ನವದೆಹಲಿ: ಸಾಂಪ್ರದಾಯಿಕ ಉಡುಗೆ ಧರಿಸಿ ಬಾರ್ ಪ್ರವೇಶಿಸಿದ ಮಹಿಳೆಗೆ ದೆಹಲಿಯ ವಸಂತ್ ಕುಂಜ್ನಲ್ಲಿರುವ ರೆಸ್ಟೋರೆಂಟ್ ಪ್ರವೇಶವನ್ನು ನಿರಾಕರಿಸಿತು. ಸಂಗೀತ ಕೆ. ನಾಗ್ ಅವರು ಮಾಡಿರುವ ಈ ವಿಡಿಯೋದಲ್ಲಿ, ಸಾಂಪ್ರದಾಯಿಕ ಶೈಲಿಯ ಉಡುಗೆಗೆ ನಾವು ಅನುಮತಿ ನೀಡುವುದಿಲ್ಲ ಎಂದು ರೆಸ್ಟೋರೆಂಟ್ ಮಾಲೀಕ ಹೇಳುವ ದೃಶ್ಯ ಸೆರೆಯಾಗಿದೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಭಾರತದ ಸ್ಮಾರ್ಟ್ ಕ್ಯಾಶುವಲ್ ಉಡುಗೆಯನ್ನು ಹೊರತು ಇನ್ನಾವುದೇ ಭಾರತೀಯ ಉಡುಗೆಗಳನ್ನು ನಮ್ಮ ರೆಸ್ಟೋರೆಂಟ್ನ ಒಳಗೆ ಅನುಮತಿ ನೀಡುವುದಿಲ್ಲ ಎಂದು ರೆಸ್ಟೋರೆಂಟ್ ಸಿಬ್ಬಂದಿ ಹೇಳಿರುವ ವಿಡಿಯೋವನ್ನು ಸಂಗೀತ ಕೆ. ನಾಗ್ ಹರಿಬಿಟ್ಟಿದ್ದಾರೆ. ಭಾರತೀಯರೆನ್ನುವ ಹೆಮ್ಮೆಗೆ ಏನಾಯಿತು ಎಂದು ಟ್ವಿಟರಿನಲ್ಲಿ ಇದಕ್ಕೆ ಒಕ್ಕಣೆಯನ್ನೂ ನೀಡಿದ್ದಾರೆ.
ಅಲ್ಲದೇ ರೆಸ್ಟೋರೆಂಟ್ ಹಾಕಿರುವ ಡ್ರೆಸ್ ಕೋಡ್ ನಿಯಮದ ಬಗ್ಗೆಯೂ ನಾಗ್ ಹೇಳಿಕೊಂಡಿದ್ದಾರೆ. ಈ ರೆಸ್ಟೋರೆಂಟ್ “ಡ್ರೆಸ್ ಕೋಡ್ ಅನುಸರಿಸಬೇಕು: ಶಾರ್ಟ್ಸ್, ಚಪ್ಪಲಿ ಧರಿಸಿ ಬರಬಾರದು, ಕ್ಯಾಶುವಲ್ ಡ್ರೆಸ್ ಮಾತ್ರ” ಎಂದು ಬರೆದುಕೊಂಡಿದೆ.
ಈ ವಿಡಿಯೋ ಫೇಸುಬುಕ್, ಯುಟ್ಯೂಬ್ ಎಲ್ಲಾ ಕಡೆಯೂ ಶೇರ್ ಆಗಿದ್ದು, ವೈರಲ್ ಆಗುತ್ತಿದೆ. ಜನರು ರೆಸ್ಟೋರೆಂಟ್ ನಿಯಮವನ್ನು ವಿರೋಧಿಸುತ್ತಿದ್ದಾರೆ. ಹೆಚ್ಚಿನವರು, ಭಾರತದಲ್ಲಿ ಭಾರತೀಯ ಬಟ್ಟೆಗಳಿಗೇ ಅನುಮತಿ ನೀಡಲಾಗುವುದಿಲ್ಲ ಎಂಬುದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರೆ, ಇನ್ನು ಕೆಲವರು ಅವರ ಮೇಲೆ ಪ್ರಕರಣ ದಾಖಲಿಸಿ ಪರವಾನಗಿಯನ್ನು ರದ್ದುಗೊಳಿಸಬೇಕೆಂದು ಟ್ವೀಟಿಸಿ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಬ್ರಿಟಿಷ್ ವಸಾಹತುಶಾಹಿಯ ಮನಸ್ಥಿತಿ ಇದೆಂದು ಕೆಲವರು ಮೂದಲಿಸಿದ್ದಾರೆ.
ಘಟನೆಯ ಬಗ್ಗೆ ರೆಸ್ಟೋರೆಂಟ್ ಕಂಪನಿಯು ತಮ್ಮ ಅಧಿಕೃತ ಫೇಸ್ಬುಕ್ ಪುಟದಲ್ಲಿ ಪ್ರತಿಕ್ರಿಯೆಯನ್ನು ನೀಡಿದ್ದು, “ವೀಡಿಯೊದಲ್ಲಿನ ಸಿಬ್ಬಂದಿ ಹೊಸದಾಗಿ ಸೇರ್ಪಡೆಯಾಗಿದ್ದು ಮತ್ತು ವೀಡಿಯೊದಲ್ಲಿ ಅವರ ಅಭಿಪ್ರಾಯವು ಅವರ ವೈಯಕ್ತಿಕ ಹೇಳಿಕೆಯಾಗಿದೆ. ಇದು ಕಂಪನಿಯ ನಿಲುವು ಅಲ್ಲ ಮತ್ತು ನಾವು ಎಲ್ಲಿಯೂ ಸಾಂಪ್ರದಾಯಿಕ ಉಡುಗೆಗಳನ್ನು ನಿರಾಕರಿಸುವುದಿಲ್ಲ” ಎಂದಿದೆ.
@bishnoikuldeep My shocking experience with discrimination at Kylin and Ivy, Ambience Vasant Kunj this evening. Denied entry as ethnic wear is not allowed! A restaurant in India allows ‘smart casuals’ but not Indian wear! Whatever happened to pride in being Indian? Take a stand! pic.twitter.com/ZtJJ1Lfq38
— Sangeeta K Nag (@sangeetaknag) March 10, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.