ಕೊರೋನಾ ಸಮಯದಲ್ಲಿ ಸಾಕಷ್ಟು ಜನರು, ಸಂಸ್ಥೆಗಳು, ಸಂಘಟನೆಗಳು ಬಡವರ ಸೇವೆಗೆ ನಿಂತಿವೆ. ಆದರೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಮಾತ್ರ ಪ್ರಚಾರದ ಹಂಗನ್ನು ತೊರೆದು ಬಡವರಿಗೆ, ಅವಶ್ಯಕತೆ ಇದ್ದವರಿಗೆ ಅವಶ್ಯಕ ಸಾಮಗ್ರಿಗಳನ್ನು ಒದಗಿಸುವುದು ಪರಮ ಧ್ಯೇಯವಾಗಿಸಿಕೊಂಡಿದೆ. ನಮ್ಮ ಊರಲ್ಲಿ ನಮ್ಮ ಏರಿಯಾದಲ್ಲಿ ಒಬ್ಬರೇ ಒಬ್ಬರೂ ಉಪವಾಸ ಮಲಗಬಾರದು ಎನ್ನುವ ಧ್ಯೇಯದೊಂದಿಗೆ ಸಂಘದ ಹಿರಿಯರ ಸಲಹೆಯ ಮೇರೆಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೂ ಸೇವೆಯನ್ನು ಸ್ವಯಂಸೇವಕರು ಮಾಡುತ್ತಿದ್ದಾರೆ.
ಯಾವಾಗಲೂ ಸ್ವಯಂಸೇವಕ ಮಾಡುವ ಕಾರ್ಯ ಸಮಾಜದಲ್ಲಿ ವಿಶೇಷವಾಗಿಯೇ ಇರುತ್ತದೆ. ಅದು ಸಮಾಜಕ್ಕೆ ಮಾದರಿ ಎನಿಸುತ್ತದೆ. ಆ ತರಹ ಒಬ್ಬ ಸ್ವಯಂಸೇವಕ ಮಾಡಿದ ಮಾದರಿ ಕಾರ್ಯದ ಬಗ್ಗೆ ತಿಳಿಯೋಣ.
ಬಾಗಲಕೋಟೆ ನಗರದ ಸ್ವಯಂಸೇವಕರು ಸಾಕಷ್ಟು ಸೇವಾಕಾರ್ಯಗಳನ್ನು ಮಾಡುತ್ತಿದ್ದಾರೆ. ಬಾಗಲಕೋಟೆ ರೆಡ್ ಜೋನ್ನಲ್ಲಿದ್ದ ಕಾರಣ ಸಂಪೂರ್ಣವಾಗಿ ಜನರು ತಿರುಗಾಟ ಇರಲೇ ಇಲ್ಲ. ಸ್ವಯಂಸೇವಕರು ಸೇವಾ ಕಾರ್ಯ ಮಾಡುವುದಕ್ಕೂ ಸಾಕಷ್ಟು ಕಷ್ಟ ಇತ್ತು. ಮೂರ್ನಾಲ್ಕು ಏರಿಯಾಗಳನ್ನು(ಹಳೆಯ ಬಾಗಲಕೋಟೆ) ಜಿಲ್ಲಾಡಳಿತ ಸಂಪೂರ್ಣ ಸೀಲ್ಡೌನ್ ಮಾಡಿತ್ತು. ಅಲ್ಲಿ ಸರ್ಕಾರದ ರೇಶನ್, ಹಾಲು ಬಿಟ್ಟರೇ ಮತ್ತೇನು ತಲುಪುತ್ತಿರಲಿಲ್ಲ. ಹಣ ಕೊಡುತ್ತೇನೆ ಎಂದರೂ ಅಲ್ಲಿನ ಜನರಿಗೆ ಏನೂ ಸಿಗುತ್ತಿರಲಿಲ್ಲ. ಏನಾದರೂ ಮಾಡಿ ಕಷ್ಟ ಪಟ್ಟು ಬಡವರಿಗೆ ತಲುಪಿಸಲು ಹೋದರೆ ಪೊಲೀಸ್ ಲಾಟಿ ಏಟಿನಿಂದ ಮುಕ್ತಿ ಇರಲಿಲ್ಲ.
