ನವದೆಹಲಿ: ಅನುದಾನಗಳನ್ನು ಸಮರ್ಪಕವಾಗಿ ಮತ್ತು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳುವ ಸಲುವಾಗಿ ಮತ್ತು ಮೂಲ ಆಯವ್ಯಯವನ್ನು ವೃದ್ಧಿಸುವ ಸಲುವಾಗಿ ರಕ್ಷಣಾ ಸಚಿವಾಲಯವು ನೂತನ ಬಜೆಟ್ ಮಾದರಿಯನ್ನು ಸಿದ್ಧಪಡಿಸುತ್ತಿದೆ. ಈ ಬಜೆಟ್ ಮಾದರಿಯು ಐದು ವರ್ಷಗಳ ಮಿಲಿಟರಿ ಖರೀದಿಯ ಸಮಗ್ರ ಯೋಜನೆಯನ್ನು ಒಳಗೊಂಡಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.
ಪ್ರಸ್ತುತ ರಕ್ಷಣೆಗಾಗಿ ಇರುವ ಬಜೆಟ್ ಮೊತ್ತ 3.18 ಲಕ್ಷ ರೂಪಾಯಿಗಳು. ಇದು ಜಿಡಿಪಿಯ ಶೇ.1.6ರಷ್ಟು ಮಾತ್ರ. ಇದು ಹಲವು ದಶಕಗಳಿಂದ ಅತಿ ಕಡಿಮೆ ಎಂದು ಹೇಳಲಾಗಿದೆ. 1962 ರಿಂದಲೂ ಇದು ಅತಿ ಕಡಿಮೆ ಎಂದು ತಜ್ಞರುಗಳು ಅಭಿಪ್ರಾಯಿಸಿದ್ದಾರೆ.
ಪ್ರಸ್ತುತ ಬಜೆಟ್ ಮಾದರಿಯನ್ನು ಅನ್ನು ಐದು ವರ್ಷಗಳ ಆಧುನಿಕರಣ ಯೋಜನೆಗೆ ಅನ್ವಯವಾಗುವಂತೆ ಯೋಚಿಸಲಾಗುತ್ತಿದೆ ಮತ್ತು ಇದು ರಕ್ಷಣಾ ಪಡೆಗಳಿಗೆ ಅತಿ ಅವಶ್ಯಕ ಎಂದು ಮೂಲಗಳು ತಿಳಿಸಿವೆ.
ಭವಿಷ್ಯದ ಬಜೆಟ್ ಮೀಸಲುಗಳಲ್ಲಿ ಬದಲಾವಣೆಯನ್ನು ತರುವ ಸಲುವಾಗಿ ಐದು ವರ್ಷಗಳ ರಕ್ಷಣಾ ಖರೀದಿಗೆ ಸಂಬಂಧಿಸಿದಂತೆ ತಮ್ಮ ಯೋಜನೆಗಳನ್ನು ತಿಳಿಸುವಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೇನಾಪಡೆಗಳಿಗೆ ತಿಳಿಸಿದ್ದಾರೆ ಎಂದು ಹೇಳಲಾಗಿದೆ.
ಭವಿಷ್ಯದಲ್ಲಿ ಅನುದಾನಗಳು ಉತ್ತಮ ಬಳಕೆಗಾಗಿ ಹೊಸ ಬಜೆಟ್ ಮಾದರಿಯನ್ನು ಸಿದ್ಧಪಡಿಸಲಾಗುತ್ತಿದೆ. ವರ್ಷಾಂತ್ಯದಲ್ಲಿ ಅನುದಾನದ ಕೊರತೆ ಉಂಟಾಗಬಾರದು ಎಂಬ ಉದ್ದೇಶವೂ ಇದರ ಹಿಂದಿದೆ. ಇದು ಖರೀದಿಗಳಲ್ಲಿನ ಪರಿಣಾಮಕಾರಿತ್ವವನ್ನು ವೃದ್ಧಿಸಲಿದೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ ರಕ್ಷಣಾ ಬಜೆಟ್ ಅನ್ನು ಜಿಡಿಪಿ ಆಧಾರಿತವಾಗಿ ಸಿದ್ಧಪಡಿಸಲಾಗುತ್ತಿತ್ತು. ಜಿಡಿಪಿಯಲ್ಲಿ ಏರಿಳಿತವಾಗುತ್ತಿದ್ದಂತೆ ಬಜೆಟ್ನಲ್ಲಿ ಏರಿಳಿತಗಳು ಆಗುತ್ತಿತ್ತು. ಇದೀಗ ಶಸ್ತ್ರಾಸ್ತ್ರ ಪಡೆಗಳ ಅವಶ್ಯಕತೆಗಳನ್ನು ನೋಡಿಕೊಂಡು ಖರೀದಿ ಮಾಡಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.