ಬೆಂಗಳೂರು: ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ನವೆಂಬರ್ 27 ಮತ್ತು ಡಿಸೆಂಬರ್ 1 ರ ನಡುವೆ 440 ಮೆಗಾವ್ಯಾಟ್ ಪರಮಾಣು ವಿದ್ಯುತ್ ಉತ್ಪಾದನೆ ಆರಂಭಗೊಳ್ಳಲಿದೆ ಎಂದು ಪವರ್ ಸಿಸ್ಟಮ್ ಆಪರೇಷನ್ ಕಾರ್ಪೊರೇಷನ್ ಲಿಮಿಟೆಡ್ ಮೂಲಗಳು ತಿಳಿಸಿವೆ.
ಭಾರತದ ಪರಮಾಣು ವಿದ್ಯುತ್ ಕಾರ್ಯನಿರ್ವಾಹಕ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ಗೆ ಸೇರಿದ 220 ಮೆಗಾವ್ಯಾಟ್ನ ಎರಡು ಘಟಕಗಳು ಕಾರ್ಯಾರಂಭ ಮಾಡಲಿವೆ.
2019 ರ ನವೆಂಬರ್ 5ರಂದು ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದ ಕರ್ನಾಟಕದ ಕೈಗಾ ಜನರೇಟಿಂಗ್ ಸ್ಟೇಶನ್ನ 220 ಮೆಗಾವ್ಯಾಟ್ ಸಾಮರ್ಥ್ಯದ ಮೂರನೇ ಘಟಕವು ಕಾರ್ಯಾಚರಣೆಯನ್ನು ಆರಂಭಿಸಲಿದೆ.
2018ರ ಜನವರಿಯಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ ತಮಿಳುನಾಡಿನ ಮದ್ರಾಸ್ ಅಟೊಮಿಕ್ ಪವರ್ ಸ್ಟೇಷನ್ನ 220 ಮೆಗಾವ್ಯಾಟ್ ಸಾಮರ್ಥ್ಯದ ಘಟಕವು ಡಿಸೆಂಬರ್ 1 ರಂದು ಕಾರ್ಯಾಚರಣೆಯನ್ನು ಆರಂಭಗೊಳಿಸಲಿದೆ.
ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್, ಕೈಗಾ ಜನರತಿಂಗ್ ಸ್ಟೇಶನ್ನಲ್ಲಿ 220 ಮೆಗಾವ್ಯಾಟ್ ಮತ್ತು ಮದ್ರಾಸ್ ಆಟೋಮಿಕ್ ಪವರ್ ಸ್ಟೇಷನ್ನಲ್ಲಿ 220 ಮೆಗಾವ್ಯಾಟ್ ಘಟಕಗಳನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.