಡುತ್ತಿತ್ತು ಅನ್ನಿ. ಶತ್ರು ಸೈನಿಕರು ಇದನ್ನು ಬಳಸಿಕೊಂಡು ಭಾರತದ ಮೇಲೆ ತನ್ನ ಪ್ರತಿತಂತ್ರ ಹೆಣೆಯುವಲ್ಲಿ ಸಫಲವಾಗುತ್ತಿದ್ದರು.
Share it App ಇದು ಕೂಡಾ ಚೀನಿಯರ ಆ್ಯಪ್ ಆಗಿದ್ದು, ಇದು ಕೂಡಾ ಬೇಹುಗಾರಿಕೆ ಕೆಲಸ ಮಾಡುವಲ್ಲಿ ಚೀನಿಯರಿಗೆ ಸಹಾಯ ಮಾಡುತ್ತಿತ್ತು. ಬರಿ files share ಮಾಡುತ್ತಿದೆ ಎಂದು ಮೇಲ್ಮೈ ತೋರಿಕೆಯಾದರೆ ಆಂತರ್ಯದಲ್ಲಿ ಭಾರತದ ಎಲ್ಲಾ ಮಾಹಿತಿಗಳು ಹಂಚುವುದು ಹಾಗೂ ಯುವಕರ ಮನಸ್ಥಿತಿಯ ಕುರಿತು ಮಾಹಿತಿ ಚೀನಿಯರ ಕೈಗೆ ಸೇರಿಸುವಲ್ಲಿ ಸಫಲವಾಗಿತ್ತು.
ಇನ್ನೂ Cam scanner ಕುರಿತು ಹೇಳಬೇಕೆಂದರೆ ಭಾರತದಲ್ಲಿನ ಈ ಆ್ಯಪ್ ಬಳಸಿ ಸ್ಕ್ಯಾನ್ ಮಾಡುವ ಪ್ರತಿಯೊಂದು Document ಚೀನಾದಲ್ಲಿ Store ಆಗುತ್ತಿತ್ತು ಎಂದು ಕೇಳಿದಾಗ ಭಯವಾಗುತ್ತದೆ. ಸಾಮಾನ್ಯ ವ್ಯಕ್ತಿಯಿಂದ ಹಿಡಿದು ದೊಡ್ಡ ದೊಡ್ಡ ಸರ್ಕಾರಿ ವ್ಯವಸ್ಥೆಯವರೆಗೆ ಇದರಲ್ಲಿ ಸ್ಕ್ಯಾನ್ ಆದ Document ಚೀನಾದ ತೆಕ್ಕೆಗೆ ಸುಲಭವಾಗಿ ಧಕ್ಕುತ್ತಿತ್ತು ಎಂದರೆ ಅಬ್ಬಾ! ಎಂತಹ ಜಾಲ ಇದು.
ಚೀನಾ ಮಾಡುವ ಕುತಂತ್ರದಿಂದ ಜಗತ್ತಿನ ಹಲವಾರು ರಾಷ್ಟ್ರಗಳು ನಲುಗಿ ಹೋಗುತ್ತಿವೆ. ವ್ಯಾಪಾರದ ನೇಪದಲ್ಲಿ, ತಂತ್ರಜ್ಞಾನದ ಹಂಚಿಕೆಯ ನೇಪದಲ್ಲಿ, ಬಡ ರಾಷ್ಟ್ರಗಳಿಗೆ ಆರ್ಥಿಕ ಸಹಾಯ ಮಾಡುವ ನೇಪದಲ್ಲಿ ತನ್ನ ಬುಟ್ಟಿಗೆ ಕೆಡುವಿಕೊಂಡು ಅವುಗಳ ಮೇಲೆ ತನ್ನ ಹಿಡಿತ ಸಾಧಿಸವಲ್ಲಿ ಸಫಲವಾಗಿದೆ. ಚೀನಾದ ಮುಂದಿನ ಗುರಿ ಭಾರತ! ಹೀಗಾಗಿ ಭಾರತೀಯರಾದ ನಾವು ಚೀನಾ ವಸ್ತುಗಳನ್ನು ಬಳಸುವುದು ಕಡಿಮೆ ಮಾಡುವುದರ ಜೊತೆ ಜೊತೆಗೆ ಚೀನಿಯರ ಈ ಎಲ್ಲಾ ಆ್ಯಪ್ಗಳನ್ನು ಬಳಸಬಹುದು ಕೂಡಾ ನಿಲ್ಲಿಸಬೇಕಾಗಿದೆ. ಭಾರತ ಇದು ಸ್ವಾವಲಂಬಿ ಭಾರತವನ್ನಾಗಿ ಮಾಡಬೇಕಾದ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ.
