ಎಡಪಂಥೀಯ ಗುಂಪುಗಳು ಮತ್ತು ಚರ್ಚ್ನ ಸಂಘಟನೆಯ ನಡುವೆ ಒಂದು ವಿಶೇಷ ಸಾಮ್ಯತೆ ಇದೆ. ಅದು ಅವರ “ಕಾರ್ಯಶೈಲಿ”. ಈ ಎರಡೂ ಸಂಘಟನೆಗಳು ತಮ್ಮ ಕಾರ್ಯದ ಮೂಲ ಉದ್ದೇಶ ಹಾಗೂ ತಮ್ಮ ಗುರುತನ್ನು ಮರೆಮಾಚಲು ಇತರ ಮುಖವಾಡದ ಸಂಘಟನೆಗಳ ಜಾಲವನ್ನು ಬಳಸುತ್ತಾರೆ. ಈ ಜಾಲವನ್ನು ಅರ್ಥ ಮಾಡಿಕೊಳ್ಳಲು ಹಾಗೂ ಬೇಧಿಸಲು ಇವುಗಳ ಒಂದೊಂದು ಎಳೆಯನ್ನು ಬಿಡಿಸಿ ಬಿಡಿಸಿ ನೋಡಬೇಕಾಗುತ್ತದೆ. ಉದಾಹರಣೆಗೆ ಪಾಲ್ಘರ್ ಸಾಧುಗಳ ಹತ್ಯಾಕಾಂಡದ ಪ್ರಕರಣವನ್ನೇ ತೆಗೆದುಕೊಂಡಲ್ಲಿ, ಹತ್ಯಾಕಾಂಡದ ಹಿಂದಿನ ನಿಜವಾದ ಕಥೆಯನ್ನು ಮರೆಮಾಚಲು ಮಕ್ಕಳ ಮೂತ್ರಪಿಂಡ ಕಳ್ಳರ ಹಾಗೂ ಆಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ವದಂತಿ (ಮುಸ್ಲಿಮ ಕೊರೋನಾ ಹರಡುತ್ತಿದ್ದಾರೆ) ಕಾರಣ ಎಂಬ ಎರಡು ನಕಲಿ ಕಥೆಗಳನ್ನು ಹರಿದುಬಿಡಲಾಯಿತು. ಮೂತ್ರಪಿಂಡ ಕದಿಯುವುದೆಂದರೆ ಅದೇನು ಗಿಡದಿಂದ ಹೂವು ಕಿತ್ತುಕೊಂಡು ಹೋದಂತೆಯೇ? ಈ ರೀತಿಯ ಕಥೆಗಳಲ್ಲಿ ಏನಾದರೂ ಸತ್ಯವಿದೆಯೇ? ಅಥವಾ ಏನಾದರೂ ಸಾಕ್ಷಿಗಳಿವೆಯಾ?
“ದಿ ಪ್ರಿಂಟ್’ ಎಂಬ ಮಾಧ್ಯಮ ಸಂಸ್ಥೆ ‘ (ಲಿಂಕ್ 1) ಆಧಿವಾಸಿ ಏಕತಾ ಪರಿಷದ್ ನ ರಾಜು ಪಂಧರಾ ಅವರನ್ನು ಉಲ್ಲೇಖಿಸಿದೆ. ರಾಜು ಅವರ ಹೇಳಿಕೆ ಪ್ರಕಾರ ಹತ್ಯಾಕಾಂಡನ ನಂತರ ಎಲ್ಲೆಡೆ ಈ ಎರಡು ಅಂಶಗಳ ಕುರಿತಾಗಿಯೇ ಚರ್ಚಿಸಲಾಗುತ್ತಲಿದೆ. ಇಂತಹ ಸೂಕ್ಷ್ಮ ಪರಿಸ್ಥಿತಿಯಲ್ಲೂ ಆದಿವಾಸಿ ಏಕತಾ ಪರಿಷದ್ ನ ರಾಜು ಇಂತಹ ಅಂಶಗಳಿಗೆ ನೀರುಣಿಸುತ್ತಿರುವುದು ಗಮನಿಸಬೇಕಾದ ಸಂಗತಿಯಾಗಿದೆ. ಆದದಿಂದ ಆದಿವಾಸಿ ಏಕತಾ ಪರಿಷದ್ ಈ ಅಂಶವನ್ನು ಹರಡಲು ಪ್ರಯತ್ನಿಸುತ್ತಿದೆ ಎಂದು ಹೇಳಿದಲ್ಲಿ ತಪ್ಪಾಗಲಾರದು.