ಮೊದಲನೇ ಲಾಕ್ಡೌನ್ನ ಸಮಯದ ಎರಡು ವಾರಗಳ ನಂತರ ಜನಕ್ಕೆ ಲಾಕಡೌನ್ ಬಿಸಿತುಪ್ಪವಾಗಿ ಅನಿಸಿದ್ದು ಈ ಸಮಯದಲ್ಲಿ. ಸಾಕಷ್ಟು ಜನಕ್ಕೆ ಸಮಸ್ಯೆ ಆಗಿದ್ದು ಇದೇ ಸಮಯದಲ್ಲಿ ಹೆಚ್ಚು. ಕೆಳಮಟ್ಟದಿಂದ ಬೆಳದು ಹೋದ ಸ್ವಯಂಸೇವಕ ನಿಶ್ಚಯ ಮಾಡ್ತಾರೆ. ಬಡವರಿಗೆ ಅವಶ್ಯಕತೆ ಇದ್ದವರಿಗೆ ಏನಾದರೂ ಸಹಾಯ ಮಾಡಬೇಕಂತ. ಆಗ ಕೆಲವರ ಜೊತೆಗೆ ಚರ್ಚಿಸಿದ ನಂತರ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಹಣ ಹಾಕಿ ಅಂತ ಸಲಹೆ ಕೊಡ್ತಾರೆ. ಅದನ್ನು ಒಪ್ಪದ ಆ ಸ್ವಯಂಸೇವಕ ತನ್ನ ರೆಂಜ್ಗೆ ತಕ್ಕಂತೆ ಬಡವರಿಗೆ ನೇರವಾಗಿ ದಿನಸಿ, ಕಾಯಿಪಲ್ಯ ಕೊಡಲು ನಿಶ್ಚಯ ಮಾಡ್ಕೋತಾನೆ. ತಾನೇ ಸ್ವತಃ ಪಟ್ಟಿ ತಯಾರಿಸಿ ಕೊಡೋದಾದ್ರೆ ಒಂದೇ ಏರಿಯಾಕ್ಕೆ ಮಾತ್ರ ಕೋಡೋದಾಗುತ್ತೆ ಅಂತ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ ಹಾಕುತ್ತಾನೆ. ಅವಶ್ಯಕತೆ ಇದ್ದವರಿಗೆ ನನ್ನಿಂದಾಗುವ ಸಹಾಯ ಮಾಡುತ್ತೇನೆ ನಿಮ್ಮ ಗಮನಕ್ಕೆ ಬಂದವರನ್ನು ತಿಳಿಸಿ ಅಂತ. ಆವಾಗ ಸಾಕಷ್ಟು ಕಾಮೆಂಟ್, ಕಾಲ್, ಮೆಸೇಜ್ಗಳ ಮೂಲಕ ಬಡವರಿಗೆ ಮುಟ್ಟಿಸಬೇಕಾದ ಹೆಸರು ವಿಳಾಸ ಬಂದೇ ಬಿಟ್ಟವು. ಅವರಿದ್ದಲ್ಲಿಗೆ ಹೋಗಿ ಮುಟ್ಟಿಸೋದು ಅಸಾಧ್ಯ. ಪೊಲೀಸ್ ಕಿರಿಕಿರಿ ಬೇರೆ. ಅದಕ್ಕಾಗಿ ಆ ಸ್ವಯಂಸೇವಕ ಮಾಡಿದ ಉಪಾಯವೇನೆಂದರೆ ಆ ಲಿಸ್ಟ್ನಲ್ಲಿದ್ದವರು ಅವರ ಏರಿಯಾದಲ್ಲಿರುವ ಕಿರಾಣಿ ಅಂಗಡಿಯವರ ಹತ್ತಿರ ಬೇಕಾದ ಸಾಮಗ್ರಿ ತಗೋಬೇಕು ಅದರ ಹಣವನ್ನು ಆ ಕಿರಾಣಿ ಅಂಗಡಿ ಮಾಲಿಕನಿಗೆ ಈ ಸ್ವಯಂಸೇವಕ ಹಣ ಪೇ ಮಾಡುತ್ತಾನೆ.
