ಪ್ರತಿ ವರ್ಷ ಡಿಸೆಂಬರ್ 4 ರಂದು ಭಾರತೀಯ ನೌಕಾ ದಿನವನ್ನು ಆಚರಣೆ ಮಾಡಲಾಗುತ್ತದೆ. 1971 ರಲ್ಲಿ ಜರುಗಿದ ಭಾರತೀಯ ನೌಕಾ ಆಪರೇಷನ್ ಟ್ರಿಡೆಂಟ್ ಸ್ಮರಣಾರ್ಥ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ಭಾರತೀಯ ಶಸ್ತ್ರಾಸ್ತ್ರ ಪಡೆದರು ನೌಕಾ ಅಂಗವೇ ಭಾರತೀಯ ನೌಕಾಸೇನೆ. ಭಾರತದ ರಾಷ್ಟ್ರಪತಿಯವರು ಈ ಸೇನೆಯ ಕಮಾಂಡರ್ ಇನ್ ಚೀಫ್ ಆಗಿರುತ್ತಾರೆ. 17ನೇ ಶತಮಾನದ ಮರಾಠ ಸಾಮ್ರಾಟ ಛತ್ರಪತಿ ಶಿವಾಜಿ ಭೋಂಸ್ಲೆ ಅವರು ಭಾರತೀಯ ನೌಕೆಯ ಪಿತಾಮಹ ಎಂದು ಕರೆಯಲ್ಪಡುತ್ತಾರೆ.
ನೌಕಾ ದಿನದ ಇತಿಹಾಸ :
ಡಿಸೆಂಬರ್ 4 ರಂದು ಪ್ರತಿವರ್ಷ ಭಾರತೀಯ ನೌಕಾಪಡೆಯು ನೌಕಾ ದಿನವನ್ನು ಆಚರಣೆ ಮಾಡುತ್ತದೆ. 1971 ಈ ದಿನ ಭಾರತೀಯ ನೌಕೆಯು ಕರಾಚಿಯಲ್ಲಿನ ಪಾಕಿಸ್ಥಾನದ ನೌಕಾ ಕೇಂದ್ರ ಕಚೇರಿ ಮೇಲೆ ದಾಳಿಯನ್ನು ನಡೆಸಿತ್ತು. ಈ ದಾಳಿಯಲ್ಲಿ ಸುಮಾರು 300 ಮಂದಿ ಯೋಧರು ಹುತಾತ್ಮರಾಗಿದ್ದಾರೆ ಮತ್ತು 700 ಯೋಧರು ಗಾಯಗೊಂಡಿದ್ದರು. ಈ ಕಾರ್ಯಾಚರಣೆಯು ಆಪರೇಷನ್ ಟ್ರಿಡೆಂಟ್ ಎಂದು ಖ್ಯಾತವಾಗಿದೆ.
ಈಶಾನ್ಯ ವಲಯದಲ್ಲಿ ಪಾಕಿಸ್ಥಾನಿಗಳ ದೌರ್ಜನ್ಯ ಮಿತಿಮೀರಿದ್ದು ಈ ಕಾರ್ಯಾಚರಣೆಗೆ ಕಾರಣವಾಗಿದೆ. ಈ ವಲಯದಲ್ಲಿ ಹತ್ಯಾಕಾಂಡವನ್ನು ಪಾಕಿಸ್ಥಾನಿಗಳು ನಡೆಸಿದ್ದರು. ಈ ಹತ್ಯಾಕಾಂಡದಲ್ಲಿ ಸುಮಾರು 3 ಮಿಲಿಯನ್ ಜನರು ಹತ್ಯೆಯಾಗಿದ್ದಾರೆ ಎಂದು ಹೇಳಲಾಗಿದೆ. ಸುಮಾರು 10 ಮಿಲಿಯನ್ ಜನರು ಪೂರ್ವದಲ್ಲಿ ಪಾಕಿಸ್ಥಾನದ ಗಡಿಗಳನ್ನು ದಾಟಿ ಭಾರತದಲ್ಲಿ ಆಶ್ರಯವನ್ನು ಪಡೆದಿದ್ದರು. ಭಾರತವು ಪೂರ್ವ ಪಾಕಿಸ್ಥಾನದ ಸ್ವಾತಂತ್ರ್ಯ ಚಳುವಳಿಯನ್ನು ಬೆಂಬಲಿಸಲು ಆರಂಭಿಸಿದಾಗ ಪಾಕಿಸ್ಥಾನಿಗಳು ಭಾರತದ ವಾಯು ನೆಲೆಗಳ ಮೇಲೆ ದಾಳಿಯನ್ನು ನಡೆಸಿದರು. ಇದಕ್ಕೆ ಪ್ರತೀಕಾರವಾಗಿ ಭಾರತ ಆಪರೇಷನ್ ಟ್ರಿಡೆಂಟ್ ಅನ್ನು ನಡೆಸಿತ್ತು.
