News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮಕ್ಕಳಿಗಾಗಿ ಆ್ಯಪ್ ಆಧಾರಿತ ಕೋಡಿಂಗ್ ಪ್ರೋಗ್ರಾಂ ಪ್ರಾರಂಭಿಸಿದ ಕೇಂದ್ರ

ನವದೆಹಲಿ: ಪ್ರಧಾನಮಂತ್ರಿಯ ಪ್ರಧಾನ ವೈಜ್ಞಾನಿಕ ಸಲಹೆಗಾರ ವಿಜಯರಾಘವನ್ ಅವರ ಕಚೇರಿ ಸೋಮವಾರ ಮಕ್ಕಳಿಗಾಗಿ ಎರಡು ವಾರಗಳ ಕೋಡಿಂಗ್ ಪ್ರೋಗ್ರಾಂನ್ನು ಪ್ರಾರಂಭಿಸಿದೆ. ‘ಕೋಡ್ ಇಂಡಿಯಾ’ ಎಂಬ ಹೆಸರಿನ ಈ ಕಾರ್ಯಕ್ರಮವು ಅಪ್ಲಿಕೇಶನ್ ಆಧಾರಿತವಾಗಿದೆ.

ದೇಶದಾದ್ಯಂತದ ಮಾಧ್ಯಮಿಕ ಮತ್ತು ಇಂಟರ್ಮೀಡಿಯೇಟ್ ಮಟ್ಟದ ವಿದ್ಯಾರ್ಥಿಗಳಿಗಾಗಿ ಈ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ಕೋಡ್ ಇಂಡಿಯಾ ಮೂಲಕ ವಿದ್ಯಾರ್ಥಿಗಳು ಪ್ರೋಗ್ರಾಮಿಂಗ್ ಕೌಶಲ್ಯ ಮತ್ತು ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸುವ ತರಬೇತಿಗಳನ್ನು ಪಡೆಯಲಿದ್ದಾರೆ. ‌ಬಿಸಿನೆಸ್, ನ್ಯೂರೋಸೈನ್ಸ್, ನ್ಯೂಕ್ಲಿಯರ್ ಫಿಸಿಕ್ಸ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಏರೋಸ್ಪೇಸ್ ಮತ್ತು ಇತರ ವಲಯಗಳ ಅಪ್ಲಿಕೇಶನ್ಸ್­ಗಳನ್ನು ಅಭಿವೃದ್ಧಿಪಡಿಸುವುದನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡಲಾಗುತ್ತಿದೆ.

ಈ ಬಗ್ಗೆ ಮಾಹಿತಿ ನೀಡಿರುವ ರಾಘವನ್, ” ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್‌ಗೆ ಡಾಟಾ ಇಂಧನವಿದ್ದಂತೆ. ಡ್ರೈವರ್ ಸೀಟಿನಲ್ಲಿ ಕುಳಿತು ನಾವು ಡಾಟಾಗಳನ್ನು ಹ್ಯಾಂಡಲ್ ಮಾಡಬೇಕಾಗುತ್ತದೆ. ಕೋಡ್ ಇಂಡಿಯಾ ಕಾರ್ಯಕ್ರಮವು ನಮ್ಮ ಶಾಲಾ ಮಕ್ಕಳಿಗೆ ಅತ್ಯಾಧುನಿಕ ಕಂಪ್ಯೂಟರ್ ಸೈನ್ಸ್ ಬಗೆಗಿನ ಮೂಲಭೂತ ಅಧ್ಯಯನಗಳನ್ನು ಕಲಿಯಲು ಅವಕಾಶಗಳ ಬಾಗಿಲನ್ನು ತೆರೆಯಲಿದೆ. ಈ ಕಾರ್ಯಕ್ರಮವು ವಿದ್ಯಾರ್ಥಿಗಳನ್ನು ಶಿಸ್ತಿನೊಂದಿಗೆ ಭವಿಷ್ಯಕ್ಕೆ ಸಿದ್ಧಪಡಿಸಲಿದೆ” ಎಂದಿದ್ದಾರೆ.

ವಿವಿಧ ಪರಿಣತರು ಮತ್ತು ತಜ್ಞರು ಮಕ್ಕಳಿಗೆ ತರಬೇತಿಯನ್ನು ನೀಡಲಿದ್ದಾರೆ. ವಿವಿಧ ಅಂತರರಾಷ್ಟ್ರೀಯ ಮತ್ತು ದೇಶೀಯ ವಿಜ್ಞಾನ ಸಂಸ್ಥೆಗಳ ತಜ್ಞರೊಂದಿಗೆ ಸಂವಹನ ನಡೆಸುವ ಅವಕಾಶವು ಮಕ್ಕಳಿಗೆ ಲಭಿಸಲಿದೆ. ಇಂಗ್ಲಿಷ್ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ತರಬೇತಿ ನಡೆಯಲಿದೆ.

ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಮಾಡೆಲ್ ಕರಿಕ್ಯುಲಂ ಅನ್ನು ಅಭಿವೃದ್ಧಿಪಡಿಸಲು ಕೋಡ್ ಇಂಡಿಯಾವನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ, ಬಳಿಕ ಈ ಕರಿಕ್ಯುಲಂ ಅನ್ನು ಶೈಕ್ಷಣಿಕವಾಗಿ ಅಳವಡಿಸಲಾಗುತ್ತದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top