ನವದೆಹಲಿ: ಇಂದು ಸಶಸ್ತ್ರ ಪಡೆಗಳ ಧ್ವಜ ದಿನ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೇನಾಪಡೆಗಳ ಸಬಲೀಕರಣಕ್ಕಾಗಿ ಕೊಡುಗೆಗಳನ್ನು ನೀಡುವಂತೆ ದೇಶದ ನಾಗರಿಕರಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ. ಪ್ರತಿವರ್ಷ ಡಿಸೆಂಬರ್ 7 ರಂದು ಸಶಸ್ತ್ರ ಪಡೆಗಳ ಧ್ವಜ ದಿನವನ್ನು ಆಚರಣೆ ಮಾಡಲಾಗುತ್ತದೆ.
ನಮ್ಮ ದೇಶದ ಗಡಿಗಳನ್ನು ಅತ್ಯಂತ ಶ್ರದ್ಧೆಯಿಂದ ಕಾಯುವ ಮೂಲಕ ದೇಶವನ್ನು ಸುರಕ್ಷಿತವಾಗಿ ಇಟ್ಟಿರುವ ವಾಯು ಸೈನಿಕರು, ಭೂಸೇನಾ ಸೈನಿಕರು ಮತ್ತು ನೌಕಾಸೇನಾ ಸೈನಿಕರಿಗೆ ಗೌರವವನ್ನು ಸಲ್ಲಿಸುವ ಸಲುವಾಗಿ 1949 ಡಿಸೆಂಬರ್ 7 ರಿಂದ ಕ್ಷೇತ್ರದ ಪಡೆಗಳ ಧ್ವಜ ದಿನವನ್ನು ಆಚರಣೆ ಮಾಡುತ್ತ ಬರಲಾಗುತ್ತಿದೆ.
ಹುತಾತ್ಮ ಯೋಧರ ವಿಧವೆಯರ, ಮಕ್ಕಳ, ಯುದ್ಧದಿಂದ ದಿವ್ಯಾಂಗರಾಗಿರುವ ಯೋಧರ, ಮಾಜಿ ಸೈನಿಕರ ಕಲ್ಯಾಣಕ್ಕಾಗಿ ಈ ದಿನ ದೇಣಿಗೆಯನ್ನು ಸಂಗ್ರಹಿಸುವ ಕಾರ್ಯವನ್ನು ಮಾಡಲಾಗುತ್ತದೆ.
“ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ನಾವು ವೀರ ಸೈನಿಕರ ಮತ್ತು ಅವರ ಕುಟುಂಬಗಳ ಶೌರ್ಯಕ್ಕೆ ಸೆಲ್ಯೂಟ್ ಮಾಡುತ್ತೇವೆ. ನಮ್ಮ ಪಡೆಗಳ ಸಬಲೀಕರಣಕ್ಕಾಗಿ ಕೊಡುಗೆಗಳನ್ನು ನೀಡಿ ಎಂದು ನಾನು ದೇಶದ ನಾಗರಿಕರಲ್ಲಿ ಮನವಿ ಮಾಡುತ್ತೇನೆ” ಇಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
On Armed Forces Flag Day we salute the indomitable courage of our forces and their families.
I also urge you to contribute towards the welfare of our forces. pic.twitter.com/WXQqWAFlPg
— Narendra Modi (@narendramodi) December 7, 2019
ಅಲ್ಲದೆ ಅವರು, ಭಾರತೀಯ ವಾಯುಸೇನೆಯ ಯುದ್ಧ ವಿಮಾನಗಳು, ನೌಕಾಸೇನೆಯ ಸಿಬ್ಬಂದಿಗಳು ಮತ್ತು ಸೈನಿಕರುಗಳು ರಾಷ್ಟ್ರ ಧ್ವಜವನ್ನು ಹಿಡಿದಿರುವ ದೃಶ್ಯವನ್ನು ಹಂಚಿಕೊಂಡಿದ್ದಾರೆ.
ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಭಾರತೀಯ ವಾಯುಸೇನೆ, ಭಾರತೀಯ ಭೂಸೇನೆ ಮತ್ತು ಭಾರತೀಯ ನೌಕಾಸೇನೆಗಳು ದೇಶ ರಕ್ಷಣೆಗಾಗಿನ ತಮ್ಮ ಪ್ರಯತ್ನಗಳನ್ನು ಬಿಂಬಿಸುವ ಹಲವಾರು ಕಾರ್ಯಕ್ರಮಗಳನ್ನು ಆಯೋಜನೆಗೊಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.