ಬೆಳ್ತಂಗಡಿ: 2015ರ ಗ್ರಾಮ ಪಂಚಾಯಿತಿ ಚುನಾವಣೆಯ ನಂತರ ಆಡಳಿತಾತ್ಮಕವಾಗಿ ಕಾರ್ಯನಿರ್ವಹಿಸಲು ನೂತನವಾಗಿ ಸುಲ್ಕೇರಿ ಗ್ರಾಮ ಪಂಚಾಯತು ಅಳದಂಗಡಿ ಗ್ರಾಮ ಪಂಚಾಯತಿನ ಸಮೀಪ ಹಳೇ ಕಟ್ಟಡದಲ್ಲಿ ಉದ್ಘಾಟನೆಗೊಂಡಿತು.
ಸರಕಾರದ ಆದೇಶದಂತೆ 2011ರ ಜನಗಣತಿ ಪ್ರಕಾರ ಗ್ರಾಮಗಳ ಅಭಿವೃದ್ಧಿಗಳಿಗೊಸ್ಕರ ಅಳದಂಗಡಿ ಗ್ರಾಮ ಪಂಚಾಯತ್ನ್ನು ಪುನರ್ ವಿಂಗಡಿಸಿದ್ದು, ಇದೀಗ ಪ್ರತ್ಯೇಕವಾಗಿ ನಾವರ, ಕುದ್ಯಾಡಿ, ಸುಲ್ಕೇರಿ ಗ್ರಾಮಗಳನ್ನು ಒಳಗೊಂಡ ಸುಲ್ಕೇರಿ ಗ್ರಾಮ ಪಂಚಾಯತು ಪ್ರಾರಂಭಗೊಂಡಿದೆ. ಗ್ರಾಮ ಪಂಚಾಯತು ಕಾರ್ಯನಿರ್ವಹಿಸುವ ಕಟ್ಟಡವನ್ನು ಸುಲ್ಕೇರಿ ಗ್ರಾಮ ಪಂಚಾಯತಿನ ನೂತನ ಮಹಿಳಾ ಅಧ್ಯಕ್ಷೆ ಯಶೋಧ ಬಂಗೇರ ಕುದ್ಯಾಡಿ ಉದ್ಘಾಟಿಸಿ ಚುನಾಯಿತ ಸದಸ್ಯರು ಮತ್ತು ಗ್ರಾಮಸ್ಥರ ಉತ್ತಮ ಭಾಂಧವ್ಯದಿಂದ ಯಾವುದೇ ರಾಜಕೀಯ ಬರದ ರೀತಿಯಲ್ಲಿ ಸುಲ್ಕೆರಿ ಗ್ರಾಮ ಪಂಚಾಯತ್ನ್ನು ಮಾದರಿಯನ್ನಾಗಿ ಮಾಡಲಾಗುವುದು ಮತ್ತು ಸರಕಾರ ನೀಡುವ ನಿರ್ದೇಶನದಂತೆ ಆದಷ್ಟು ಶೀಘ್ರದಲ್ಲಿ ಹೊಸ ಕಟ್ಟಡವನ್ನು ನಿರ್ಮಿಸುವ ಬಗ್ಗೆ ಯೋಜನೆಯನ್ನು ಸಿದ್ಧಪಡಿಸಿಕೊಳ್ಳಲಾಗುವುದು ಎಂದರು.
ಅಳದಂಗಡಿ ಗ್ರಾಮ ಪಂಚಾಯತ್ತಿನ ನೂತನ ಅಧ್ಯಕ್ಷರಾದ ಸತೀಶ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ನಮ್ಮ ಎರಡು ಪಂಚಾಯತುಗಳು ಅನ್ಯೋನ್ಯತೆಯಿಂದ ಇದ್ದು ಸಾರ್ವಜನಿಕರ ಅಭಿಪ್ರಾಯಗಳ ಅಭಿವೃದ್ಧಿ ದೃಷ್ಟಿಯಲ್ಲಿ ತೆಗೆದುಕೊಳ್ಳಲಾಗುವುದು ಮತ್ತು ಬೆಳ್ತಂಗಡಿ ಶಾಸಕ ಕೆ.ವಸಂತ ಬಂಗೇರರ ಸಹಕಾರದಲ್ಲಿ ಅತೀ ಹೆಚ್ಚು ಅನುದಾನಗಳನ್ನು ಎರಡೂ ಪಂಚಾಯತಿಗಳಿಗೂ ನೀಡುವಂತೆ ಕೇಳಿಕೊಳ್ಳಲಾಗುವುದು ಎಂದು ಹೇಳಿದರು.
