ಮಂಗಳೂರು: ವಿಶ್ವವಿಖ್ಯಾತ ಆಧ್ಯಾತ್ಮಿಕ ಮಾರ್ಗದರ್ಶಕಿ ಹಾಗೂ ಪ್ರಶಿಕ್ಷಕಿಯಾಗಿ ಗುರುತಿಸಲ್ಪಟ್ಟಿರುವ ಬ್ರಹ್ಮಾಕುಮಾರಿ ಶಿವಾನಿಯವರು ನಗರಕ್ಕೆ ಆಗಮಿಸಲಿದ್ದಾರೆ. ಆ ಪ್ರಯುಕ್ತ ಪ್ರತಿಷ್ಟಿತ ಟಿ.ಎಮ್.ಎ. ಪೈ ಕನ್ವೆಷನ್ ಸೆಂಟರ್ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮಂಗಳೂರಿನಲ್ಲಿ ಶಿವಾನಿಯವರ ಇದು ಎರಡನೆಯ ಕಾರ್ಯಕ್ರಮವಾಗಿದೆ. 2010 ರಲ್ಲಿ ನಗರದ ಪುರಭವನದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಮಂಗಳೂರಿನ ಜನತೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಫೆಬ್ರುವರಿ 9 ರಂದು ಬೆಳಿಗ್ಗೆ 10-30 ರಿಂದ 12-30 ರವರೆಗೆ Health Happiness and Harmony ಎಂಬ ವಿಷಯದ ಮೇಲೆ ಹಾಗೂ ಸಾಯಂಕಾಲ 5.30 ರಿಂದ 7.30 ರವರೆಗೆ Pause…for Peace ಎನ್ನುವ ವಿಷಯದ ಕುರಿತು ಆಧ್ಯಾತ್ಮಿಕ ಪ್ರವಚನ ನೀಡಲಿದ್ದಾರೆ. ಈ ಎರಡೂ ಕಾರ್ಯಕ್ರಮಗಳಿಗೂ ಪಾಸ್ನ ವ್ಯವಸ್ಥೆ ಇರುವುದರಿಂದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಇಚ್ಛಿಸುವವರು ತಮ್ಮ ಹೆಸರನ್ನು ಉರ್ವಾಸ್ಟೋರ್ನಲ್ಲಿರುವ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ತಮ್ಮ ಹೆಸರನ್ನು ನೊಂದಾಯಿಸಿ ಪ್ರವೇಶದ ಪಾಸನ್ನು ಪಡೆದುಕೊಳ್ಳಬಹುದು.
ಬ್ರಹ್ಮಕುಮಾರಿ ಬಿ ಕೆ ಶಿವಾನಿಯವರ ಕಿರು ಪರಿಚಯ
ಬಿ.ಕೆ ಶಿವಾನಿಯವರು 31-03-1972 ರಂದು ಪುಣೆ ನಗರದಲ್ಲಿ ಜನಿಸಿದ್ದು ತಮ್ಮ 22 ನೇ ವಯಸ್ಸಿನಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪಡೆದು Gold medal ವಿಜೇತೆಯಾಗಿ ಎರಡು ವರ್ಷಗಳ ಕಾಲ ಪುಣೆಯಲ್ಲಿರುವ ಭಾರತೀಯ ವಿದ್ಯಾಪೀಠದಲ್ಲಿ ಉಪನ್ಯಾಸಕಿಯಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದರು. ನಂತರ 2003 ರಲ್ಲಿ ಬ್ರಹ್ಮಾಕುಮಾರಿ ಸಂಸ್ಥೆಯಲ್ಲಿ ಕಲಿಸುವ ರಾಜಯೋಗ ಶಿಕ್ಷಣದಿಂದ ಆಕರ್ಷಿತರಾಗಿ ಅದರ ಆಳವಾದ ಅಧ್ಯಯನವನ್ನು ಮಾಡಿದರು. 2007 ರಲ್ಲಿ ದೂರದರ್ಶನ ಕಾರ್ಯಕ್ರಮವಾದ ‘Awakening with Brahma kumaras’ ಮೂಲಕ ಜನಪ್ರಿಯತೆಯನ್ನು ಗಳಿಸಿದ ಶಿವಾನಿಯವರು ವರ್ತಮಾನ ಸಮಯದಲ್ಲಿ ತಮ್ಮ ವಿಭಿನ್ನ ಶೈಲಿಯ ಪ್ರವಚನಗಳಿಂದ ಲಕ್ಷಾಂತರ ಜನರ ಮೆಚ್ಚುಗೆಯನ್ನು ಗಳಿಸಿದ್ದಾರೆ. ಮನುಷ್ಯರ ಮನಸ್ಸನ್ನು ಆಳವಾಗಿ ಅಧ್ಯಯನ ಮಾಡಿರುವ ಶಿವಾನಿಯವರು ಮಾನಸಿಕ ಕಾಯಿಲೆಗಳಾದ ಮಾನಸಿಕ ಒತ್ತಡ ಖಿನ್ನತೆ ಮೊದಲಾದವುಗಳಿಗೆ ತಮ್ಮ ಪ್ರವಚನಗಳ ಮೂಲಕ ಪರಿಹಾರ ಸೂಚಿಸುವುದನ್ನು ಕಂಡು