ನವದೆಹಲಿ: ಮಧ್ಯಪ್ರದೇಶದ ಇಂಧೋರ್ ಸತತ ನಾಲ್ಕನೇ ಬಾರಿಗೆ ಭಾರತದ ಸ್ವಚ್ಛ ನಗರವಾಗಿ ಹೊರಹೊಮ್ಮಿದೆ ಮತ್ತು 1 ಮಿಲಿಯನ್ಗಿಂತಲೂ ಹೆಚ್ಚು ಜನಸಂಖ್ಯೆ ಹೊಂದಿರುವ ಕೋಲ್ಕತಾ ಅತ್ಯಂತ ಕೆಟ್ಟ ಪ್ರದರ್ಶನ ನೀಡಿದೆ ಎಂದು ಮಂಗಳವಾರ ಬಿಡುಗಡೆಯಾದ ಕೇಂದ್ರದ ಸ್ವಚ್ಛ ಸರ್ವೇಕ್ಷನ್ ಲೀಗ್ 2020 ಶ್ರೇಯಾಂಕ (SS League 2020) ತಿಳಿಸಿದೆ.
10 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ನಗರಗಳ ವಿಭಾಗದಲ್ಲಿ, ಭೋಪಾಲ್ ಮೊದಲ ತ್ರೈಮಾಸಿಕ ಫಲಿತಾಂಶಗಳಲ್ಲಿ (ಏಪ್ರಿಲ್ ನಿಂದ ಜೂನ್) ಎರಡನೇ ಸ್ಥಾನದಲ್ಲಿದ್ದರೆ, ರಾಜ್ಕೋಟ್ ‘ಸ್ವಚ್ಛ ಸರ್ವೇಕ್ಷನ್ ಲೀಗ್ 2020’ ನ ಎರಡನೇ ತ್ರೈಮಾಸಿಕ ಫಲಿತಾಂಶಗಳಲ್ಲಿ (ಜುಲೈ-ಸೆಪ್ಟೆಂಬರ್) ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.
ಶ್ರೇಣಿಗಳನ್ನು ಎರಡು ವಿಭಾಗಗಳಲ್ಲಿ ನಿಗದಿಪಡಿಸಲಾಗಿದೆ, ಅವುಗಳೆಂದರೆ 100,000 ಮತ್ತು ಅದಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ನಗರಗಳು (ಎರಡು ಉಪ-ವಿಭಾಗಗಳೊಂದಿಗೆ, ಅಂದರೆ 100,000-1 ಮಿಲಿಯನ್ ಮತ್ತು 1 ಮಿಲಿಯನ್ ಮತ್ತು ಅದಕ್ಕಿಂತ ಹೆಚ್ಚಿನ ಜನಸಂಖ್ಯೆ) ಮತ್ತು 100,000 ಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನಗರಗಳು.
ಮೊದಲ ತ್ರೈಮಾಸಿಕದಲ್ಲಿ ಮೂರನೇ ಸ್ಥಾನವನ್ನು ಸೂರತ್ ಪಡೆದುಕೊಂಡಿದೆ ಮತ್ತು ಎರಡನೇ ತ್ರೈಮಾಸಿಕದಲ್ಲಿ ನವೀ ಮುಂಬೈ ಮೊದಲ ಸ್ಥಾನ ಪಡೆದುಕೊಂಡಿದೆ.
ಎರಡನೇ ತ್ರೈಮಾಸಿಕದಲ್ಲಿ ಒಡೋದರಾ ನಾಲ್ಕನೇ ಸ್ಥಾನದಲ್ಲಿದ್ದರೆ, ಭೋಪಾಲ್, ಅಹಮದಾಬಾದ್, ನಾಸಿಕ್, ಗ್ರೇಟರ್ ಮುಂಬೈ, ಅಲಹಾಬಾದ್ ಮತ್ತು ಲಕ್ನೋ ನಂತರದ ಸ್ಥಾನದಲ್ಲಿದೆ.
ಕಂಟೋನ್ಮೆಂಟ್ ಬೋರ್ಡ್ಗಳಲ್ಲಿ, ದೆಹಲಿ ಕಂಟೋನ್ಮೆಂಟ್ ಪ್ರಥಮ ಸ್ಥಾನದಲ್ಲಿದ್ದರೆ, ಎರಡನೇ ತ್ರೈಮಾಸಿಕದಲ್ಲಿ ಎರಡನೇ ಮತ್ತು ಮೂರನೇ ಸ್ಥಾನಗಳನ್ನು ಕ್ರಮವಾಗಿ ಝಾನ್ಸಿ ಕಂಟೋನ್ಮೆಂಟ್ ಬೋರ್ಡ್ ಮತ್ತು ಜಲಂಧರ್ ಕಂಟೋನ್ಮೆಂಟ್ ಬೋರ್ಡ್ ಪಡೆದುಕೊಂಡಿದೆ.
ಹೈದರಾಬಾದ್ನ ಸಿಕಂದರಾಬಾದ್ ಕಂಟೋನ್ಮೆಂಟ್ ಬೋರ್ಡ್ ಇತರ ಕಂಟೋನ್ಮೆಂಟ್ ಬೋರ್ಡ್ಗಳಿಗಿಂತ ಕೆಟ್ಟ ಪ್ರದರ್ಶನ ನೀಡಿದೆ. ಸಮೀಕ್ಷೆಯ ಪ್ರಕಾರ, ಎರಡನೇ ತ್ರೈಮಾಸಿಕದಲ್ಲಿ 10 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ನಗರಗಳ ವಿಭಾಗದಲ್ಲಿ ಕೋಲ್ಕತಾ ಸ್ವಚ್ಛತೆಯಲ್ಲಿ ಅತ್ಯಂತ ಕೆಳ ಸ್ಥಾನವನ್ನು ಪಡೆದುಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.