ನವದೆಹಲಿ: ಮಧ್ಯಮ ಶ್ರೇಣಿಯ ರಾಮ್ಜೆಟ್ ಸೂಪರ್ಸಾನಿಕ್ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಗಳ ಒಪ್ಪಂದಕ್ಕೆ ಮುಂದಿನ ವರ್ಷದ ಆರಂಭದಲ್ಲಿ ಭಾರತದೊಂದಿಗೆ ಸಹಿ ಮಾಡಲಾಗುವುದು ಎಂದು ಫಿಲಿಪೈನ್ಸ್ನ ರಾಷ್ಟ್ರೀಯ ರಕ್ಷಣಾ ಇಲಾಖೆ (ಡಿಎನ್ಡಿ)ಯ ಕಾರ್ಯದರ್ಶಿ ದೃಢಪಡಿಸಿದ್ದಾರೆ ಎಂದು ಫಿಲಿಪೈನ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಡಿಎನ್ಡಿ ಕಾರ್ಯದರ್ಶಿ ಡೆಲ್ಫಿನ್ ಲೊರೆಂಜಾನಾ ಅವರು ಫಿಲಿಪೈನ್ಸ್ ತನ್ನ ದಾಸ್ತಾನುಗಳಲ್ಲಿ ಬ್ರಹ್ಮೋಸ್ ಕ್ಷಿಪಣಿಯನ್ನು ಹೊಂದುವ ಸಾಧ್ಯತೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, “ಬ್ರಹ್ಮೋಸ್ ಫಿಲಿಫೈನ್ನ ದಾಳಿ ತಡೆಗಟ್ಟುವ ಸಾಮರ್ಥ್ಯವನ್ನು ಹೊಂದಿರುವ ಮೊದಲ ಶಸ್ತ್ರಾಸ್ತ್ರವಾಗಲಿದೆ” ಎಂದಿದ್ದಾರೆ.
“ಒಪ್ಪಂದಕ್ಕೆ 2020ರಲ್ಲಿ ಸಹಿ ಮಾಡುವ ಸಾಧ್ಯತೆ ಇದೆ. ಬಹುಶಃ ಮೊದಲ ಅಥವಾ ಎರಡನೇ ತ್ರೈಮಾಸಿಕದಲ್ಲಿ ಸಹಿ ಬೀಳಬಹುದು” ಎಂದು ಲೊರೆಂಜಾನಾ ಫಿಲಿಪಿನೋದಲ್ಲಿ ಹೇಳಿದರು. ಒಟ್ಟು ಎರಡು ಬ್ಯಾಟರಿಗಳನ್ನು ಫಿಲಿಪೈನ್ ಸೈನ್ಯವು (ಪಿಎ) ಸ್ವಾಧೀನಪಡಿಸಿಕೊಳ್ಳಲಿದೆ ಎಂದಿದ್ದಾರೆ.
ಒಂದು ಬ್ಯಾಟರಿ ಎರಡು ಅಥವಾ ಮೂರು ಕ್ಷಿಪಣಿ ಟ್ಯೂಬ್ಗಳನ್ನು ಹೊಂದಿರುವ ಮೂರು ಮೊಬೈಲ್ ಸ್ವಾಯತ್ತ ಲಾಂಚರ್ಗಳಿಗೆ ಸಮಾನವಾಗಿರುತ್ತದೆ.
“ಫಿಲಿಪೈನ್ ಸೈನ್ಯವು ಈ ರೀತಿಯ ಕ್ಷಿಪಣಿಯನ್ನು ಸ್ವಾಧೀನಪಡಿಸಿಕೊಳ್ಳಲು ಆಸಕ್ತಿ ಹೊಂದಿದೆ ಏಕೆಂದರೆ ಇದು ನಮ್ಮ ಕರಾವಳಿ ರಕ್ಷಣಾ ಕಾರ್ಯಾಚರಣೆಯನ್ನು ಬಲಪಡಿಸುತ್ತದೆ.” ಎಂದು ಅಲ್ಲಿನ ವಕ್ತಾರರು ಹೇಳಿದ್ದರು.
ಸೈನ್ಯವು ತನ್ನ ಮೊದಲ ಭೂ-ಆಧಾರಿತ ಕ್ಷಿಪಣಿ ವ್ಯವಸ್ಥೆಯ ಬ್ಯಾಟರಿ (1 ಎಲ್ಬಿಎಂಎಸ್) ಆಗಿ ಬ್ರಹ್ಮೋಸ್ ಕ್ಷಿಪಣಿಯನ್ನು ಬಯಸುತ್ತದೆ ಎಂದಿದ್ದಾರೆ.
ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಫಿಲಿಪೈನ್ಸ್ಗೆ ಭೇಟಿ ನೀಡಿದಾಗ, ನವದೆಹಲಿ ಮತ್ತು ಮನಿಲಾ ರಕ್ಷಣಾ ಮತ್ತು ಸರಕು ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸುವುದು ಸೇರಿದಂತೆ ಒಟ್ಟು ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಿತ್ತು.
ಆಗ್ನೇಯ ಏಷ್ಯಾದ ದೇಶಗಳೊಂದಿಗೆ ದ್ವಿಪಕ್ಷೀಯ ಸಂಬಂಧವನ್ನು ಬೆಳೆಸಲು ಭಾರತದ “ಆ್ಯಕ್ಟ್ ಈಸ್ಟ್ ಪಾಲಿಸಿ” ಅನ್ನು ರಚಿಸಲಾಗಿದೆ ಮತ್ತು ಫಿಲಿಪೈನ್ಸ್ನೊಂದಿಗೆ ಭಾರತವು ಭದ್ರತೆ ಮತ್ತು ರಕ್ಷಣೆಯ ಸಹಕಾರವನ್ನು ವೈವಿಧ್ಯ ಗೊಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.