ಹತ್ಯಾಕಾಂಡದ ತನಿಖೆಯೂ ಇನ್ನು ಪೂರ್ಣಗೊಂಡಿಲ್ಲ ಅಷ್ಟರಲ್ಲೇ ಮಾಧ್ಯಮ ಸಂಸ್ಥೆಗಳು ಈ ಪರಿಷತ್ತನ್ನು ‘ಪಶ್ಚಿಮ ಭಾರತದಲ್ಲಿ ತಳಮಟ್ಟದ ಸಂಸ್ಥೆ’ ಎಂದು ಬಣ್ಣಿಸುತ್ತಿದ್ದು ಸಂಶಯಕ್ಕೆ ಕಾರಣವಾಗಿದೆ. ಆದ್ದರಿಂದ ಈ ಸಂಘಟನೆಯ ಹಿಂದೆ ಯಾವ ಸಂಸ್ಥೆಗಳು ಮತ್ತು ಜನರು ಇದ್ದಾರೆ ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯಕ.
ಆದಿವಾಸಿ ಏಕಾತಾ ಪರಿಷದ್ನ ಎರಡು ಮುಖಗಳು
ತನ್ನ ವೆಬ್ಸೈಟ್ನಲ್ಲಿ [ಲಿಂಕ್ 2], ಆದಿವಾಸಿ ಏಕಾತಾ ಪರಿಷದ್ ತನ್ನನ್ನು ‘ಸಮಸ್ತ ಮಾನವೀಯತೆ ಮತ್ತು ಪ್ರಕೃತಿ’ಗಾಗಿ ಕೆಲಸ ಮಾಡುವ ಸಂಸ್ಥೆ ಎಂದು ಹೇಳಿಕೊಂಡಿದೆ. ಈ ವರ್ಷದ ಜನವರಿಯಲ್ಲಿ, ಇದು ಪಾಲ್ಘರನಲ್ಲಿ ‘ಸಾಂಸ್ಕೃತಿಕ’ ಕಾರ್ಯಕ್ರಮವನ್ನು ಕೂಡ ಆಯೋಜಿಸಿತ್ತು, ಇದರಲ್ಲಿ ಛತ್ತೀಸಘಡದ ರಾಜ್ಯಪಾಲರಾದ ಅನುಸೂಯಾ ಉಯಿಕೆ [ಲಿಂಕ್ 3] ಕೂಡ ಉಪಸ್ಥಿತರಿದ್ದರು. ಪಾಲ್ಘರ ಸಂಸದ ಶಿವಸೇನೆ ಪಕ್ಷದ ರಾಜೇಂದ್ರ ಧೇಡಿಯಾ ಗವಿತ್ ಮತ್ತು ಇತರ ಮುಖಂಡರು ಕೂಡ ಭಾಗವಹಿಸಿದ್ದರು. ಈ ಪರಿಷತ್ತು ಪ್ರತಿವರ್ಷ ಈ ಕಾರ್ಯಕ್ರಮವನ್ನು ಆಯೋಜಿಸುತ್ತದೆ ಮತ್ತು ಸುಮಾರು 2 ಲಕ್ಷ ಜನರು ಕಾರ್ಯಕ್ರಮದಲ್ಲಿ ಭಾಗಿಯಾಗುತಾರೆ ಎಂದು ತಿಳಿದುಬಂದಿದೆ. ಪ್ರಸ್ತುತ ಪರಿಷದ್ ನ ಗಮನವು ದಮನ್ ಹಾಗೂ ಡಿಯು ಮತ್ತು ಪಾಲ್ಘರ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ಕೇಂದ್ರೀಕೃತವಾಗಿದೆ. ಅದು 2019 ರ ಕಾರ್ಯಕ್ರಮವನ್ನು ದಾದ್ರಾ ನಗರ ಹವೇಲಿಯ ಸಿಲ್ವಾಸ್ಸಾದಲ್ಲಿ ಆಯೋಜನೆ ಮಾಡಿತ್ತು.