ಆ ಸಂದರ್ಭದಲ್ಲಿ ಪೂರ್ವ ಮತ್ತು ಪಶ್ಚಿಮ ಪಾಕಿಸ್ಥಾನದ ನಡುವೆ ಸಂಪರ್ಕ ಕೇವಲ ಸಮುದ್ರ ಮಾರ್ಗವಾಗಿತ್ತು. ಹೀಗಾಗಿ ಭಾರತ-ಪಾಕಿಸ್ಥಾನದ ಸಮುದ್ರ ಸಾಮರ್ಥ್ಯದ ಮೇಲೆ ದಾಳಿಯನ್ನು ನಡೆಸುವ ನಿರ್ಣಾಯಕ ನಿರ್ಧಾರವನ್ನು ತೆಗೆದುಕೊಂಡಿತು. ಪಾಕಿಸ್ಥಾನವು ರಾತ್ರಿ ವೇಳೆ ಕಾರ್ಯಾಚರಿಸುವ ಅಂತಹ ಫೈಟರ್ ಏರ್ಕ್ರಾಫ್ಟ್ ಅನ್ನು ಹೊಂದಿರಲಿಲ್ಲ, ಹೀಗಾಗಿ ಭಾರತ ಸೂರ್ಯಾಸ್ತದ ಬಳಿಕ ಕಾರ್ಯಾಚರಣೆಯನ್ನು ಆರಂಭಿಸಿತು. ಈ ಕಾರ್ಯಾಚರಣೆಯಲ್ಲಿ ಪಾಕಿಸ್ಥಾನದ ಪ್ರಮುಖ ಇಂಧನ ಮತ್ತು ಶಸ್ತ್ರಾಸ್ತ್ರ ದಾಸ್ತಾನುಗಳ ಮೇಲೆ ದಾಳಿಯನ್ನು ನಡೆಸಲಾಯಿತು. ದಾಳಿ ಹಡಗುಗಳ ಗುಂಪುಗಳನ್ನು ಕಿಲ್ಲರ್ ಸ್ಕ್ವಾಡ್ರನ್ ಎಂದು ಕರೆಯಲಾಗುತ್ತದೆ. 1971 ಡಿಸೆಂಬರ್ 16ರಂದು ಯುದ್ಧ ಕೊನೆಗೊಂಡಿತು ಪೂರ್ವ ಪಾಕಿಸ್ಥಾನವು ಸ್ವಾತಂತ್ರ್ಯವನ್ನು ಪಡೆದುಕೊಂಡಿತು ಮತ್ತು ಬಾಂಗ್ಲಾದೇಶದ ಉದಯವಾಯಿತು.
2019ರ ನೌಕಾ ದಿನದ ಥೀಮ್
2019ರ ಭಾರತೀಯ ನೌಕಾಸೇನೆಯ ನೌಕಾ ದಿನದ ಥೀಮ್ “ಭಾರತೀಯ ನೌಕೆ-ಶಾಂತ, ಬಲಿಷ್ಠ ಮತ್ತು ತ್ವರಿತ’ ಎಂಬುದಾಗಿದೆ.
