ನವದೆಹಲಿ: ಕಳೆದ ನಾಲ್ಕು ವರ್ಷಗಳಲ್ಲಿ ಭಾರತದ ಹುಲಿಗಳ ಸಂಖ್ಯೆಯು 750 ರಷ್ಟು ಹೆಚ್ಚಾಗಿದೆ. ಈ ಮೂಲಕ ಪ್ರಸ್ತುತ ದೇಶದಲ್ಲಿರುವ ಹುಲಿಗಳ ಸಂಖ್ಯೆ 2,976 ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ವೈಪರಿತ್ಯ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಜಾವಡೇಕರ್ ಅವರು, ಈ ಹಿಂದೆ ಹುಲಿಗಳ ಸಂಖ್ಯೆ 2,226 ಇತ್ತು ಎಂದಿದ್ದಾರೆ.
“ಈಗ ಹುಲಿಗಳ ಸಂಖ್ಯೆ 2,976 ಆಗಿದೆ. ನಾನು ನಮ್ಮ ಇಡೀ ಪರಿಸರ ವ್ಯವಸ್ಥೆಯ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುತ್ತಿದ್ದೇವೆ. ಕಳೆದ ನಾಲ್ಕು ವರ್ಷಗಳಲ್ಲಿ ಹುಲಿಗಳ ಸಂಖ್ಯೆ 750 ರಷ್ಟು ಹೆಚ್ಚಾಗಿದೆ” ಎಂದಿದ್ದಾರೆ.
ಹುಲಿಗಳು, ಸಿಂಹಗಳು, ಆನೆಗಳು, ರೈನೋಸ್ಗಳು ಭಾರತದ ಆಸ್ತಿಗಳು. ಪ್ರಾಣಿಗಳ ಸಾವಿನ ಬಗ್ಗೆ ವರದಿಗಳು ಬಂದರೆ ನಾವು ಗಂಭೀರವಾದ ರೀತಿಯಲ್ಲಿ ವಿಶೇಷ ತನಿಖೆ ನಡೆಸುತ್ತೇವೆ ಎಂದಿದ್ದಾರೆ.
ಭಾರತದಲ್ಲಿ 2007 ಮತ್ತು 2017 ರ ನಡುವೆ ಅರಣ್ಯಗಳ ಭೂಪ್ರದೇಶ 17,374 ಚದರ ಅಡಿಯಷ್ಟು ಹೆಚ್ಚಾಗಿದೆ ಎಂದಿದ್ದಾರೆ.
“2015 ಮತ್ತು 2017 ರ ನಡುವೆ 10 ವರ್ಷಗಳ ಅವಧಿಯಲ್ಲಿ ಭಾರತದ ಅರಣ್ಯ ಭೂಪ್ರದೇಶವು 6,788 ಚದರ ಅಡಿಯಷ್ಟು ಹೆಚ್ಚಾಗಿದೆ” ಎಂದಿದ್ದಾರೆ.
ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ಮತ್ತು ಕೇರಳದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಅರಣ್ಯ ಭೂ ಪ್ರದೇಶಗಳು ಹೆಚ್ಚಾಗಿವೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.