ಮತ್ತಷ್ಟು ರೋಚಕ ಹಿನ್ನೆಲೆ
‘ಕ್ಯಾಥೊಲಿಕ್ ಬಿಷಪ್ಸ್ ಆಫ್ ಇಂಡಿಯಾ’ ಸಂಘಟನೆಯ ವೆಬ್ಸೈಟ್ [ಲಿಂಕ್ 4] ಪ್ರಕಾರ ಪರಿಷದ್ ನ 2019 ರ ಕಾರ್ಯಕ್ರಮದಲ್ಲಿ ನಿಕೋಲಸ್ ಬಾರ್ಲಾ (ಭಾರತದ ಕ್ಯಾಥೊಲಿಕ್ ಬಿಷಪ್ ಗಳ ಬುಡಕಟ್ಟು ವ್ಯವಹಾರಗಳ ಕಾರ್ಯದರ್ಶಿ, ಅದಿವಾಸಿ ಏಕತಾ ಪರಿಷದ್ನ ಸಂಘಟಕರು ಮತ್ತು ಸದಸ್ಯರೂ ಆಗಿದ್ದಾರೆ), ಲಲಿತಾ ರೋಷನಿ ಲಾಕ್ರಾ ಅವರೊಂದಿಗೆ ಭಾಗವಹಿಸಿದ್ದರು ಮತ್ತು ಬಾರ್ಲಾ ಬುಡಕಟ್ಟು ಜನಾಂಗದವರ ಕುರಿತು ಭಾಷಣ ಮಾಡಿದ್ದರು. ಇಟಲಿಯ ‘ರೋಮನ್ ಕ್ಯಾಥೊಲಿಕ್ ಪಾಂಟಿಫಿಕಲ್ ಇನ್ಸ್ಟಿಟ್ಯೂಟ್ ಫಾರ್ ಫಾರಿನ್ ಮಿಷನ್ಸ್’ ನ ಅಧಿಕೃತ ಪತ್ರಿಕಾ ಸಂಸ್ಥೆ ಏಷ್ಯನ್ ನ್ಯೂಸ್, ಜನವರಿ 13-15 ರಂದು ಪಾಲ್ಘರನಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ‘ಕ್ಯಾಥೊಲಿಕ್ ಬಿಷಪ್ಸ್ ಕಾನ್ಫರೆನ್ಸ ಆಫ್ ಇಂಡಿಯಾ ‘ ಪ್ರಾಯೋಜಿಸುತಿದೆ ಎಂದು ಹೇಳುತ್ತದೆ. ಇದೆಲ್ಲವೂ, ಕ್ರಿಸ್ತನ ಸಂದೇಶಗಳಿಗಾಗಿ, ಚರ್ಚ್ನ ಧ್ಯೇಯದ ಭಾಗವಾಗಿದೆ ಎಂದು ಕೂಡ ಅದು ಹೇಳುತ್ತದೆ. [ಲಿಂಕ್ 5] [ಚಿತ್ರ 2]. ಈ ಕಾರ್ಯಕ್ರಮದಲ್ಲಿ ‘ಯುನೈಟೆಡ್ ನೇಷನ್ಸ್ ಪರ್ಮನೆಂಟ್ ಫೋರಮ್ ಫಾರ್ ಇಂಡಿಜೀನಸ್ ಇಶ್ಯೂಸ್’ನ ಉಪಾಧ್ಯಕ್ಷ ಫೂಲ್ಮನ್ ಚೌಧರಿ ಕೂಡ ಪಾಲ್ಗೊಂಡಿದ್ದಕ್ಕೆ ನಿಕೋಲಸ್ ಬಾರ್ಲಾ ಸಂತೋಷ ವ್ಯಕ್ತಪಡಿಸಿದರು.
ಏನಿದು ವಿಶ್ವಸಂಸ್ಥೆಯ ಫೋರಮ್?