2019ರ ನೌಕಾ ದಿನದ ಆಚರಣೆ
ಈ ವರ್ಷ ಭಾರತೀಯ ನೌಕಾಪಡೆಯ ನೌಕಾ ದಿನದ ಆಚರಣೆಯು ಕೇರಳದ ಚೇರಿಯ ಕಡಮಕುಡಿನಲ್ಲಿ ಜರುಗುತ್ತಿದೆ. ಈ ಗ್ರಾಮದಲ್ಲಿ 2018ರ ಆಗಸ್ಟ್ ತಿಂಗಳಲ್ಲಿ ಅಪ್ಪಳಿಸಿದ ಬಳಿಕ ನೌಕಾಸೇನೆಯು ಹಲವಾರು ಪುನರ್ವಸತಿ ಮತ್ತು ಮಾನವೀಯ ಕಾರ್ಯಕ್ರಮಗಳನ್ನು ಆಯೋಜನೆಗೊಳಿಸಿದೆ. ನೆರೆಯ ಸಂದರ್ಭದಲ್ಲಿ ನೌಕಾಸೇನೆಯ ಸುಮಾರು 17 ಸಾವಿರ ಮಂದಿಯನ್ನು ರಕ್ಷಣೆ ಮಾಡಿದೆ.
ಅಕ್ಟೋಬರ್ 30 ರಿಂದ ನವೆಂಬರ್ 2ರ ವರೆಗೆ ನೌಕಾಸೇನೆ ಇಲ್ಲಿ ಹಲವರು ಕಲ್ಯಾಣ ಕಾರ್ಯಕ್ರಮಗಳನ್ನು. ಅನಾಥಾಶ್ರಮಗಳಲ್ಲಿ ಮತ್ತು ವೃದ್ಧಾಶ್ರಮಗಳಲ್ಲಿನ ಜನರಿಗೆ ಸಾಕಷ್ಟು ನೆರವನ್ನು ನೀಡಿದೆ. ವಿಶೇಷ ತಜ್ಞರುಗಳಿಂದ ವೈದ್ಯಕೀಯ ಚಿಕಿತ್ಸೆಯನ್ನು ನೌಕಾಪಡೆಯು ನೀಡಿದೆ. ನೌಕಾ ಕುಟುಂಬಗಳು ಸ್ವಯಂ ಇಚ್ಛೆಯಿಂದ ಕೊಡುಗೆ ನೀಡಿದಂತಹ ವಸ್ತುಗಳನ್ನು ಮತ್ತು ವೈದ್ಯಕೀಯ ನೆರವುಗಳನ್ನು ಇಲ್ಲಿನ ಜನರಿಗೆ ನೌಕಾಪಡೆಯ ವತಿಯಿಂದ ತಲುಪಿಸಲಾಗಿದೆ. ರಕ್ತದಾನ ಶಿಬಿರಗಳನ್ನು ನೌಕಾ ಯೋಧರು ನಡೆಸಿದ್ದಾರೆ.
ರಾಷ್ಟ್ರಸೇವೆಗೆ ಅಪ್ರತಿಮ ಕೊಡುಗೆಗಳನ್ನು ನೀಡಿ ಹುತಾತ್ಮರಾದ ನೌಕಾ ಯೋಧರಿಗೆ ಯುದ್ಧ ಸ್ಮಾರಕದಲ್ಲಿ ಮಾಲಾರ್ಪಣೆ ಕಾರ್ಯಕ್ರಮ ನಡೆಸುವ ಮೂಲಕ ನೌಕಾ ದಿನವನ್ನು ಆರಂಭಿಸಲಾಗುತ್ತದೆ. ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್, ಸದರ್ನ್ ನಾವೆಲ್ ಕಮಾಂಡ್ ಅವರು ಮಾಲಾರ್ಪಣೆ ಕಾರ್ಯಕ್ರಮವನ್ನು ನೆರವೇರಿಸುತ್ತಾರೆ. ನೌಕಾ ದಿನವು ಈ ದೇಶಕ್ಕಾಗಿ ಅಪ್ರತಿಮ ಸೇವೆ ಸಲ್ಲಿಸಿದ ನೌಕಾ ಯೋಧರ ತ್ಯಾಗ ಮತ್ತು ಬಲಿದಾನಗಳನ್ನು ಸ್ಮರಿಸುತ್ತದೆ. ಸಮುದ್ರ ಗಡಿಗಳನ್ನು ಸದಾ ರಕ್ಷಣೆ ಮಾಡುವ ಮೂಲಕ ದೇಶವನ್ನು ಭದ್ರವಾಗಿಟ್ಟಿರುವ ನೌಕಾ ಯೋಧರಿಗೆ ನಮ್ಮದೊಂದು ಸಲ್ಯೂಟ್.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.