ಕೊಚ್ಚಿ: ಸಬ್ ಲೆಫ್ಟಿನೆಂಟ್ ಶಿವಾಂಗಿ ಅವರು ಸೋಮವಾರ ಭಾರತೀಯ ನೌಕಾಸೇನೆಯ ಮೊದಲ ಮಹಿಳಾ ಪೈಲಟ್ ಆಗಿ ನಿಯೋಜನೆಗೊಂಡಿದ್ದಾರೆ.
ಬಿಹಾರದ ಮುಜಾಫರ್ಪುರದವರಾದ ಶಿವಾಂಗಿ ಅವರು ಪ್ರಾಥಮಿಕ ತರಬೇತಿಯ ಬಳಿಕ 2018ರಲ್ಲಿ ನೌಕಾಪಡೆಯನ್ನು ಸೇರ್ಪಡೆಗೊಂಡರು. ಸೋಮವಾರ ಇವರು ಕೊಚ್ಚಿಯಲ್ಲಿ ಕಾರ್ಯಾಚರಣಾ ಕರ್ತವ್ಯಕ್ಕೆ ಹಾಜರಾದರು. ಡಾರ್ನಿಯರ್ ಸರ್ವಿಲೆನ್ಸ್ ಏರ್ಕ್ರಾಫ್ಟ್ ಅನ್ನು ಹಾರಿಸಲಿದ್ದಾರೆ.
ಕೊಚ್ಚಿಯಲ್ಲಿ ಕಾರ್ಯಾಚರಣಾ ಕರ್ತವ್ಯಕ್ಕೆ ಸೇರ್ಪಡೆಗೊಂಡ ಬಳಿಕ ತಮ್ಮ ಸಾಧನೆಯ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿದ ಅವರು, “ನನಗೆ ಮತ್ತು ನನ್ನ ಹೆತ್ತವರಿಗೆ ಇದು ನಿಜಕ್ಕೂ ಹೆಮ್ಮೆಯ ಕ್ಷಣ. ಇದು ನಿಜಕ್ಕೂ ವಿಭಿನ್ನ ಭಾವನೆ. ಹಲವು ವರ್ಷಗಳಿಂದ ನಾನು ನನ್ನನ್ನು ಸಜ್ಜುಗೊಳಿಸುತ್ತಿದ್ದೇನೆ. ಕೊನೆಗೂ ಅಂದುಕೊಂಡಿದ್ದನ್ನು ಸಾಧಿಸಿದೆ. ಮೂರನೇ ಹಂತದ ತರಬೇತಿ ಕೊನೆಗೊಳಿಸುವತ್ತ ಲಕ್ಷ್ಯ ವಹಿಸುತ್ತಿದ್ದೇನೆ” ಎಂದಿದ್ದಾರೆ.
“ನೌಕೆಯಲ್ಲಿ ಮಹಿಳೆಯರು ಹಿಂದಿನಿಂದಲೂ ಇದ್ದಾರೆ. ಆದರೆ ಕಾಕ್ಪಿಟ್ನಲ್ಲಿ ಮಹಿಳೆಯರು ಇರಲಿಲ್ಲ. ಆದರೆ ಅಬ್ಸರ್ವರ್ಸರ್ ಆಗಿ ಇದ್ದರು. ಆದರೆ ನನ್ನ ಮೂಲಕ ಕಾಕ್ಪಿಟ್ನಲ್ಲಿ ಮಹಿಳೆಯರ ಪ್ರವೇಶ ಆಗುತ್ತಿದೆ. ರಕ್ಷಣಾ ಪಡೆಗೆ ಸೇರ್ಪಡೆಗೊಳ್ಳಲು ಇಚ್ಛೆ ಪಡುವ ಮಹಿಳೆಯರಿಗೆ ಇದು ಅವಕಾಶದ ಬಾಗಿಲನ್ನು ತೆರೆಯಲಿದೆ. ಆ ಮಹಿಳೆಯರು ಹೆಲಿಕಾಪ್ಟರ್ ಮತ್ತು ಯುದ್ಧ ವಿಮಾನಗಳನ್ನು ಹಾರಿಸಲೂಬಹುದು” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.