ನವದೆಹಲಿ: ಒಮನ್ ದೇಶದ ಸುಲ್ತಾನ ಖಬೂಸ್ ಬಿನ್ ಸೈದ್ ಅಲ್ ಸೈದ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. “ಅವರು ದೂರದೃಷ್ಟಿಯುಳ್ಳ ನಾಯಕ ಮತ್ತು ಮುತ್ಸದ್ಧಿಯಾಗಿದ್ದು ಒಮನ್ ಅನ್ನು ಸಮೃದ್ಧ ದೇಶವಾಗಿ ಪರಿವರ್ತನೆ ಮಾಡಿದರು. ಅವರು ಶಾಂತಿಯ ದಾರಿದೀಪ’ ಎಂದು ಮೋದಿ ಬಣ್ಣಿಸಿದ್ದಾರೆ.
ಟ್ವಿಟ್ ಮಾಡಿರುವ ಮೋದಿ, “ಸುಲ್ತಾನ್ ಖಬೂಸ್ ಬಿನ್ ಸೈದ್ ಅಲ್ ಸೈದ್ ಅವರ ನಿಧನದ ಬಗ್ಗೆ ತಿಳಿದು ನನಗೆ ತುಂಬಾ ದುಃಖವಾಗಿದೆ. ಅವರು ಒಮನ್ ಅನ್ನು ಆಧುನಿಕ ಮತ್ತು ಸಮೃದ್ಧ ರಾಷ್ಟ್ರವಾಗಿ ಪರಿವರ್ತಿಸಿದ ದೂರದೃಷ್ಟಿಯ ನಾಯಕ ಮತ್ತು ರಾಜಕಾರಣಿ. ಅವರು ನಮ್ಮ ಪ್ರದೇಶ ಮತ್ತು ಜಗತ್ತಿಗೆ ಶಾಂತಿಯ ದಾರಿದೀಪವಾಗಿದ್ದರು” ಎಂದಿದ್ದಾರೆ.
ಅಲ್ಲದೇ ಸುಲ್ತಾನ್ ಖಬೂಸ್ ಅವರು ಭಾರತದ ನಿಜವಾದ ಸ್ನೇಹಿತರಾಗಿದ್ದು, ಭಾರತ ಮತ್ತು ಒಮನ್ ನಡುವೆ ಅತ್ಯುತ್ತಮ ಕಾರ್ಯತಾಂತ್ರಿಕ ಪಾಲುದಾರಿತ್ವವನ್ನು ಒದಗಿಸುವಂತಹ ನಾಯಕತ್ವವನ್ನು ಅವರು ನೀಡಿದರು ಎಂದಿದ್ದಾರೆ.
“ಅವರಿಂದ ಪಡೆದ ಪ್ರೀತಿ, ವಾತ್ಸಲ್ಯವನ್ನು ಸದಾ ಸ್ಮರಿಸುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದಿದ್ದಾರೆ.
ಖಬೂಸ್ ಅವರು ಅರಬ್ಬೀ ಜಗತ್ತಿನ ಅತೀ ಹೆಚ್ಚು ಕಾಲ ಆಳಿದ ಸುಲ್ತಾನರಾಗಿದ್ದಾರೆ. 79ನೇ ವಯಸ್ಸಿನಲ್ಲಿ ಅವರು ಮೃತಪಟ್ಟಿದ್ದಾರೆ.
ವರದಿಗಳ ಪ್ರಕಾರ, ಅವರು ಒಮನ್ ಅನ್ನು ಅರ್ಧ ಶತಕಗಳ ಕಾಲ ಆಳಿದ್ದಾರೆ. ಅವಿವಾಹಿತರಾಗಿದ್ದ ಅವರಿಗೆ ಉತ್ತರಾಧಿಕಾರಿಗಳು ಇಲ್ಲ.
I am deeply saddened to learn about the passing away of His Majesty Sultan Qaboos bin Said al Said. He was a visionary leader and statesman who transformed Oman into a modern and prosperous nation. He was a beacon of peace for our region and the world. pic.twitter.com/7QnGhM5lNA
— Narendra Modi (@narendramodi) January 11, 2020
Sultan Qaboos was a true friend of India and provided strong leadership for developing a vibrant strategic partnership between India and Oman. I will always cherish the warmth and affection I received from him. May his soul rest in peace.
— Narendra Modi (@narendramodi) January 11, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.