ನವದೆಹಲಿ: ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ತನ್ನ ಆಧಾರ್ ಯೋಜನೆಯು 125 ಕೋಟಿ ಗಡಿ ದಾಟಿದೆ ಎಂದು ಘೋಷಿಸಿದೆ. ಅಂದರೆ ಭಾರತದ 125 ಕೋಟಿಗೂ ಹೆಚ್ಚು ಜನರು ಈಗ 12-ಅಂಕಿಯ ವಿಶಿಷ್ಟ ಗುರುತು (ಆಧಾರ್ ಕಾರ್ಡ್) ಹೊಂದಿದ್ದಾರೆ ಎಂಬುದು ತಿಳಿದು ಬಂದಿದೆ.
“ಆಧಾರ್ ಪ್ರತಿಯೊಬ್ಬರಿಗೂ ಪ್ರಾಥಮಿಕ ಗುರುತಿನ ದಾಖಲೆಯಾಗಿ ಗುರುತಿಸಲ್ಪಟ್ಟ ಹಿನ್ನಲೆಯಲ್ಲಿ ಆಧಾರ್ ವಿತರಣೆಯ ಪ್ರಕ್ರಿಯೆ ವೇಗವನ್ನು ಪಡೆದುಕೊಂಡಿದೆ. ಆಧಾರ್ ಆಧಾರಿತ ದೃಢೀಕರಣ ಸೇವೆಗಳು ಪ್ರಾರಂಭದಿಂದಲೂ ಸುಮಾರು 37,000 ಕೋಟಿ ಬಾರಿ ಬಳಕೆಯಾಗಿದೆ ಎಂಬುದು ಸ್ಪಷ್ಟವಾಗಿದೆ” ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಸ್ತುತ ಯುಐಡಿಎಐ ಪ್ರತಿದಿನ ಸುಮಾರು 3 ಕೋಟಿ ದೃಢೀಕರಣ ವಿನಂತಿಗಳನ್ನು ಸ್ವೀಕರಿಸುತ್ತಿದೆ ಎಂದು ಅದು ಹೇಳಿದೆ.
ಯುಐಡಿಎಐ ಇಲ್ಲಿಯವರೆಗೆ 331 ಕೋಟಿ ಯಶಸ್ವಿ ಆಧಾರ್ ನವೀಕರಣಗಳನ್ನು (ಬಯೋಮೆಟ್ರಿಕ್ ಮತ್ತು ಜನಸಂಖ್ಯಾ) ದಾಖಲಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಪ್ರಸ್ತುತ, ಯುಐಡಿಎಐ ಪ್ರತಿದಿನ ಸುಮಾರು 3-4 ಲಕ್ಷ ಆಧಾರ್ ನವೀಕರಣಗಳ ವಿನಂತಿಯನ್ನು ಸ್ವೀಕರಿಸುತ್ತಿದೆ.
ಆಧಾರ್ ಸಂಖ್ಯೆ ಯುಐಡಿಎಐ ಭಾರತದ ನಿವಾಸಿಗಳಿಗೆ ನೀಡುವ 12-ಅಂಕಿಯ ಅನನ್ಯ ಸಂಖ್ಯೆ. ಭಾರತದ ನಿವಾಸಿಯಾಗಿರುವ ಯಾವುದೇ ವ್ಯಕ್ತಿ, ವಯಸ್ಸು ಮತ್ತು ಲಿಂಗವನ್ನು ಲೆಕ್ಕಿಸದೆ, ಆಧಾರ್ ಸಂಖ್ಯೆಯನ್ನು ಪಡೆಯಲು ಸ್ವಯಂಪ್ರೇರಣೆಯಿಂದ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.