ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಎರಡನೇ ಅವಧಿಯ ಸರ್ಕಾರ ಮೊದಲ ಆರು ತಿಂಗಳುಗಳ ಅವಧಿಯಲ್ಲಿ ಮಾಡಿದ ಸಾಧನೆಗಳನ್ನು ಬಿಂಬಿಸುವ ಪುಸ್ತಕವನ್ನು ಪಕ್ಷದ ಸಭೆಯಲ್ಲಿ ಸಂಸದರಿಗೆ ವಿತರಣೆ ಮಾಡಲಾಗಿದೆ.
“ಪುಸ್ತಕವನ್ನು ಸಂಸದರಿಗೆ ವಿತರಣೆ ಮಾಡಲಾಗಿದೆ. ಈ ಪುಸ್ತಕವು 6ತಿಂಗಳ ಮೋದಿ ಸರ್ಕಾರದ ಸಾಧನೆಗಳ ಮಾಹಿತಿಯನ್ನು ಒಳಗೊಂಡಿದೆ. ಸಂಸದರಿಗೆ ಜನರ ಬಳಿ ಹೋಗಿ ಸರಕಾರದ ಸಾಧನೆಗಳನ್ನು ವಿವರಿಸುವಂತೆ ತಿಳಿಸಲಾಗಿದೆ” ಎಂದು ಮೂಲಗಳು ತಿಳಿಸಿವೆ.
“A SLENDID START Big Promises Delivered, Bigger Expectations Triggered #6MonthsofIndiaFirst” ಎಂಬ ಶೀರ್ಷಿಕೆಯ ಪುಸ್ತಕವನ್ನು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಸಂಸದೀಯ ಸಭೆಯ ವೇಳೆ ಸಂಸದರಿಗೆ ವಿತರಣೆ ಮಾಡಲಾಗಿದೆ.
70 ವರ್ಷಗಳ ಬಳಿಕ ಒಂದು ದೇಶ ಒಂದು ಸಂವಿಧಾನ ವಾಸ್ತವವಾಗಿದೆ, ಅಯೋಧ್ಯ ತೀರ್ಪಿನ ಬಳಿಕ ದೇಶದಲ್ಲಿ ಶಾಂತಿಸುವ್ಯವಸ್ಥೆ ನೆಲೆಸಿದೆ, 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಆಗುವತ್ತ ಸುಧಾರಣೆಗಳನ್ನು ತರಲಾಗಿದೆ, ಜಾಗತಿಕ ಮಟ್ಟದಲ್ಲಿ ಭಾರತದ ಕಾಲಿಡುತ್ತಿದೆ, ಭಾರತದ ನಾರಿ ಶಕ್ತಿಯನ್ನು ಸಬಲೀಕರಣಗೊಳಿಸಲಾಗುತ್ತಿದೆ, ರೈತರ ಆದಾಯ ಮತ್ತು ಭದ್ರತೆಗೆ ನಿರ್ಣಾಯಕ ಆರು ತಿಂಗಳು, ಉತ್ತಮ ಆಡಳಿತ ನೀಡಲಾಗುತ್ತಿದೆ, 150ನೇ ಜನ್ಮ ವರ್ಷಾಚರಣೆಯ ಮೂಲಕ ಗಾಂಧೀಜಿಗೆ ನಿಜವಾದ ಗೌರವ ಸಮರ್ಪಣೆ ಮತ್ತು ಜೀವನ ಗುಣಮಟ್ಟವನ್ನು ಸುಧಾರಿಸಲಾಗಿದೆ ಎಂಬಿತ್ಯಾದಿ ಅಂಶಗಳನ್ನು ಪುಸ್ತಕ ಒಳಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.