ನವದೆಹಲಿ: ಪ್ರಸ್ತುತ ನಡೆಯುತ್ತಿರುವ ಸೌತ್ ಏಶಿಯನ್ ಗೇಮ್ಸ್ 2019 ನಲ್ಲಿ ಭಾರತದ ಪದಕಗಳ ಸಂಖ್ಯೆ 48 ಕ್ಕೆ ಏರಿಕೆಯಾಗಿದೆ.
ಭಾರತ ಬುಧವಾರ ಬೆಳಗ್ಗೆ ಮಹಿಳಾ ಮತ್ತು ಪುರುಷರ ಡಿಸ್ಕಸ್ ಥ್ರೋ ವಿಭಾಗದಲ್ಲಿ ಒಂದು ಬಂಗಾರ ಮತ್ತು ಬೆಳ್ಳಿಯ ಪದಕಗಳನ್ನು ಗಳಿಸಿದೆ. ಕೃಪಾಲ್ ಸಿಂಗ್ ಅವರು ಪುರುಷರ ವಿಭಾಗದಲ್ಲಿ ದಾಖಲೆಯ 57.99 ಮೀಟರ್ ದೂರ ಎಸೆದು ಬಂಗಾರದ ಪದಕವನ್ನು ಜಯಿಸಿದರು. ಗಂಗಾ ದೀಪ್ ಸಿಂಗ್ ಅವರು ಬೆಳ್ಳಿಯ ಪದಕವನ್ನು ಜಯಿಸಿದರು.
ತನ್ನ ಸಾಧನೆಯ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿರುವ ಸಿಂಗ್ ಅವರು,” ನಿಜಕ್ಕೂ ನನಗೆ ಸಂತೋಷವಾಗುತ್ತಿದೆ, ಆದರೆ ಕೆಲವೊಂದು ಕಾರಣಗಳಿಂದಾಗಿ ನನ್ನ ಸಾಧನೆ ಅಷ್ಟೊಂದು ಅತ್ಯುತ್ತಮವಾಗಿರಲಿಲ್ಲ. ಸಮಸ್ಯೆಗಳಿದ್ದರೂ ನಮ್ಮ ಪ್ರದರ್ಶನಗಳು ಉತ್ತಮವಾಗಿದ್ದವು ಎಂಬುದಕ್ಕೆ ಸಂತೋಷವಾಗುತ್ತಿದೆ. 2020ರ ಒಲಿಂಪಿಕ್ಸ್ ಗೆ ಸುಧಾರಣೆಗಳನ್ನು ಮಾಡಿಕೊಳ್ಳಲು ನಮಗೆ ಇನ್ನೂ ಸಾಕಷ್ಟು ಅವಕಾಶಗಳಿವೆ. ಖಂಡಿತವಾಗಿಯೂ ನಾವು ಪರಿಶ್ರಮ ಪಡುತ್ತೇವೆ” ಎಂದಿದ್ದಾರೆ.
ಸೈಟೇಶನ್ ಗೇಮ್ಸ್ನಲ್ಲಿ ಭಾರತೀಯರು ಅತ್ಯಂತ ಉತ್ತಮವಾದ ಪ್ರದರ್ಶನಗಳನ್ನು ನೀಡುತ್ತಿದ್ದು ಇದುವರೆಗೆ 48 ಪದಕಗಳನ್ನು ಜಯಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.