ಇದು ವಿಶ್ವಸಂಸ್ಥೆಯ ಸಲಹಾ ಸಂಸ್ಥೆಯಾಗಿದ್ದು, ಇದರಲ್ಲಿ 8 ಸದಸ್ಯರನ್ನು ವಿವಿಧ ಸರ್ಕಾರಗಳನ್ನು ಆಯ್ಕೆ ಮಾಡುತ್ತವೆ ಹಾಗು ಇನ್ನಿತರ 8 ಸದಸ್ಯರನ್ನು ಕೆಲವು ‘ಸ್ಥಳೀಯ’ ಸಾರ್ವಜನಿಕ ಸಂಸ್ಥೆಗಳು ಆಯ್ಕೆ ಮಾಡುತ್ತಾರೆ [ಲಿಂಕ್ 6]. ಈ ಫೂಲ್ಮನ್ ಚೌಧರಿ ನೇಪಾಳದವರಾಗಿದ್ದು, ಪೋರಮ್ ನಲ್ಲಿ ‘ಸ್ವದೇಶಿ’ ಜನಸಂಘಟನೆ ಸಂಸ್ಥೆಗಳಿಂದ ಆಯ್ಕೆಯಾಗಿದ್ದಾರೆ. ಆದಿವಾಸಿ ಏಕತಾ ಪರಿಷತ್ತಿನ ಕೆಲಸ, ಕಾರ್ಯಶೈಲಿ ಮತ್ತು ಕಾರ್ಯಕ್ರಮಗಳನ್ನು ಗಮನಿಸಿದಾಗ ಈ ಎಲ್ಲ ‘ಸ್ವದೇಶಿ’ ಸಾರ್ವಜನಿಕ ಜನಸಂಘಟನೆ ಸಂಸ್ಥೆಗಳು ಚರ್ಚ್ನ ಮುಖವಾಡಗಳೇನೋ ಎಂಬ ಆತಂಕವನ್ನು ಸಹಜವಾಗಿ ಹುಟ್ಟುಹಾಕುತ್ತದೆ. ಈ ಸಂಸ್ಥೆಗಳು ತಮ್ಮನ್ನು ವಿಶ್ವಸಂಸ್ಥೆಯ ಹೆಸರಿನ ಅಡಿಯಲ್ಲಿ ನಿಷ್ಪಕ್ಷಪಾತ ಸಂಸ್ಥೆಗಳಾಗಿ ತೋರಿಸುತ್ತವೆ [ಚಿತ್ರ 3]. ಹೀಗಾಗಿ, ವಿಶ್ವದಾದ್ಯಂತದ ‘ಬಡ’ ಜನರಿಗೆ ‘ಕೆಲಸ’ ಮಾಡುವ ಅವಕಾಶವೂ ಈ ಸಂಸ್ಥೆಗಳಿಗೆ ಸಹಜವಾಗಿಯೇ ಸಿಗುತ್ತದೆ. ಈ ನಿಕೋಲಸ್ ಬಾರ್ಲಾ ವಿಶ್ವಸಂಸ್ಥೆಯೊಂದಿಗೆ ‘ಆದಿವಾಸಿ ಏಕತಾ ಪರಿಷದ್”ನ್ನು ಸಂಪರ್ಕಿಸುವ ಕೊಂಡಿ ಎಂದು ಹೇಳಿದರೆ ತಪ್ಪಾಗಲಾರದು. ಸೋಷಿಯಲ್ ಮೀಡಿಯಾದಲ್ಲಿ ಈ ಎಲ್ಲ ಜನರು ನಿಕೋಲಸ್ ಬಾರ್ಲಾ ಅವರನ್ನು ಅಪ್ಪಿ ತಪ್ಪಿಯೂ ಕೂಡ ಫಾದರ್ ನಿಕೋಲಸ್ ಬಾರ್ಲಾ ಎಂದು ಸಂಭೋಧಿಸುವುದಿಲ್ಲ. [ಚಿತ್ರ 4].
ಕೆಲವು ಸ್ವತಂತ್ರ ಬರಹಗಾರರು ‘ಆದಿವಾಸಿ ಏಕ್ತ ಪರಿಷತ್’ ಬಗ್ಗೆ ಮತ್ತಷ್ಟು ಮಾಹಿತಿ ಕೆದಕಿದಾಗ, ಅನೇಕ ಆಸಕ್ತಿದಾಯಕ ವಿಷಯಗಳು ಹೊರಬಂದವು. ಹ್ಯಾರಿ ಗಾಲ್ಬೋರ್ನ್ ಎಂಬ ಬರಹಗಾರ ತನ್ನದೇ ಆದ ‘ರೇಸ್ ಅಂಡ್ ಎಥ್ನಿಸಿಟಿ’ [ಲಿಂಕ್ 7] ನಲ್ಲಿ ಈ ಕೌನ್ಸಿಲ್ ಬುಡಕಟ್ಟು ಜನಾಂಗವನ್ನು ‘ಹಿಂದೂಗಳ ಕಾಡಿನಿಂದ’ ಮುಕ್ತಗೊಳಿಸಲು ಕೆಲಸ ಮಾಡುತ್ತದೆ ಎಂದು ಬರೆದಿದ್ದಾನೆ.
