
ನವದೆಹಲಿ: ಭಾರತದಲ್ಲಿ ಹಡಗುಗಳ ರಿಸೈಕ್ಲಿಂಗ್ಗೆ ಬೇಡಿಗೆ ಭಾರಿ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಹಡಗುಗಳ ರಿಸೈಕ್ಲಿಂಗ್ ಮಸೂದೆ 2019ಕ್ಕೆ ಸಂಸತ್ತು ಅನುಮೋದನೆಯನ್ನು ನೀಡಿದೆ.
ಹಡಗುಗಳ ರಿಸೈಕ್ಲಿಂಗ್ನಿಂದ ಶಿಪ್ಪಿಂಗ್ ಉದ್ಯಮವು ಭಾರಿ ಉತ್ತೇಜನವನ್ನು ಪಡೆದುಕೊಳ್ಳಲಿದೆ. ಶಿಪ್ಪಿಂಗ್ ವ್ಯವಹಾರ ವಾರ್ಷಿಕವಾಗಿ ಎರಡು ಬಿಲಿಯನ್ ಡಾಲರ್ಗೆ ಏರಿಕೆಯಾಗಲಿದೆ ಎಂದು ಶಿಪ್ಪಿಂಗ್ ಖಾತೆಯ ರಾಜ್ಯ ಖಾತೆ ಸಚಿವ ಮನ್ಸುಕ್ ಮಾಂಡವೀಯ ಅವರು ಹೇಳಿದ್ದಾರೆ. ಈ ಮಸೂದೆಯು ಶಿಪ್ಪಿಂಗ್ ಇಂಡಸ್ಟ್ರಿಯನ್ನು ಅಂತರಾಷ್ಟ್ರೀಯ ಗುಣಮಟ್ಟ ಗಳಿಗೆ ಅನುಗುಣವಾಗಿ ನಿಯಂತ್ರಿಸುವ ಇರಾದೆಯನ್ನು ಹೊಂದಿದೆ ಎಂದು ಅವರು ತಿಳಿಸಿದ್ದಾರೆ.
ಹಡಗುಗಳ ರಿಸೈಕ್ಲಿಂಗ್ ಮಸೂದ್ 2019 ಅನ್ನು ಸೋಮವಾರ ರಾಜ್ಯಸಭೆಯಲ್ಲಿ ಧ್ವನಿಮತದ ಮೂಲಕ ಅನುಮೋದಿಸಲಾಯಿತು. ಕಳೆದ ವಾರ ಲೋಕಸಭೆಯಲ್ಲಿ ಇದನ್ನು ಅನುಮೋದಿಸಲಾಗಿದೆ. ಪ್ರಸ್ತುತ ಇದನ್ನು ರಾಷ್ಟ್ರಪತಿಗಳ ಅಂಕಿತಕ್ಕಾಗಿ ಕಳುಹಿಸಿಕೊಡಲಾಗಿದೆ. ರಾಷ್ಟ್ರಪತಿಗಳ ಅಂಕಿತ ಬಿದ್ದ ಬಳಿಕ ಈ ಮಸೂದೆಯು ಕಾನೂನಾಗಿ ಪರಿವರ್ತನೆಯಾಗಲಿದೆ.
“ಗುಜರಾತ್ ರಾಜ್ಯವೊಂದಕ್ಕೆ ಬಿಹಾರ ಮತ್ತು ಇತರ ರಾಜ್ಯಗಳ ಅಪಾರ ಪ್ರಮಾಣದ ಜನರು ಶಿಪ್ಪಿಂಗ್ ಉದ್ಯಮದಲ್ಲಿ ಕೆಲಸ ಮಾಡುವ ಸಲುವಾಗಿ ಆಗಮಿಸುತ್ತಾರೆ. ಅವರು ಶಿಪ್ ಇಂಡಸ್ಟ್ರಿಗೆ ಸಂಪರ್ಕಿತರಾದವರು ಮತ್ತು ಎಲ್ಲಾ ಜನರು ಮಸೂದೆಯಿಂದ ಸಾಕಷ್ಟು ಪ್ರಯೋಜನವನ್ನು ಪಡೆದುಕೊಳ್ಳಲಿದ್ದಾರೆ” ಎಂದು ಸಚಿವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