ಲಾಲ ಗ್ರಾಮ ಪಂಚಾಯತ್ನ ಅಭಿವೃದ್ಧಿ ಅಧಿಕಾರಿ ಪಿ.ಹೆಚ್.ಪ್ರಕಾಶ್ ಶೆಟ್ಟಿ ಮಾತನಾಡಿ ಅಳದಂಗಡಿ ಪ್ರಥಮ ಫ್ರಧಾನರದ ದಿ.ಬಿರ್ಮಣ ಪೂಜಾರಿಯವರ ಆಡಳಿತ ಎಲ್ಲಾ ವರ್ಗದ ಜನರಿಗೂ ಹಿಡಿಸಿದ್ದು ಅದೇ ರೀತಿ ಸುಲ್ಕೇರಿ ಮತ್ತು ಅಳದಂಗಡಿ ಗ್ರಾಮ ಪಂಚಾಯತು ಮಾದರಿಯಾಗಿ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಸುಲ್ಕೇರಿ ಗ್ರಾಮ ಪಂಚಾಯತ್ತಿನ ನೂತನ ಉಪಾಧ್ಯಕ್ಷೆ ಲಲಿತಾ, ಅಳದಂಗಡಿ ತಾಲೂಕು ಪಂಚಾಯತು ಸದಸ್ಯ ಸುಧೀರ್ ಆರ್.ಸುವರ್ಣ, ಅಳದಂಗಡಿ ಗ್ರಾಮ ಪಂಚಾಯತ್ತಿನ ಮಾಜಿ ಅಧ್ಯಕ್ಷರುಗಳಾದ ಸಂಜೀವ ಪೂಜಾರಿ ಕೊಡಂಗೆ, ಸದಾನಂದ ಪೂಜಾರಿ, ಉಂಗಿಲಬೈಲು, ಭಾರತಿ ರವಿ ಬಂಗೇರ ಪಿಲ್ಯ, ವಸಂತಿ.ಸಿ.ಪೂಜಾರಿ ಕುದ್ಯಾಡಿ, ಗ್ರಾ.ಪಂ. ಸದಸ್ಯರಾದ ರವಿ ಕುಮಾರ್ ನಾವರ, ದಿನೇಶ್ ಕುಮಾರ್ ಕುದ್ಯಾಡಿ, ನಾರಾಯಣ ಪೂಜಾರಿ ಸುಲ್ಕೇರಿ, ಅರ್ಚನ ನಾವರ, ರಜನಿ ಬಾಲಕೃಷ್ಣ ನಾವರ, ಮಾಜಿ ಉಪಾಧ್ಯಕ್ಷ ಸುಂದರ ಆಚಾರ್ಯ, ಸಂಜೀವ ಶೆಟ್ಟಿ ಸುಲ್ಕೇರಿ ಸದಾನಂದಗೌಡ ಸುಲ್ಕೇರಿ, ಮೋಹನ್ದಾಸ್ ಅಳದಂಗಡಿ, ಸುಪ್ರೀತ್ ಜೈನ್, ಶಿಶುಪಾಲ ಕುದ್ಯಾಡಿ, ಲಕ್ಷ್ಮಣ ಕುಲಾಲ್ ನಾವರ, ರಾಜು ಸಾಲ್ಯಾನ್ ನಾವರ, ಸಂಜೀವ ಪೂಜಾರಿ ಅಲೆಕ್ಕಿ, ಸದಾನಂದ ಭಟ್ ಸುಲ್ಕೇರಿ, ಪಂಚಾಯತು ಸಿಬ್ಬಂದಿಗಳಾದ ಮೋಹನ್ ಗೌಡ, ರವಿ ಸುವರ್ಣ ನಾವರ, ಯೋಗೀಶ್ ರಾವ್ ದೋರಿಂಜೆ ಭಾಗವಹಿಸಿದ್ದರು.
ನೂತನ ಪಂಚಾಯತಿಗೆ ಭೇಟಿ: ನೂತನವಾಗಿ ಅಸ್ತಿತ್ವಕ್ಕೆ ಬಂದ ಸುಲ್ಕೇರಿ ಗ್ರಾಮ ಪಂಚಾಯತಿಗೆ ಬೆಳ್ತಂಗಡಿ ಎಪಿಎಂಸಿ ಅಧ್ಯಕ್ಷರಾದ ಧರಣೇಂದ್ರ ಕುಮಾರ್ ಭೇಟಿ ನೀಡಿ ರಾಜ್ಯದಲ್ಲೇ ಉತ್ತಮ ಪಂಚಾಯತು ಎಂಬ ಹೆಗ್ಗಳಿಕೆಗೆ ಪಾತ್ರವಾದ ಹೊಸಂಗಡಿ ಪಂಚಾಯತಿಗೆ ಎಲ್ಲಾ ಸದಸ್ಯರು ಅಲ್ಲಿಗೆ ಭೇಟಿ ನೀಡಿ ಕೆಲವೊಂದು ಮಾರ್ಗದರ್ಶನವನ್ನು ಪಡೆದುಕೊಳ್ಳಬೇಕು. ಅಲ್ಲದೇ ನನ್ನ ನೆಲೆಯಲ್ಲಿ ಆಗುವ ಸಹಕಾರಗಳನ್ನು ಮಾಡುತ್ತೇನೆ ಎಂದರು.
ಸುಲ್ಕೇರಿ ಗ್ರಾಮ ಪಂಚಾಯತ್ನ ನೂತನ ಅಭಿವೃದ್ಧಿ ಅಧಿಕಾರಿ ರವಿಕುಮಾರ್ ಸ್ವಾಗತಿಸಿದರು. ಅಳದಂಗಡಿ ಗ್ರಾಮ ಪಂಚಾಯತ್ನ ಲೆಕ್ಕಾಧಿಕಾರಿ ಭಾನುಕುಮಾರ್ ಧನ್ಯವಾದ ಸಲ್ಲಿಸಿದರು. ಪತ್ರಕರ್ತ ವಿಜಯಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.