ಬೆಂಗಳೂರು: 2018-19ರ ಆರ್ಥಿಕ ವರ್ಷದಲ್ಲಿ ವಿದೇಶಿ ಉಪಗ್ರಹಗಳನ್ನು ಉಡಾವಣೆಗೊಳಿಸಿದ ಹಿನ್ನಲೆಯಲ್ಲಿ ಭಾರತದ ವಿದೇಶಿ ವಿನಿಮಯದಲ್ಲಿ ರೂ.91.63 ಕೋಟಿ ಗಳಿಕೆಯಾಗಿದೆ.
ಸರ್ಕಾರದ ಪ್ರಕಾರ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕಳೆದ ಐದು ವರ್ಷಗಳಲ್ಲಿ 26 ದೇಶಗಳ ಉಪಗ್ರಹಗಳನ್ನು ಉಡಾಯಿಸುವ ಮೂಲಕ 1,245.17 ಕೋಟಿ ರೂಪಾಯಿ ಆದಾಯವನ್ನು ಗಳಿಸಿದೆ.
2018-19ರ ಆರ್ಥಿಕ ಅವಧಿಯಲ್ಲಿ ಉಡಾವಣಾ ಆದಾಯವು ರೂ.324.19 ಕೋಟಿಯಾಗಿದೆ. 2017-18ರಲ್ಲಿ ಗಳಿಸಿದ ಉಡಾವಣಾ ಆದಾಯ 232.56 ಕೋಟಿ ರೂಪಾಯಿ ಆಗಿತ್ತು.
ಯುಎಸ್, ಯುಕೆ, ಜರ್ಮನಿ, ಕೆನಡಾ, ಸಿಂಗಾಪುರ್, ನೆದರ್ಲ್ಯಾಂಡ್ಸ್, ಜಪಾನ್, ಮಲೇಷ್ಯಾ, ಅಲ್ಜೀರಿಯಾ ಮತ್ತು ಫ್ರಾನ್ಸ್ ಮುಂತಾದ 10 ದೇಶಗಳೊಂದಿಗೆ ಕಳೆದ ಐದು ವರ್ಷಗಳಲ್ಲಿ ವಾಣಿಜ್ಯ ವ್ಯವಸ್ಥೆಗಳಡಿ ಉಪಗ್ರಹ ಉಡಾವಣೆಯ ಒಪ್ಪಂದ ಮಾಡಿಕೊಳ್ಳಲಾಯಿತು.
ಸಂಸದ ರಾಕೇಶ್ ಸಿನ್ಹಾ ಅವರು ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಪರಮಾಣು ಇಂಧನ ಮತ್ತು ಬಾಹ್ಯಾಕಾಶ ಸಚಿವ ಜಿತೇಂದ್ರ ಸಿಂಗ್ ಅವರು ಗುರುವಾರ ಈ ಮಾಹಿತಿಯನ್ನು ನೀಡಿದರು.
ಇಸ್ರೋ ಅಧ್ಯಕ್ಷ ಕೆ.ಶಿವನ್ ಅವರ ಪ್ರಕಾರ, ಇಂಡಿಯನ್ ರಾಕೆಟ್ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್ಎಲ್ವಿ) ಇಲ್ಲಿಯವರೆಗೆ ಒಟ್ಟು 52.7 ಟನ್ ಎತ್ತಿದೆ ಮತ್ತು ಇದರಲ್ಲಿ ಶೇಕಡಾ 17 ರಷ್ಟು ಗ್ರಾಹಕರ ಉಪಗ್ರಹಗಳನ್ನು ಒಳಗೊಂಡಿತ್ತು.
ಭಾರತವು ಇಲ್ಲಿಯವರೆಗೆ 319 ವಿದೇಶಿ ಉಪಗ್ರಹಗಳನ್ನು ಕಕ್ಷೆಗೆ ಒಳಪಡಿಸಿದೆ, ಇತ್ತೀಚಿನ ಪಿಎಸ್ಎಲ್ವಿ-ಸಿ 48 ಉಡಾವಣೆಯಲ್ಲಿ 9 ವಿದೇಶಿ ಉಪಗ್ರಹಗಳನ್ನು ಮತ್ತು ಭಾರತದ ಕಣ್ಗಾವಲು ಉಪಗ್ರಹ ರಿಸಾಟ್ -2 ಬಿಆರ್ 1 ಅನ್ನು ಬಾಹ್ಯಾಕಾಶಕ್ಕೆ ಚಿಮ್ಮಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.