ಇನ್ನೂ ಹೇಳುತ್ತಾ ಹೋದರೆ ತುಂಬಾ ಇದೆ ಸದ್ಯ 59 ಚೀನಾ ಆ್ಯಪ್ಗಳಿಗೆ ಭಾರತ ಸರ್ಕಾರ ನಿರ್ಬಂಧ ಹೇರಿದೆ. ಇದು ಖುಷಿ ವಿಚಾರವೂ ಕೂಡಾ. Cam scanner, shareit, clean masters, Duspeed booster, uc browser, we chat , wps office, ಮುಂತಾದ ಪ್ರಮುಖ ಆ್ಯಪ್ಗಳನ್ನು ಭಾರತ ಸರ್ಕಾರ ನಿರ್ಬಂಧಿಸಿದೆ. ಇದರ ಪರ್ಯಾಯವಾಗಿ ಯಾವ ಯಾವ ಆ್ಯಪ್ಗಳನ್ನು ಬಳಸಬಹುದು ಎಂದು ಕೆಳಗೆ ಕೊಡಲಾಗಿದೆ. ಇಲ್ಲಿ ಗಮನಿಸುವ ವಿಚಾರವೆನೆಂದರೆ ಭಾರತದ ಯುವಕರು ಚೀನಾ ಆ್ಯಪ್ಗಳಿಗೆ ಬದಲಾಗಿ ಹೊಸ ಆ್ಯಪ್ಗಳನ್ನು ತಯಾರಿಸಲು ಮುಂದೆ ಬರುತ್ತಿದ್ದಾರೆ. ಬರಬೇಕು ಕೂಡಾ. ಅವಶ್ಯಕತೆ ಅನ್ವೇಷಣೆಯ ತಾಯಿ ಅಂತಾರೆ. ಅವಶ್ಯಕತೆ ಬಿದ್ದಾಗ ಭಾರತದ ಯುವಕರು ದೇಶದ ಜೊತೆ ನಿಲ್ತಾರೆ ಎನ್ನುವುದು ಕೂಡಾ ಅಷ್ಟೇ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಸದ್ಯ ಇಷ್ಟು ಸಾಕು.
ಚೀನೀ ಆ್ಯಪ್ಗಳ ಬದಲಾಗಿ ಪರ್ಯಾಯವಾಗಿ ಈ ಕೆಳಗಿನ ಆ್ಯಪ್ಗಳನ್ನು ಬಳಸಬಹುದು.
Meeting Apps
1) zoom app- ಬದಲಾಗಿ Jio meet, say namaste video conferencing, Cisco WebEx, ಕನ್ನಡಿಗರು ಸಿದ್ದಪಡಿಸಿದ vidphone Google meet.
Dcument Scanning Apps
2) cam scanner – ಬದಲಾಗಿ Doc scanner, office lens, adobe scan,
Sharing file Apps
3) share it- ಬದಲಾಗಿ ಕನ್ನಡಿಗನೇ ಕಂಡುಹಿಡಿದ z share, share all,
Time pass App
4) Tiktok- ಬದಲಾಗಿ Chingari, Roposo, share chat, Instagram.
Video editing App
5) Viva video – ಬದಲಾಗಿ kine master, in shot,
Shopping Apps
6) aliexpress, club factory, shine – ಬದಲಾಗಿ myntra, line road, TATA cliQ
photos Apps
7) beauty plus – ಬದಲಾಗಿ selfie camera, pics art ect.
Lock apps
8) apps lock ಬದಲಾಗಿ Norton app, ಇವರದ್ದೆ Mobile antivirusಇದೆ
VPN Apps
9) turbo VPN ಬದಲಾಗಿ proton VPN
cleaners apps
10) clean master and Du speed booster ಬದಲಾಗಿ Ccleaner Norton cleaner,
Browseing Apps
11) UC browser ಬದಲಾಗಿ ಭಾರತದ Jio browser, epic privacy browser, american crome , Firefox,
Office work Apps
12) wps office ಬದಲಾಗಿ Ms office
messenger
13) we chat ಬದಲಾಗಿ WhatsApp, signal messenger, telegram,
ಇನ್ನೂ ಮುಂತಾದವು ಇವೆ. ಇಲ್ಲಿ ಕೆಲವೊಂದಿಷ್ಟು ಸ್ವದೇಶಿ ಆ್ಯಪ್ಗಳು ಮತ್ತು ಚೀನಾವಲ್ಲದ ವಿದೇಶ ಆ್ಯಪ್ಗಳು ಮಾತ್ರ ಕೊಡಲಾಗಿದೆ. ಇನ್ನೂ ಚೀನಾ ಆ್ಯಪ್ಗಳಿಗೆ ಪರ್ಯಾಯ ಸೃಷ್ಟಿಸಲು, ಪರಿಪೂರ್ಣ ಸ್ವಾವಲಂಬಿಯಾಗಲು ಭಾರತದ ಧೀರ ಯುವ ಪಡೆಯಿಂದ ತಂತ್ರಜ್ಞಾನದ ಬಳಕೆ ಮತ್ತು ಡಿಜಿಟಲ್ ಸಂಶೋಧನೆ ಆಗಬೇಕಾಗಿದೆ.
ದಯವಿಟ್ಟು ಸ್ನೇಹಿತರೆ, ಚೀನೀಯರ ಆ್ಯಪ್ಗಳನ್ನು ಬಳಸುವುದನ್ನು ನಿಲ್ಲಿಸೋಣ ಮತ್ತು ದೇಶಿಯ ಮತ್ತು ಶತ್ರುವಲ್ಲದ ದೇಶದ ಆ್ಯಪ್ಗಳನ್ನು ಬಳಸೋಣ. ಸಾಧ್ಯವಾದರೇ ನಾವೇ ನಮ್ಮ ಅವಶ್ಯಕತೆಗೆ ತಕ್ಕಂತೆ ಆ್ಯಪ್ಗಳನ್ನು ಅಭಿವೃದ್ಧಿ ಪಡಿಸೋಣ. ತಾಯಿ ಭಾರತಾಂಬೆಯನ್ನು ವಿಶ್ವಗುರುವಾಗಿಸೋಣ. ವಂದೇ ಮಾತರಂ ಜೈ ಹಿಂದ್
ಸುನೀಲ ರಜಪೂತ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.