ಚೆನ್ನೈ: ತಮಿಳುನಾಡು ಚೆನ್ನೈನ 6 ವರ್ಷದ ಬಾಲಕಿ ಸರಹ ಕಣ್ಣಿಗೆ ಬಟ್ಟೆಯನ್ನು ಕಟ್ಟಿಕೊಂಡು ರುಬಿಕ್ ಕ್ಯೂಬ್ ಫಝಲ್ ಪರಿಹರಿಸಿದ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾಳೆ.
ಶಾಲಾ ಸಮವಸ್ತ್ರ ಧರಿಸಿದ್ದ ಬಾಲಕಿ (2×2) ರುಬಿಕ್ಸ್ ಕ್ಯೂಬ್ ಅನ್ನು ವೈರಮುತ್ತು ಅವರ ಕವಿತೆಯನ್ನು ಎರಡು ನಿಮಿಷ 7 ಸೆಕೆಂಡುಗಳ ಕಾಲ ವಾಚಿಸುತ್ತಾ ಪರಿಹರಿಸಿದ್ದಾಳೆ.
ಅತಿ ಚಿಕ್ಕ ವಯಸ್ಸಿನಲ್ಲೇ ಅಪ್ರತಿಮ ಪ್ರತಿಭೆಯನ್ನು ಹೊಂದಿರುವ ಬಗ್ಗೆ ಸರಹಳ ಬಗ್ಗೆ ಆಕೆಯ ತಂದೆ ಚಾರ್ಲ್ಸ್ ಅವರು ಹೆಮ್ಮೆಯ ಮಾತುಗಳನ್ನು ಆಡಿದ್ದು, “ಚಿಕ್ಕವಯಸ್ಸಿನಲ್ಲೇ ಸರಹ ಕಷ್ಟದಾಯಕ ಪ್ರಶ್ನೆಗಳಿಗೆ ಉತ್ತರಿಸುವುದರಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಳು. ಹೀಗಾಗಿ ನಾವು ಆಕೆಗೆ ಸಮರ್ಪಕ ತರಬೇತಿಯನ್ನು ನೀಡಲು ತರಗತಿಗೆ ಹಾಕಿದೆವು” ಎಂದಿದ್ದಾರೆ.
“ಈಗಾಗಲೇ ಈಕೆ ವಿಶ್ವದಾಖಲೆಯನ್ನು ಮಾಡಿದ್ದು, ಗಿನ್ನೆಸ್ ದಾಖಲೆ ಪುಟಕ್ಕೂ ಸೇರಿಸುವ ಪ್ರಯತ್ನ ನಡೆಸುತ್ತಿದ್ದಾಳೆ” ಎಂದಿದ್ದಾರೆ.
ರೂಬಿಕ್ ಕ್ಯೂಬ್ ಅನ್ನು ಮೂಲತಃ ಮ್ಯಾಜಿಕ್ ಕ್ಯೂಬ್ ಎಂದು ಕರೆಯಲಾಗುತ್ತದೆ. ಇದು 3-D ಮೆಕ್ಯಾನಿಕಲ್ ಟ್ವಿಸ್ಟಿ ಫಝಲ್ ಆಗಿದ್ದು, ಹಂಗೇರಿಯನ್ ಪ್ರೊಫೆಸರ್ ಏರ್ನೋ ರೂಬಿಕ್ ಇದನ್ನು 1974ರಲ್ಲಿ ಅನ್ವೇಷಿಸಿದ್ದಾರೆ.
Chennai: A 6-year-old girl, Sarah was declared by TamilNadu Cube Association, ‘world’s youngest genius’ solving maximum (2×2) Rubik’s cube blindfolded&reciting poems in the least time. She solved the puzzle in 2 min 07 sec in her attempt to create a Guinness World Record. pic.twitter.com/dWtDtZJEa0
— ANI (@ANI) November 22, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.