ಈ ಎಲ್ಲ ಸಂಗತಿಗಳನ್ನು ನಾವು ಒಟ್ಟಿಗೆ ನೋಡಿದರೆ, ‘ಸೋಷಿಯಲ್ ಮೀಡಿಯಾ ವದಂತಿಗಳು’ ಮತ್ತು ಮೂತ್ರಪಿಂಡ ಕಳ್ಳತನದ ಗ್ಯಾಂಗ್ ನ ಸುಳ್ಳುಕಥೆಗಳ ಹಿಂದಿನ ನಿಜವಾದ ಉದ್ದೇಶ ಬುಡಕಟ್ಟು ಜನಾಂಗವನ್ನು ಹಿಂದೂಗಳಿಂದ ಬೇರ್ಪಡಿಸಿ ಅವರನ್ನು ಪ್ರತ್ಯೇಕಿಸಲು “ಪಾತಾಳಗಡಿ” ಆಂದೋಲನದ ಮಾದರಿಯಲ್ಲಿ ಮತ್ತೊಂದು ಆಂದೋಲನ ಸಿದ್ಧತೆ ನಡೆದಿದೆಯೇ ಎಂಬ ಪ್ರಶ್ನೆ ಉದ್ಭವಿಸದೇ ಇರದು.
ಇದೆಲ್ಲವೂ ಹಲವು ವರ್ಷಗಳಿಂದ ನಡೆಯುತ್ತಿರಬೇಕು, ಆದರೆ ಪಾಲ್ಘರದಲ್ಲಿ ನಡೆದ ಸಾಧುಗಳ ಹತ್ಯಾಕಾಂಡದ ನಂತರ, ಅನೇಕ ಅವಶ್ಯಕ ಪ್ರಶ್ನೆಗಳು ಉದ್ಭವಿಸುತ್ತಿದ್ದು ಇವೆಲ್ಲ ಪ್ರಶ್ನೆಗಳನ್ನು ಆದಿವಾಸಿ ಏಕತಾ ಪರಿಷದ್ಗೆ ಕೇಳಲೇ ಬೇಕಿದೆ.
– ಚರ್ಚ್ ಸಂಸ್ಥೆಗಳು ಪ್ರತಿವರ್ಷ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಲಕ್ಷಾಂತರ ಜನರು ಸೇರುವ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆಯೇ?
– ನಿಕೋಲಸ್ ಬಾರ್ಲಾ (ಭಾರತದ ಕ್ಯಾಥೊಲಿಕ್ ಬಿಷಪ್ಗಳ ಸಂಸ್ಥೆಯ ಬುಡಕಟ್ಟು ವ್ಯವಹಾರಗಳ ಕಾರ್ಯದರ್ಶಿ) ಆದಿವಾಸಿ ಏಕಾತಾ ಪರಿಷದ್ನ ಮಂಡಳಿಯಲ್ಲಿದ್ದಾರೆಯೇ?
-ಸೋಷಿಯಲ್ ಮೀಡಿಯಾದ ವದಂತಿಗಳಿಂದಾಗಿ ಸಾಧು ಹತ್ಯೆ ನಡೆಯಿತೆಂದು ಕೌನ್ಸಿಲ್ ಏಕೆ ಹೇಳುತ್ತಿದೆ?
ಮತ್ತು, ಚರ್ಚ್ ಈ ಪ್ರಶ್ನೆಗಳಿಗೆ ಉತ್ತರಿಸಬೇಕು :
– ಈ ಪರಿಷತ್ತಿನೊಂದಿಗೆ ಚರ್ಚನ ಸಂಬಂಧವೇನು?
– ಚರ್ಚ್ ಪಾಲ್ಘರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆಯೇ?
Link 2
http://www.adivasiektaparishad.org/
Link 3
https://cg24news.in/article-view.php?pathid=7476&article=4
Link 4
https://www.cbci.in/detail_Slide.aspx?id=658&type=1
Link 6
https://www.un.org/development/desa/indigenouspeoples/unpfii-sessions-2/newmembers.html
Link 7
https://m.facebook.com/story.php?story_fbid=1627382503982281&id=287026071351271
Source : newsbharati
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.