ನವದೆಹಲಿ: ಇಂಟರ್ನ್ಯಾಷನಲ್ ನರ್ಸಸ್ ಡೇ ಪ್ರಯುಕ್ತ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಇಂದು 36 ಮಂದಿ ನರ್ಸ್ಗಳಿಗೆ ನ್ಯಾಷನಲ್ ಫ್ಲೋರೆನ್ಸ್ ನೈಟಿಂಗೇಲ್ ಅವಾರ್ಡ್ಸ್ ಪ್ರದಾನಿಸಿದರು.
ಆರೋಗ್ಯ ಸೇವೆ ವಲಯದಲ್ಲಿ ಅಪ್ರತಿಮ ಸೇವೆಯನ್ನು ಸಲ್ಲಿಸಿದ ಕಾರಣಕ್ಕಾಗಿ 36 ಮಂದಿ ನರ್ಸ್ಗಳಿಗೆ ರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರದಾನಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಗಳು, ಆರೋಗ್ಯ ಸೇವಾ ವಲಯದಲ್ಲಿ ಅತ್ಯಂತ ಗುಣಾತ್ಮಕ ಮತ್ತು ಕೈಗೆಟುಕುವ ದರದಲ್ಲಿ ಆರೋಗ್ಯ ಚಿಕಿತ್ಸೆಯನ್ನು ನೀಡುವಲ್ಲಿ ಶುಶ್ರೂಷಕರು ಅತ್ಯಂತ ಮಹತ್ವದ ಪಾತ್ರವನ್ನು ನಿಭಾಯಿಸುತ್ತಾರೆ. ಈ ಮೂಲಕ ವ್ಯಕ್ತಿಗಳ, ಕುಟುಂಬಗಳ ಮತ್ತು ಸಮುದಾಯಗಳ ಆರೋಗ್ಯ ಅಗತ್ಯತೆಗಳು ಮತ್ತು ಸವಾಲುಗಳಿಗೆ ಸ್ಪಂದಿಸುತ್ತಾರೆ ಎಂದಿದ್ದಾರೆ.
“ಜಗತ್ತಿಗೆ ಕಾಳಜಿ ಮತ್ತು ಸಹಾನುಭೂತಿಯ ಸಾಕಷ್ಟು ಅಗತ್ಯವಿದೆ. ಶುಶ್ರೂಷಕರು ಸೇವೆ, ಶುಶ್ರೂಷೆ, ಕರುಣೆಯ ಸಂಕೇತವಾಗಿರುತ್ತಾರೆ. ರೋಗಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಶುಶ್ರೂಷಕರು ಆರೋಗ್ಯ ಸೇವೆಯ ರೂಪವಾಗಿ ಇರುತ್ತಾರೆ” ಎಂದಿದ್ದಾರೆ.
2020 ಅನ್ನು ವಿಶ್ವ ಆರೋಗ್ಯ ಸಂಸ್ಥೆಯು ಮತ್ತು ಮಿಡ್ ವೈಫ್ಗಳ ವರ್ಷವಾಗಿ ಆಚರಣೆ ಮಾಡಲು ಕರೆ ಕೊಟ್ಟಿರುವುದಕ್ಕೆ ಸಂತೋಷವನ್ನು ವ್ಯಕ್ತಪಡಿಸಿದರು.
President Kovind presents National Florence Nightingale Awards 2019 in New Delhi; says the country is grateful to the nursing community for their dedication and selfless services to fellow citizens. https://t.co/oOwEZBK4Hy pic.twitter.com/mLTkHXWzC8
— President of India (@rashtrapatibhvn) December 5, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.