ಆ ಸ್ವಯಂಸೇವಕ ಸುಮಾರು ತನ್ನ ಕೈಯಿಂದ 50 ಸಾವಿರ ರೂಪಾಯಿಗಳ ಸಾಮಗ್ರಿಗಳನ್ನು ಹಂಚುವ ಗುರಿ ಹೊಂದಿರುತ್ತಾನೆ. ಈ ಸ್ವಯಂಸೇವಕನ ಸೇವೆ ಕಂಡು ಆತ್ಮೀಯರು ಹಾಗೂ ಸ್ನೇಹಿತರು 26 ಸಾವಿರ ರೂಪಾಯಿಗಳನ್ನು ಇವನ ಅಕೌಂಟ್ಗೆ ಹಾಕುತ್ತಾರೆ. ಒಟ್ಟಾಗಿ 64 ರಿಂದ 70 ಸಾವಿರ ರೂಪಾಯಿಗಳವರೆಗೆ ನಿರಂತರವಾಗಿ ಕಿರಾಣಿ ಸಾಮಗ್ರಿಗಳನ್ನು ಹಂಚುತ್ತಾರೆ. ಒಟ್ಟು 222 ಮನೆಗಳಿಗೆ ಒಂದು ವಾರಕ್ಕೆ ಬೇಕಾದ ಅವಶ್ಯಕ ಸಾಮಗ್ರಿಗಳನ್ನು ತನ್ನ ಮನೆಯಲ್ಲೇ ಕುಳಿತು ತಲುಪಿಸುತ್ತಾನೆ.
ಒಳ್ಳೆಯ ಕೆಲಸ ಯೋಜಿಸಿಕೊಂಡರೆ ಎಲ್ಲವೂ ತನ್ನಿಂದ ತಾನಾಗಿಯೇ ಸುಲಲಿತವಾಗಿ ನಡೆಯುತ್ತದೆ. ಕೊನೆಗೊಂದು ನೆಮ್ಮದಿಯ ಸೇವೆ ಅವರದ್ದಾಗುತ್ತದಲ್ಲವೆ ? ಬಡವರ, ಅವಶ್ಯವಿದ್ದವರ ಮನೆಗೆ ತಲುಪಿಸುವುದು ಅಷ್ಟು ಸುಲಭವಲ್ಲ. ಆದರೆ ಸ್ವಯಂಸೇವಕನ ತಾಳ್ಮೆಯ ಯೋಜನೆಯಿಂದ ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಜೊತೆಗೆ ಸೇವಾಭಾವ ಪೂರ್ಣಗೊಳಿಸಿದ ಸಂತೃಪ್ತಿ ಕೊನೆಯಲ್ಲಿ ಅವನ ಮೊಗದಲ್ಲಿ ಕಾಣುವುದು ಸಹಜ.
ಪರಿಚಯವಿಲ್ಲದ ಎಷ್ಟೋ ಹಿರಿಜೀವಗಳು ಮಮ್ಮಲ ಮರುಗುತ್ತಿದ್ದ ಅಸಹಾಯಕರುಗಳು, ಕೆಲಸ ಕಳೆದುಕೊಂಡಿದ್ದ ಮಾತಾ ಭಗಿನಿಯರು ಇವರ ಅಲ್ಪ ಸೇವೆಯ ಸಹಾಯ ಪಡೆದು ಅಲ್ಲಿಂದಲೇ ಹರಸಿದ್ದಾರೆ. ಸಾಮಾಜಿಕ ಜಾಲತಾಣ ಮೂಲಕ ಸಹಾಯ ಮಾಡುವುದನ್ನು ಕಂಡ ಒಬ್ಬರು ಸಿಂಧನೂರಿನಿಂದ ಕಾಲ ಮಾಡಿ ಬಾಗಲಕೋಟೆಯಲ್ಲಿರುವ ತನ್ನ ತಾಯಿಗೆ ಮೆಡಿಸಿನ್ ಹಾಗೂ ದಿನಸಿಯ ಅವಶ್ಯಕತೆಯನ್ನು ತಿಳಿಸಿದ ತಕ್ಷಣ, ಅದನ್ನು ಈ ಸ್ವಯಂಸೇವಕ ಒದಗಿಸಿದ್ದು , ಅಲ್ಲಿಂದಲೂ ಮೆಚ್ಚುಗೆ ಗಳಿಸಿದ್ದಾರೆ.
ಈ ಸ್ವಯಂಸೇವಕನಿಗೆ ಬಂದ ಕಾಲ್ಗಳಲ್ಲಿ ಅತಿ ಹೆಚ್ಚಿನವು ಹಿರಿಯ ತಾಯಂದಿರು, ವಿಧುವೆಯರು, ಹಾಗೂ ಹೆಣ್ಣು ಮಕ್ಕಳದೇ ಜಾಸ್ತಿ ಇದೆ. ಫೋನ್ ಮಾಡಿ ಅವರು ಅಳುತ್ತಿರುವುದು ಇವತ್ತಿಗೂ ಕಣ್ಮುಂದೆ ಬರುತ್ತಂತೆ. ಅವರ ಹಾಕಿದ ಕಣ್ಣಿರೆ ನನಗೆ ಇನ್ನಷ್ಟು ಸ್ಪಂದಿಸಬೇಕು ಅನಿಸುತ್ತಿತ್ತಂತೆ ಅನ್ನುತ್ತಾರೆ ಆ ಸ್ವಯಂಸೇವಕ.