ಮೆಚ್ಚಿದ ವಿಶ್ವ ಮನಃಶಾಸ್ತ್ರಜ್ಞರ ಸಂಘ ಶಿವಾನಿಯವರನ್ನು ತಮ್ಮ ಸದ್ಭಾವನಾ ರಾಯಭಾರಿಯನ್ನಾಗಿ (Good will Ambassador) ನಿಯೋಜಿಸಿದೆ. ತಮ್ಮ ನಿಸ್ವಾರ್ಥ ಸೇವೆಯಿಂದ ಅನೇಕ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಗಳಿಸಿರುವ ಶಿವಾನಿಯವರು ಕಳೆದ ವರ್ಷ ಭಾರತದ ರಾಷ್ಟ್ರಪತಿ ಮಾನನೀಯ ರಾಮನಾಥ ಕೋವಿಂದ ಇವರಿಂದ ನಾರಿ ಶಕ್ತಿ ಸಮ್ಮಾನ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಯು ಟ್ಯೂಬ್ ಹಾಗೂ ಫೇಸ್ ಬುಕ್ನಲ್ಲಿ ಮಿಲಿಯಾಂತರ ಅಭಿಮಾನಿಗಳನ್ನು ಹೊಂದಿರುವ ಬ್ರಹ್ಮಾಕುಮಾರಿ ಶಿವಾನಿಯವರು ಫೆಬ್ರುವರಿ 9 ರಂದು ನಗರದ ಟಿ.ಎಮ್.ಎ. ಪೈ ಕನ್ವೆಷನ್ ಸೆಂಟರ್ನಲ್ಲಿ ನೀಡಲಿರುವ ಆಧ್ಯಾತ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ, ಮಂಗಳೂರಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದ್ವಿನಿಯೋಗಗೊಳಿಸಬೇಕೆಂದು ಮಂಗಳೂರಿನ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಬಿ ಕೆ ವಿಶ್ವೇಶ್ವರಿಯವರು ವಿನಂತಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ www.townscript.com/e/pauceforpeace-mangaluru ಮತ್ತು www.townscript.com/e/Happiness-mangaluru ಹಾಗೂ ಮೊಬೈಲ್ ನಂ.: 8618626826, 9886247272, 7483383882, 9113941604 ಗೆ ಸಂಪರ್ಕಿಸಬಹುದು.
ಸೂಚನೆಗಳು
🔹 ನೋಂದಣಿಯ ನಂತರ, ಜನವರಿ 5 ರಿಂದ ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಬ್ರಹ್ಮ ಕುಮಾರಿಸ್ ಕೇಂದ್ರದಲ್ಲಿ ಪ್ರವೇಶದ ಪಾಸ್ಗಳನ್ನು ಸಂಗ್ರಹಿಸಬೇಕು. 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅನುಮತಿ ಇಲ್ಲ.
🔹 ಕಾರ್ಯಕ್ರಮದಲ್ಲಿ ಮೊಬೈಲ್ ಫೋನ್ಗಳನ್ನು ಸೈಲೆಂಟ್ ಮೋಡ್ನಲ್ಲಿ ಇಡಬೇಕು.
🔹 ದಯವಿಟ್ಟು ಕಾರ್ಯಕ್ರಮದ 15 ನಿಮಿಷಗಳ ಮೊದಲು ಕುಳಿತುಕೊಳ್ಳಿ.
🔹 ಯಾವುದೇ ಸಂಧರ್ಭ ದಲ್ಲಿ ನೀವು ಬಾಗವಹಿಸಲು ಅನಾನುಕೂಲ ವಾದರೆ ತೆಗೆದುಕೊಂಡ ಪಾಸನ್ನು ಆದ? ಬೇಗ ನಮಗೆ ಹಿಂದಿರುಗಿಸಿ ಇದರಿಂದ ನಾವು ನೋಂದಾಯಿಸಿದ ಇತರರಿಗೆ ನೀಡಿ ಅವರಿಗೆ ಅವಕಾಶ ಕಲ್ಪಿಸಬಹುದು.
ಕೇಂದ್ರ ವಿಳಾಸ – ಬ್ರಹ್ಮ ಕುಮಾರಿ “ವಿಶ್ವ ಶಾಂತಿ ಮಂದಿರ”, ಉರ್ವಾ ಪೊಲೀಸ್ ಠಾಣೆ ಹಿಂದೆ, ಮಹಾಗಣಪತಿ ದೇವಸ್ಥಾನದ ಹತ್ತಿರ, ಉರ್ವಾ ಸ್ಟೋರ್, ಮಂಗಳೂರು Ph: 08242458141, 9113941604
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.