ನವದೆಹಲಿ : ಇಬ್ಬರು ಮೋಸ್ಟ್ ವಾಂಟೆಡ್ ಭಯೋತ್ಪಾದಕರೊಂದಿಗೆ ಸಿಕ್ಕಿಬಿದ್ದ ಜಮ್ಮು ಮತ್ತು ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿ ದೇವಿಂದರ್ ಸಿಂಗ್ ಅವರನ್ನು ತೀವ್ರವಾಗಿ ವಿಚಾರಣೆಗೆ ಒಳಪಡಿಸಲಾಗುತ್ತಿದೆ. 2001 ರ ಸಂಸತ್ತಿನ ದಾಳಿಯಲ್ಲಿ ಇವರ ಪಾತ್ರ ಮತ್ತು ಅಫ್ಜಲ್ ಗುರುವಿನೊಂದಿಗಿನ ಇವರ ಸಂಪರ್ಕದ ಬಗ್ಗೆ ವಿಚಾರಣೆ ನಡೆಯುತ್ತಿದೆ.
ಹಮ್ಹಾಮಾದಲ್ಲಿನ ವಿಶೇಷ ಕಾರ್ಯಾಚರಣೆ ಗುಂಪಿನ ಅಂದಿನ ಉಪ ಅಧೀಕ್ಷಕರಾಗಿದ್ದ ಬಂಧಿತ ಅಧಿಕಾರಿ ಸಿಂಗ್ ಅವರ ಹೆಸರನ್ನು ಅಫ್ಜಲ್ ಗುರು ಉಲ್ಲೇಖಿಸಿದ್ದ ಮತ್ತು ಇವರು 2001 ರ ಘಟನೆಯಲ್ಲಿ ಪರೋಕ್ಷ ಪಾತ್ರ ವಹಿಸಿರುವ ಸುಳಿವು ನೀಡಿದ್ದ ಎನ್ನಲಾಗಿದೆ. ಅಫ್ಜಲ್ ಪ್ರಕಾರ, “ಪಾಕಿಸ್ಥಾನದ ಪ್ರಜೆ ಮತ್ತು ಸಂಸತ್ತಿನ ದಾಳಿ ಪ್ರಕರಣದ ಸಹ ಆರೋಪಿ ಮೊಹಮ್ಮದ್ನನ್ನು ದೆಹಲಿಗೆ ಕರೆದೊಯ್ಯಿರಿ, ಆತನ ವಾಸ್ತವ್ಯಕ್ಕಾಗಿ ಫ್ಲ್ಯಾಟ್ ಬಾಡಿಗೆಗೆ ನೀಡಿ ಮತ್ತು ಅವನಿಗಾಗಿ ಕಾರು ಖರೀದಿಸಿ” ಎಂದು ಸಿಂಗ್ ಆತನಿಗೆ ಹೇಳಿದ್ದರು. ಆದರೂ, ಸಿಂಗ್ ವಿರುದ್ಧದ ಅಫ್ಜಲ್ ಆರೋಪಗಳನ್ನು ಎಂದಿಗೂ ತನಿಖೆ ಮಾಡಲಾಗಿಲ್ಲ.
ದೇವಿಂದರ್ ಸಿಂಗ್ ಅವರನ್ನು ಶ್ರೀನಗರ ವಿಮಾನ ನಿಲ್ದಾಣದಲ್ಲಿ ಅಪಹರಣ ವಿರೋಧಿ ಘಟಕದಲ್ಲಿ ನೇಮಕ ಮಾಡಲಾಗಿದ್ದು, ಗುರುವಾರ ಕಾಶ್ಮೀರಕ್ಕೆ ಭೇಟಿ ನೀಡಿದ ವಿದೇಶಿ ರಾಯಭಾರಿಗಳ 16 ಸದಸ್ಯರ ನಿಯೋಗವನ್ನು ಸ್ವಾಗತಿಸಿದ ಅಧಿಕಾರಿಗಳಲ್ಲಿ ಇವರೂ ಒಬ್ಬರು. ಕಳೆದ ವರ್ಷ ಅವರಿಗೆ ರಾಷ್ಟ್ರಪತಿಗಳ ಪೊಲೀಸ್ ಪದಕವನ್ನೂ ನೀಡಲಾಗಿದೆ. ಆದರೆ, ಶನಿವಾರ ಬಂಧಿತ ಮೂವರು ಭಯೋತ್ಪಾದಕರಲ್ಲಿ ಒಬ್ಬರಾದ ನವೀದ್ ಬಾಬಾ ಎಂಬಾತನೊಂದಿಗೆ ಇವರು ಮಾಡಿದ ಸಂಭಾಷಣೆಯನ್ನು ಗುಪ್ತಚರ ಸಂಸ್ಥೆಗಳು ಪತ್ತೆ ಮಾಡಿವೆ, ಇದರಿಂದ ಅವರ ನಿಜ ಮುಖ ಬಯಲಾಗಿದೆ.
ದೇವಿಂದರ್ ಸಿಂಗ್ ಮತ್ತು ಇಬ್ಬರು ಹಿಜ್ಬುಲ್ ಕಮಾಂಡರುಗಳ ಬಂಧನದ ಬಗ್ಗೆ ವಿವರಗಳನ್ನು ನೀಡಿದ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ವಿಜಯ್ ಕುಮಾರ್ ಅವರು, “ಶೋಪಿಯಾನದ ಎಸ್ ಪಿ ಅವರು ಅವರು ಕಾರಿನಲ್ಲಿ ಇಬ್ಬರು ಉಗ್ರರ ಸಂಚರಿಸುತ್ತಿರುವ ಬಗ್ಗೆ ನಿರ್ದಿಷ್ಟ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಪೊಲೀಸ್ ಕಾರ್ಯಾಚರಣೆಯನ್ನು ನಡೆಸಲಾಯಿತು. ಪೊಲೀಸರು ಬ್ಯಾರಿಕೇಡ್ಗಳನ್ನು ಹಾಕಿದರು ಮತ್ತು ವಾಹನವನ್ನು ತಡೆದರು. ಈ ಕಾರಿನಲ್ಲಿ ಡಿಎಸ್ಪಿ, ವಕೀಲ ಮತ್ತು ಇಬ್ಬರು ಉಗ್ರರು ಕಾರಿನಲ್ಲಿ ಜಮ್ಮುವಿಗೆ ಪ್ರಯಾಣಿಸುತ್ತಿರುವುದು ತಿಳಿದು ಬಂದಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.