ವಾರಣಾಸಿ: ಯಾರೊಬ್ಬರೂ ಖಾಲಿಹೊಟ್ಟೆಯಲ್ಲಿ ಮಲಗಬಾರದು ಎಂಬ ಉದ್ದೇಶದೊಂದಿಗೆ ಫೀಡಿಂಗ್ ಇಂಡಿಯಾ ಎಂಬ ಎನ್ಜಿಒ ಉತ್ತರ ಪ್ರದೇಶದ ವಾರಣಾಸಿಯ ನಗರದಲ್ಲಿ ‘ಹ್ಯಾಪಿ ಫ್ರಿಡ್ಜ್’ ಅನ್ನು ಅಳವಡಿಸಿದೆ. ಈ ಫ್ರಿಡ್ಜ್ ಆಹಾರವನ್ನು ಸಂರಕ್ಷಣೆ ಮಾಡುತ್ತಿದ್ದು, ಇದರಲ್ಲಿನ ಆಹಾರವನ್ನು ಅಗತ್ಯವಿರುವವರು ತೆಗೆದುಕೊಳ್ಳಬಹುದಾಗಿದೆ.
ವಾರಣಾಸಿಯ ಹಲವಾರು ಭಾಗಗಳಲ್ಲಿ ಹ್ಯಾಪಿ ಫ್ರಿಡ್ಜ್ ಅನ್ನು ಅಳವಡಿಸಲಾಗಿದೆ. ಭಿಕ್ಷುಕರಿಗೆ ಮತ್ತು ಇತರ ಬಡಜನರಿಗೆ, ವಸತಿಹೀನರಿಗೆ ಆಹಾರವನ್ನು ಪೂರೈಕೆ ಮಾಡುತ್ತದೆ. ಎನ್ಜಿಒ ಸದಸ್ಯರುಗಳು ನಿತ್ಯ ಈ ಫ್ರಿಜ್ನೊಳಗಿನ ಆಹಾರಗಳನ್ನು ಪರೀಕ್ಷೆಗೊಳಪಡಿಸಿ, ಸೇವಿಸಲು ಸುರಕ್ಷಿತವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾರೆ.
ಯಾರು ಬೇಕಾದರೂ ಈ ಫ್ರಿಜ್ನೊಳಗೆ ಆಹಾರವನ್ನು ತಂದು ಇಡಬಹುದಾಗಿದೆ ಅಥವಾ ದೂರವಾಣಿ ಕರೆ ಮಾಡಿದರೆ ಎನ್ಜಿಒ ಸದಸ್ಯರುಗಳು ಬಂದು ಆಹಾರವನ್ನು ಸಂಗ್ರಹಿಸುತ್ತಾರೆ.
ಒರಿಸ್ಸಾದ ಭುವನೇಶ್ವರ ನಗರದ ಹಲವು ಕಡೆಯೂ ಹ್ಯಾಪಿ ಫ್ರಿಡ್ಜ್ ಅನ್ನು ಅಳವಡಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.