ಸ್ವಯಂಸೇವಕ ಬಹಳ ಕೆಳಮಟ್ಟದಿಂದ ಬೆಳೆದಿದ್ದರ ಪರಿಣಾಮವಾಗಿ ಕೇಳಮಟ್ಟದ, ಮದ್ಯಮ ವರ್ಗದ ಕಷ್ಟಗಳು ಹೇಗಿರುತ್ತವೆ ಅಂತ ಪ್ರತ್ಯೇಕವಾಗಿ ನೋಡಿದ್ದಕ್ಕಾಗಿ ಅವರಿಗೆ ತಕ್ಕ ಮಟ್ಟಿನ ಪರಿಹಾರ ನೀಡಲು ಸಾಧ್ಯವಾಯಿತು ಎನ್ನುತ್ತಾರೆ ಆ ಸ್ವಯಂಸೇವಕ. ನಾವು ಒಬ್ಬರಿಗೆ ಏನನ್ನಾದರೂ ಕೊಟ್ಟರೆ ಅದನ್ನೇ ಇನ್ನೊಂದು ರೂಪದಲ್ಲಿ ನಮಗೆ ದೊರೆಯುತ್ತದೆ. ನಾನು ಕೊಟ್ಟಿರೋದು ಅಲ್ಪವಾದರೂ ಅವಶ್ಯಕವಾಗಿರೋದು ಎನ್ನುವ ಪೂರ್ಣತ್ವದ ಭಾವ ಆ ಸ್ವಯಂಸೇವಕನದ್ದು. ಬೇರೆ ಯಾರು ಅಲ್ಲ ಆ ಸ್ವಯಂಸೇವಕ ಬಸವರಾಜ ಹೊನ್ನಳ್ಳಿ. ಬಾಗಲಕೋಟೆ ಹಳೆನಗರದ ನಿವಾಸಿ. ಇವರ ಈ ಕಾರ್ಯಕ್ಕೆ ಇಡೀ ಊರಿಗೆ ಊರೆ ಹರಿಸುತ್ತಿದೆ.
ಕಷ್ಟ ಎಂದರೆ ತಕ್ಷಣ ಜಾತಿ, ಧರ್ಮ, ಮೇಲು, ಕೀಳು ಎನ್ನುವ ಬೇಧಭಾವ ಬಿಟ್ಟು ಮಾನವೀಯತೆ ದೃಷ್ಠಿಯಿಂದ ಮೊದಲು ಮಿಡಿಯೋದು ಸ್ವಯಂಸೇವಕನ ಮನಸ್ಸು. ತನಗೆಷ್ಟೇ ಕಷ್ಟವಿದ್ದರೂ ಅದನ್ನು ಹೇಳಿಕೊಳ್ಳದೇ ಇನ್ನೊಬ್ಬರ ನೋವಿಗೆ ಸ್ಪಂದಿಸೋದನ್ನು ನಮಗೆ ಕಲಿಸಿರೋದು ಸಂಘ. ಎಲ್ಲೋ ಇರಬೇಕಾಗಿದ್ದ ನಾವುಗಳು ಸಂಘದ ಸ್ವಯಂಸೇವಕರಾಗಿ ಇರೋದು ನಮ್ಮ ಹೆಮ್ಮೆ. ಸಂಘ ಯಾವತ್ತಿಗೂ ಪ್ರಚಾರ ಬಯಸೋದು, ಬೇಧ ಭಾವ ಮಾಡೋದು ಕಲಿಸಿಯೇ ಇಲ್ಲ. ಇಂತಹ ನಿಸ್ವಾರ್ಥ ಭಾವ ಸ್ವಯಂಸೇವಕನೇ ಸಮಾಜದಲ್ಲಿ ಸಂಘವನ್ನು ಮನೆ ಮನೆಗೆ, ಮನ ಮನಕ್ಕೆ ಕರೆದೊಯ್ಯುತ್ತಿರೋದು ಎನ್ನುವ ಆಶಯದೊಂದಿಗೆ ಈ ಲೇಖನ.
✍️ ಸುರೇಶ ಮಾಗಿ, ಬಾಗಲಕೋಟೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.