ಬೆಳ್ತಂಗಡಿ : ನಿರುದ್ಯೋಗಿ ಯುವಕ-ಯುವತಿಯರಿಗೆ, ಉದ್ಯೋಗವನ್ನು ಅರಸುತ್ತಿರುವವರಿಗೆ ಹಾಗೂ ಸ್ವಉದ್ಯೋಗ ಆಕಾಂಕ್ಷಿಗಳಿಗೆ ಉಜಿರೆಯ ರುಡ್ಸೆಟ್ ಸಂಸ್ಥೆಯಲ್ಲಿ ಮುಂದಿನ ಎರಡು ತಿಂಗಳುಗಳಲ್ಲಿ ವಿವಿಧ ವಿಭಾಗಗಳಲ್ಲಿ ತರಬೇತಿಗಳು ನಡೆಯಲಿವೆ.
ಆ.10 ರಿಂದ ಸೆ.9ರ ವರೆಗೆ – ಮಹಿಳೆಯರ ಬ್ಯೂಟಿಪಾರ್ಲರ್ ಮೇನೇಜ್ಮೆಂಟ್ (30 ದಿನಗಳು), ಆ.24 ರಿಂದ ಸೆ.23ರ ವರೆಗೆ – ಟಿವಿ (ಎಲ್ಇಡಿ ಮತ್ತು ಎಲ್ಸಿಡಿ) ಮತ್ತು ಎಲೆಕ್ಟ್ರೋನಿಕ್ಸ್ ವಸ್ತುಗಳ ರಿಪೇರಿ (30 ದಿನಗಳು), ಆ.17 ರಿಂದ ಸೆ.30ರ ವರೆಗೆ – ಕಂಪ್ಯೂಟರ್ ಹಾರ್ಡ್ವೇರ್ ಮತ್ತು ನೆಟ್ವರ್ಕಿಂಗ್(45 ದಿನಗಳು), ಸೆ.10 ರಿಂದ ಸೆ.30ರ ವರೆಗೆ – ಫೋಟೋಗ್ರಫಿ ಮತ್ತು ವೀಡಿಯೋಗ್ರಫಿ (21 ದಿನಗಳು)
ಅಲ್ಲದೇ ಮುಂದಿನ ತಿಂಗಳುಗಳಲ್ಲಿ ಆಹಾರ ಉತ್ಪನ್ನಗಳ ತಯಾರಿಕೆ ಮತ್ತು ಸಂಸ್ಕರಣೆ (ಬೇಕರಿ ಉತ್ಪನ್ನಗಳ ತಯಾರಿಕೆ), ಮಹಿಳೆಯರ ವಸ್ತ್ರ ವಿನ್ಯಾಸ (ಟೈಲರಿಂಗ್), ಕಂಪ್ಯೂಟರ್ ಡಿ.ಟಿ.ಪಿ, ಸಾವಯವ ಕೃಷಿ, ರಬ್ಬರ್ಟ್ಯಾಪಿಂಗ್, ಕೃತಕ ಆಭರಣ ತಯಾರಿಕೆ, ಬಟ್ಟೆಯ ಬ್ಯಾಗ್ ತಯಾರಿಕೆ, ಸಿಸಿ ಟಿವಿ ಅಳವಡಿಕೆ ಸ್ಮಾರ್ಟ್ ಪೋನ್ ಮತ್ತು ಟ್ಯಾಬ್ರಿಪೇರಿ, ಗೃಹೋಪಯೋಗಿ ವಿದ್ಯತ್ ಉಪಕರಣಗಳ ರಿಪೇರಿ, ದ್ವಿ ಚಕ್ರ ವಾಹನ ರಿಪೇರಿ, ಫ್ಯಾಷನ್ಡಿಸೈನಿಂಗ್(ಮಹಿಳೆಯರಿಗೆ), ಮೆನ್ಸ್ ಪಾರ್ಲರ್ ಮೇನೇಜ್ ಮೆಂಟ್ ಮುಂತಾದ ತರಬೇತಿಗಳನ್ನು ಕೂಡ ಹಮ್ಮಿಕೊಳ್ಳಲಾಗಿದೆ.
ತರಬೇತಿಯು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ತರಬೇತಿಯಲ್ಲಿ ಕೌಶಲ್ಯದಜೊತೆಗೆ ವ್ಯಾಪಾರ ವಹಿವಾಟು, ಸೇವಾ ಕ್ಷೇತ್ರ, ಕೈಗಾರಿಕೆ ಹಾಗೂ ಇನ್ನಿತರ ಘಟಕಗಳ ಸ್ಥಾಪನೆ ಮತ್ತು ನಿರ್ವಹಣೆ, ಸರಕಾರದ ಸಬ್ಸಿಡಿ ಯೋಜನೆಗಳು, ಬ್ಯಾಂಕ್ ಸಾಲ ಪಡೆಯುವ ವಿಧಾನ ಹಾಗೂ ಇನ್ನಿತರ ಮಹತ್ವದ ಉದ್ಯಮಶೀಲತಾ ಮಾಹಿತಿ ಮತ್ತು ಮಾರ್ಗದರ್ಶನವನ್ನು ನೀಡಲಾಗುವುದು.
ದಕ್ಷಿಣಕನ್ನಡ, ಹಾಸನ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ತರಬೇತಿಗಳಿಗೆ ಬರಲು 18 ರಿಂದ 45 ವರ್ಷಗಳ ವಯೋಮಿತಿಯ ಕನ್ನಡ ಓದು ಬರಹ ಬಲ್ಲ ಯುವಕ/ಯುವತಿಯರು ಅರ್ಜಿಯನ್ನು ಬಿಳಿ ಹಾಳೆಯಲ್ಲಿ ಅಥವಾ ಸಂಸ್ಥೆಯ ವೆಬ್ಸೈಟ್ನಿಂದ (www.rudsetitraining.org) ಅರ್ಜಿನ ಮೂನೆಯನ್ನು ಪಡೆದು ಭರ್ತಿ ಮಾಡಿ : ನಿರ್ದೇಶಕರು, ರುಡ್ಸೆಟ್ ಸಂಸ್ಥೆ, ಸಿದ್ಧವನ, ಉಜಿರೆ- 574 240, ಬೆಳ್ತಂಗಡಿ ತಾಲೂಕು, ದ.ಕ. ಇವರಿಗೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08256-236404 ಗೆ ಸಂಪರ್ಕಿಸ ಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.