ನವದೆಹಲಿ: ಲೋಕಸಭಾ ಸಂಸದರುಗಳು 28 ಖಾಸಗಿ ಸದಸ್ಯರ ಮಸೂದೆಗಳನ್ನು ಮಂಡಿಸಿದ್ದಾರೆ. ಸರ್ಕಾರದ ಅಧಿಕೃತ ಅಜೆಂಡಾದಲ್ಲಿ ಇಲ್ಲದ ಸಾರ್ವಜನಿಕ ಮಸೂದೆಗಳನ್ನು ಖಾಸಗಿ ಸದಸ್ಯರ ಮಸೂದೆ ಎಂದು ಕರೆಯಲಾಗುತ್ತದೆ.
ಪ್ರಸ್ತುತ ಲೋಕಸಭೆಯಲ್ಲಿ ಒಟ್ಟು 28 ಖಾಸಗಿ ಸದಸ್ಯರ ಮಸೂದೆಗಳನ್ನು ಮಂಡನೆಗೊಳಿಸಲಾಗಿದೆ. ಈ ಮಸೂದೆಗಳಲ್ಲಿ ಕೆಲವು ಕಲಂ 44 ರದ್ಧತಿ, ಬಡ ವಿದ್ಯಾರ್ಥಿಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ, ಅಂಗನವಾಡಿ ಅಥವಾ ಗ್ರಾಮೀಣ ಶಿಶುಕಲ್ಯಾಣ ಕಾರ್ಮಿಕರಿಗೆ ಖಾಯಂ ಉದ್ಯೋಗ, ಚಹಾ ಕಾರ್ಮಿಕರಿಗೆ ಸಮರ್ಪಕ ವೇತನ, ಕ್ರೀಡೆಯನ್ನು ಮೂಲಭೂತ ಹಕ್ಕಾಗಿಸುವುದು ಇತ್ಯಾದಿ ಪ್ರಸ್ತಾಪಗಳನ್ನು ಮುಂದಿಟ್ಟು ಖಾಸಗಿ ಮಸೂದೆಗಳನ್ನು ಮಂಡನೆಗೊಳಿಸಲಾಗಿದೆ.
ಆದರೆ ಮಂಡನೆಗೊಂಡ ಖಾಸಗಿ ಮಸೂದೆಗಳು ಅಂಗೀಕಾರವಾಗುವುದು ತೀರ ವಿರಳ ಮತ್ತು ಕಷ್ಟದಾಯಕವಾಗಿದೆ. ಕಳೆದ 70 ವರ್ಷಗಳಲ್ಲಿ ಕೇವಲ 15 ಖಾಸಗಿ ಮಸೂದೆಗಳು ಕಾನೂನಾಗಿ ಪರಿವರ್ತನೆಗೊಂಡಿವೆ ಎಂದು ಲೋಕಸಭೆಯ ಮಾಜಿ ಕಾರ್ಯದರ್ಶಿ ಸುಭಾಷ್ ಕಶ್ಯಪ್ ಹೇಳಿದ್ದಾರೆ.
ಉಭಯ ಸದನಗಳಲ್ಲೂ ಖಾಸಗಿ ಮಸೂದೆಯನ್ನು ಮಂಡಿಸಬಹುದಾಗಿದೆ. ಸರ್ಕಾರದ ಮಸೂದೆಯ ಪ್ರಕ್ರಿಯೆಯೇ ಇದಕ್ಕೆ ಕೂಡ ಇರುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.