ಬೆಂಗಳೂರು : ಮಳೆಗಾಲದಲ್ಲಿ ಮೀನುಗಳು ಸಂತಾನೋತ್ಪತ್ತಿ ಮಾಡುವ ಸಮಯವಾದ್ದರಿಂದ, ಕರ್ನಾಟಕವನ್ನೊಳಗೊಂಡಂತೆ ದೇಶದ ಪಶ್ಚಿಮ ಕರಾವಳಿಯಲ್ಲಿ ಸಮುದ್ರ ಮೀನುಗಾರಿಕೆಯನ್ನು ಜೂನ್ 1 ರಿಂದ ತೊಡಗಿದಂತೆ ಜುಲೈ 31 ರ ವರೆಗೆ ನಿಷೇಧಿಸಲಾಗಿದೆ.
ಕರ್ನಾಟಕ ಕರಾವಳಿ ಮೀನುಗಾರಿಕೆ ಕಾಯ್ದೆಯನ್ವಯ ಈ ಸಂದರ್ಭದಲ್ಲಿ ಸಮುದ್ರ ಮೀನುಗಾರಿಕೆ ಅಪಾಯಕಾರಿಯೂ ಆಗಿರುವುದರಿಂದ ಮೀನುಗಾರಿಕಾ ಬೋಟ್ಗಳನ್ನು ನೀರಿಗಿಳಿಸದಂತೆಯೂ ಆದೇಶಿಸಲಾಗಿದೆ. ಯಾಂತ್ರೀಕೃತ ದೋಣಿ, 10 ಅಶ್ವಶಕ್ತಿ ಮತ್ತು ಅದಕ್ಕಿಂತ ಹೆಚ್ಚು ಶಕ್ತಿಯನ್ನು ಹೊಂದಿರುವ ಇನ್ಬೋರ್ಡ್, ಔಟ್ಬೋರ್ಡ್ ಯಂತ್ರಗಳ ಸಾಂಪ್ರದಾಯಿಕ ದೋಣಿಗಳನ್ನೂ ಮೀನುಗಾರಿಕೆಗಾಗಿ ನೀರಿಗಿಳಿಸದಂತೆ ಈ ಆದೇಶದಲ್ಲಿ ಸೂಚಿಸಲಾಗಿದೆ.
ಈ ಆದೇಶವನ್ನು ಪಾಲಿಸದೆ ಇರುವ ಮೀನುಗಾರರ ಮೇಲೆ ಕರ್ನಾಟಕ ಕಡಲ ಮೀನುಗಾರಿಕೆ ಕಾಯ್ದೆ 1986 ರ ಅನ್ವಯ ಶಿಕ್ಷೆ ಮತ್ತು ಡಿಸೇಲ್ಗೆ ನೀಡಲಾಗುತ್ತಿದ್ದ ಸಹಾಯಧನವನ್ನು 1 ವರ್ಷಗಳ ಮಟ್ಟಿಗೆ ರದ್ದು ಮಾಡಲಾಗುವುದಾಗಿಯೂ ಉಡುಪಿ ಮೀನುಗಾರಿಕಾ ಉಪನಿರ್ದೇಶಕರು ತಿಳಿಸಿದ್ದಾರೆ.
ಈವರೆಗೆ ದೇಶದ ಇತರೆಡೆಗಳಲ್ಲಿ ಮಳೆಗಾಲದಲ್ಲಿ ಮೀನುಗಾರಿಕೆಗೆ ಸಂಬಂಧಿಸಿದಂತೆ ನಿಷೇಧ ಸೂಚನೆಗಳು ಅಲ್ಲಿನ ಪರಿಸ್ಥಿತಿಗೆ ತಕ್ಕಂತೆ ಬದಲಾಯಿಸಲಾಗುತ್ತಿತ್ತು. ಆದರೆ ಈ ಬಾರಿ ದೇಶದ ಎಲ್ಲಾ ಪಶ್ಚಿಮ ಕರಾವಳಿ ಭಾಗಗಳಲ್ಲಿಯೂ ಏಕ ರೂಪದ ಮೀನುಗಾರಿಕೆ ನಿಷೇಧ ಕಾನೂನನ್ನು ಕೇಂದ್ರ ಕೃಷಿ, ಪಶುಸಂಗೋಪನೆ ಮತ್ತು ಮೀನುಗಾರಿಕಾ ಸಚಿವಾಲಯವೇ ಜಾರಿಗೊಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.