ನವದೆಹಲಿ : ಕೊರೋನವೈರಸ್ ವಿರುದ್ಧ ಹೋರಾಡಲು ಸಾರ್ಕ್ ದೇಶಗಳು ಕೈಜೋಡಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟರ್ ಮೂಲಕ ಇಂದು ಕರೆ ನೀಡಿದ್ದಾರೆ. ಪ್ರಧಾನಿಯವರ ಈ ಕರೆಗೆ ವಿವಿಧ ಸಾರ್ಕ್ ದೇಶಗಳು ಸ್ಪಂದನೆಯನ್ನು ನೀಡಿದ್ದು, ಕೈ ಜೋಡಿಸಲು ಸಿದ್ಧ ಎಂದಿದೆ.
ಭೂತಾನ್ ಪ್ರಧಾನಿ ಅವರು ಪ್ರಧಾನಿ ನರೇಂದ್ರ ಮೋದಿಯವರ ಈ ಕರೆಗೆ ಅತೀವ ಶ್ಲಾಘನೆಯನ್ನು ವ್ಯಕ್ತಪಡಿಸಿದ್ದು, ನಾಯಕತ್ವ ಅಂದರೆ ಇದು ಎಂದು ಬಣ್ಣಿಸಿದ್ದಾರೆ.
ಟ್ವೀಟ್ ಮಾಡಿರುವ ಅವರು, “ಇದನ್ನು ನಾವು ನಾಯಕತ್ವ ಎಂದು ಕರೆಯುತ್ತೇವೆ. ಸಾರ್ಕ್ ದೇಶಗಳ ಸದಸ್ಯರಾಗಿ ಇಂತಹ ಕಠಿಣ ಪರಿಸ್ಥಿತಿಯಲ್ಲಿ ನಾವು ಒಂದಾಗಬೇಕಿದೆ. ಸಣ್ಣ ಆರ್ಥಿಕತೆಗಳಿಗೆ ತುಂಬಾ ಹೊಡೆತ ಬಿದ್ದಿದೆ, ಹೀಗಾಗಿ ನಾವು ಸಹಭಾಗಿತ್ವ ವಹಿಸಬೇಕಾಗಿದೆ. ನಿಮ್ಮ ನಾಯಕತ್ವದಲ್ಲಿ ನಾವು ತ್ವರಿತ ಮತ್ತು ಪರಿಣಾಮಕಾರಿ ಫಲಿತಾಂಶ ನೀಡುತ್ತೇವೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ” ಎಂದಿದ್ದಾರೆ.
This is what we call leadership. As members of this region, we must come together in such times. Smaller economies are hit harder, so we must coordinate. With your leadership, I have no doubt we will see immediate and impactful outcome. Looking forward to the video conference. https://t.co/2RnokAJQOs
— PM Bhutan (@PMBhutan) March 13, 2020
ಶ್ರೀಲಂಕಾ ಅಧ್ಯಕ್ಷರು ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಪ್ರತಿಕ್ರಿಯೆ ನೀಡಿ, “ನಿಮ್ಮ ಅತ್ಯುತ್ತಮ ಕಾರ್ಯಕ್ಕಾಗಿ ಧನ್ಯವಾದಗಳು. ಸಂವಾದದಲ್ಲಿ ಭಾಗಿಯಾಗಲು, ನಮ್ಮ ಉತ್ತಮ ಅಭ್ಯಾಸಗಳನ್ನು ಮತ್ತು ಅಧ್ಯಯನಗಳನ್ನು ಹಂಚಿಕೊಳ್ಳಲು ಶ್ರೀಲಂಕಾ ಸಿದ್ಧವಿದೆ. ಇತರ ಸಾರ್ಕ ಸದಸ್ಯ ರಾಷ್ಟ್ರಗಳಿಂದ ಕಲಿಯಲೂ ನಾವು ಸಿದ್ಧರಿದ್ದೇವೆ” ಎಂದಿದ್ದಾರೆ.
Thank you for the great initiative Shri @narendramodi – #LKA is ready to join the discussion & share our learnings & best practices and to learn from other #SAARC members. Let’s unite in solidarity during these trying times and keep our citizens safe. https://t.co/fAiT5w3O8D
— Gotabaya Rajapaksa (@GotabayaR) March 13, 2020
ಪ್ರಧಾನಿ ನರೇಂದ್ರ ಮೋದಿ ಕರೆಗೆ ಪ್ರತಿಕ್ರಿಯೆ ನೀಡಿರುವ ಮಾಲ್ಡಿವ್ಸ್ ಅಧ್ಯಕ್ಷ, “ಕೊರೋನವೈರಸ್ ಅನ್ನು ಸೋಲಿಸಲು ಜಂಟಿ ಪ್ರಯತ್ನದ ಅಗತ್ಯವಿದೆ. ಈ ಪ್ರಸ್ತಾವನೆಯನ್ನು ಮಾಲ್ಡೀವ್ಸ್ ಸ್ವಾಗತಿಸುತ್ತದೆ, ಪ್ರಾದೇಶಿಕ ಪ್ರಯತ್ನಕ್ಕೆ ಸಂಪೂರ್ಣ ಸಹಾಯ ಮಾಡುತ್ತದೆ” ಎಂದಿದ್ದಾರೆ.
ನೇಪಾಳದ ಪ್ರಧಾನಿ ಪ್ರತಿಕ್ರಿಯೆಯನ್ನು ನೀಡಿ, “ಕೊರೋನವೈರಸ್ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿಟ್ಟ ಚಿಂತನೆಯನ್ನು ನಾವು ಬೆಂಬಲಿಸುತ್ತೇವೆ. ಮಾರಣಾಂತಿಕ ಸೋಂಕಿನಿಂದ ತನ್ನ ದೇಶದ ಜನರನ್ನು ರಕ್ಷಿಸುವ ಸಲುವಾಗಿ ನೇಪಾಳ ಸಾರ್ಕ್ ಸದಸ್ಯರೊಂದಿಗೆ ಕಾರ್ಯನಿರ್ವಹಿಸಲು ಸಿದ್ಧವಿದೆ” ಎಂದಿದ್ದಾರೆ.
Thank you PM @narendramodi for taking the initiative on this important endeavor. Covid 19 requires collective effort to defeat it. Maldives welcomes this proposal and would fully support such a regional effort. https://t.co/2fxQxe9w1h
— Ibrahim Mohamed Solih (@ibusolih) March 13, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.