ಕಠ್ಮಂಡು : ನೇಪಾಳದ ಸುಪ್ರಸಿದ್ಧ ದೇಗುಲ ಪಶುಪತಿನಾಥ ದೇಗುಲ ಮಂಡಳಿಗೆ ಭಾರತವು ಎರಡು ಎಲೆಕ್ಟ್ರಿಕ್ ವಾಹನಗಳನ್ನು ಉಡುಗೊರೆಯಾಗಿ ನೀಡಿದೆ. ದಿವ್ಯಾಂಗ ಜನರಿಗೆ ಮತ್ತು ಹಿರಿಯ ನಾಗರಿಕರಿಗೆ ಸಹಾಯಕವಾಗಲಿ ಎಂಬ ನಿಟ್ಟಿನಲ್ಲಿ ಈ ಉಡುಗೊರೆಯನ್ನು ನೀಡಲಾಗಿದೆ.
ಭಾರತದ ಗಯಮ್ ಮೋಟಾರ್ ವರ್ಕ್ಸ್ ಈ ವಾಹನವನ್ನು ತಯಾರಿಸಿದ್ದು, ಕಟ್ಮಂಡುವಿನಲ್ಲಿ ಇರುವ ಭಾರತೀಯ ಮಹಿಳಾ ಸಂಘಟನೆಯ ಅಧ್ಯಕ್ಷೆ ನಮೃತ ಪುರಿ ದೇಗುಲ ಮಂಡಳಿಗೆ ಇದನ್ನು ಹಸ್ತಾಂತರ ಮಾಡಿದ್ದಾರೆ. ಈ ವಾಹನವು ಇಬ್ಬರು ಮಹಿಳೆಯರಿಗೆ ಉದ್ಯೋಗ ಅವಕಾಶವನ್ನು ಕಲ್ಪಿಸಿಕೊಡಲಿದೆ ಎಂದು ಅವರು ಹೇಳಿದ್ದಾರೆ.
“ಎಲೆಕ್ಟ್ರಿಕ್ ವಾಹನದ ಹಸ್ತಾಂತರ ಉಭಯ ದೇಶಗಳ ಮತ್ತು ಜನರ ನಡುವಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಬಾಂಧವ್ಯವನ್ನು ಉಳಿಸುವ ನಿಟ್ಟಿನಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಇದು ಉಭಯ ದೇಶಗಳನ್ನು ಇನ್ನಷ್ಟು ಹತ್ತಿರಕ್ಕೆ ತರಲಿದೆ” ಎಂದಿದ್ದಾರೆ.
ಈ ವಾಹನವು 8 ಸೀಟುಗಳನ್ನು ಹೊಂದಿದ್ದು, ಹೈಟ್ ಅಂಡ್ ಲೀಥಿಯಂ ಐಯಾನ್ ಬ್ಯಾಟರಿ ಚಾಲಿತವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.